ಬ್ರೇಕಿಂಗ್ ನ್ಯೂಸ್
11-09-25 08:52 pm Mangalore Correspondent ಕ್ರೈಂ
ಮಂಗಳೂರು, ಸೆ.10 : ಸಾಮಾನ್ಯವಾಗಿ ಯಾವುದೇ ಅಪರಾಧ ಪ್ರಕರಣಗಳಲ್ಲಿ ಕೋರ್ಟಿನಿಂದ ಜಾಮೀನು ಪಡೆಯಬೇಕಿದ್ದರೆ ಆರ್ ಟಿಸಿ ಇರುವ ವ್ಯಕ್ತಿಯದ್ದೇ ಜಾಮೀನು ಬೇಕಾಗುತ್ತದೆ. ಆದರೆ ವ್ಯಕ್ತಿಯೊಬ್ಬ ಪದೇ ಪದೇ ಪ್ರಕರಣಗಳಲ್ಲಿ ಸಿಕ್ಕಿಬಿದ್ದರೆ ಅಥವಾ ಆಸ್ತಿಪತ್ರ ಹೊಂದಿರುವ ಸಂಬಂಧಿಕರು ಜಾಮೀನು ನೀಡಲು ಬಾರದೇ ಇದ್ದರೆ ಅಂಥವರಿಗೆಂದೇ ನಕಲಿ ಆಧಾರ್ ಮತ್ತು ಆರ್ ಟಿಸಿಗಳನ್ನು ತಯಾರಿಸಿ ಕೋರ್ಟಿಗೆ ಸಲ್ಲಿಸಿ ಪೊಲೀಸರು ಮತ್ತು ನ್ಯಾಯಾಲಯವನ್ನೇ ಯಾಮಾರಿಸುವ ಜಾಲ ಮಂಗಳೂರಿನಲ್ಲಿ ಸಕ್ರಿಯವಾಗಿದೆ.
ನಕಲಿ ಆಧಾರ್, ಪಹಣಿ ಪತ್ರಗಳನ್ನು ಕೋರ್ಟಿಗೆ ಸಲ್ಲಿಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಉರ್ವಾ ಮತ್ತು ಸಿಸಿಬಿ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಆದರೆ ಜಾಲದಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳ ಪತ್ತೆ ಸುಲಭ ಇರಲಿಲ್ಲ. ಹೀಗಾಗಿ ಹಲವು ಸಮಯದಿಂದ ಹೊಂಚು ಹಾಕಿ ಇಬ್ಬರು ಖದೀಮರನ್ನು ಸಿಸಿಬಿ ಪೊಲೀಸರು ಬಲೆಗೆ ಕೆಡವಿದ್ದಾರೆ.

ಮುಲ್ಕಿ ಬಪ್ಪನಾಡು ಮೂಲದ ಅಬ್ದುಲ್ ರಹಿಮಾನ್ ಮತ್ತು ಮತ್ತು ನಿಶಾಂತ್ ಎಂಬಿಬ್ಬರನ್ನು ಸದ್ಯಕ್ಕೆ ಬಂಧಿಸಲಾಗಿದ್ದು, ಜಾಲದಲ್ಲಿ ವಕೀಲರು, ಜೆರಾಕ್ಸ್ ಅಂಗಡಿಯವರು ಸೇರಿದಂತೆ ಹಲವಾರು ಮಂದಿ ಸಕ್ರಿಯರಾಗಿದ್ದು ಇವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಮಂಗಳೂರಿನ ಕೆಲವು ಜೆರಾಕ್ಸ್ ಅಂಗಡಿಗಳಿಗೆ ಅಸಲಿ ವ್ಯಕ್ತಿಗಳ ಆಧಾರ್ ಕಾರ್ಡ್ ಗಳನ್ನೇ ತೆಗೆದಿಟ್ಟು ಯಾಮಾರಿಸುವ ಕೆಲಸವೂ ಆಗುತ್ತಿದೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಅಬ್ದುಲ್ ರಹಿಮಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ನಗರದ ಪಿವಿಎಸ್ ವೃತ್ತದ ಬಳಿಯ ಆನ್ಲೈನ್ ಕಂಪ್ಯೂಟರ್ ಸೆಂಟರಿನಲ್ಲಿ ಕೆಲಸ ಮಾಡುತ್ತಿರುವ ನಿಶಾಂತ್ ಎಂಬಾತ ಕಂಪ್ಯೂಟರ್ ನಲ್ಲಿ ಆಧಾರ್ ಕಾರ್ಡ್, ಹೆಸರು, ಪೋನ್ ನಂಬರ್, ವಿಳಾಸ ಮತ್ತು ಫೋಟೋಗಳನ್ನು ಎಡಿಟ್ ಮಾಡಿ ಬೇರೆ ಬೇರೆ ಇಲಾಖೆಗಳಿಗೆ ಹಾಗು ನ್ಯಾಯಾಲಯದಲ್ಲಿ ಅಗತ್ಯವಿರುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವವರಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾನೆ.
ಪೊಲೀಸರ ವಿಚಾರಣೆ ವೇಳೆ ಆರೋಪಿಗಳ ಬಳಿ ವ್ಯಾಸರಾಯ ಆಚಾರಿ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ (487693387559) ಪತ್ತೆಯಾಗಿದ್ದು, ಅದನ್ನು ಸ್ಕಾನ್ ಮಾಡಿ ನೋಡಿದಾಗ AADHAR: XXXX XXXX 0030 NAME: Dinakara Adress: 3-54, Ashwath Katte House, Panjikal, Dakshina Kannada, 574211 ಎಂಬುದಾಗಿ ತೋರಿಸಿದೆ. ಇದೇ ರೀತಿ ಆಧಾರ್ ಕಾರ್ಡ್ ಗಳನ್ನು ಬೇರೆ ಬೇರೆಯವರ ಹೆಸರಿನಲ್ಲಿ ಎಡಿಟ್ ಮಾಡಿ ಆಧಾರ್ ಕಾರ್ಡ್ ಗಳನ್ನು ನಕಲಿಯಾಗಿಸಿ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
A major fake document racket operating in Mangaluru has come to light, where forged Aadhaar cards and RTC (Record of Rights, Tenancy, and Crops) documents were being used to secure bail in criminal cases and to deceive government offices and courts.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 09:38 pm
HK News Desk
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
Vijay New CM: ತಮಿಳರ ಮುಖ್ಯಮಂತ್ರಿ ಆಗುತ್ತಲೇ ಜೋಸೆ...
10-05-26 12:26 pm
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am