ಬ್ರೇಕಿಂಗ್ ನ್ಯೂಸ್
05-09-25 08:36 pm Mangalore Correspondent ಕ್ರೈಂ
ಮಂಗಳೂರು, ಸೆ.5 : ಎಟಿಎಂ ಹೊಕ್ಕ ಕಳ್ಳನೊಬ್ಬ ಅದರ ಕ್ಯಾಶ್ ಬಾಕ್ಸ್ ಒಡೆದು ಹಣ ದೋಚಲು ಯತ್ನಿಸುತ್ತಿದ್ದಾಗಲೇ ದೆಹಲಿಯಿಂದ ಬಂದ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ಅಲರ್ಟ್ ಆಗಿ ಆರೋಪಿಯನ್ನು ಬಂಧಿಸಿದ ಘಟನೆ ಕೋಟೆಕಾರಿನಲ್ಲಿ ನಡೆದಿದೆ.
ಕೋಟೆಕಾರು ಬೀರಿಯ ಎಸ್ ಬಿಐ ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿ ಘಟನೆ ನಡೆದಿದ್ದು ಆರೋಪಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಾಗಪ್ಪ ಕೆರಳಟ್ಟಿ (41) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ನಸುಕಿನ 2.30ರ ವೇಳೆಗೆ ಆರೋಪಿ ಎಟಿಎಂ ಒಳಹೊಕ್ಕಿದ್ದು ಕ್ಯಾಶ್ ಬಾಕ್ಸ್ ಓಪನ್ ಮಾಡಲು ಯತ್ನಿಸಿದ್ದಾನೆ. ಕೈಯಲ್ಲಿದ್ದ ಆಯುಧ ಬಳಸಿ ಬಾಕ್ಸ್ ಓಪನ್ ಮಾಡಲು ನೋಡುತ್ತಿದ್ದಾಗ ಅಲರ್ಟ್ ಮೆಸೇಜ್ ಹೋಗಿತ್ತು.
ದೇಶಾದ್ಯಂತ ಎಟಿಎಂ ಕೇಂದ್ರಗಳ ಬಗ್ಗೆ ನಿಗಾ ಇಡುವ ದೆಹಲಿ ಕೇಂದ್ರಕ್ಕೆ ಮೆಸೇಜ್ ಬಂದಿದ್ದನ್ನು ಆಧರಿಸಿ ಅಲ್ಲಿನ ಸಿಬಂದಿ ರಂಜಿತ್, ಕೋಟೆಕಾರಿನ ಎಟಿಎಂ ನೋಡಿಕೊಳ್ಳುವ ದೀಪಕ್ ಅಮೀನ್ ಅವರಿಗೆ ಮಾಹಿತಿ ನೀಡಿದ್ದರು. ಇದರಂತೆ, ದೀಪಕ್ ಕೂಡಲೇ 112 ಸಂಖ್ಯೆಗೆ ದೂರು ರವಾನಿಸಿದ್ದರು. ದೂರು ಆಧರಿಸಿ ಉಳ್ಳಾಲ ಪೊಲೀಸರು ಅಲರ್ಟ್ ಆಗಿದ್ದು ಸ್ಥಳಕ್ಕೆ ಧಾವಿಸಿ ಕೋಟೆಕಾರು ಎಟಿಎಂ ಒಳಗಡೆ ಕ್ಯಾಶ್ ಬಾಕ್ಸ್ ಒಡೆಯಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ.
ಎಟಿಎಂ ಕೇಂದ್ರದಿಂದ ಬಂದ ಮಾಹಿತಿ ಆಧರಿಸಿ ಸಿಬಂದಿ ಮತ್ತು ಪೊಲೀಸರು ಸಕಾಲಿಕವಾಗಿ ಎಚ್ಚತ್ತಿದ್ದರಿಂದ ಎಟಿಎಂನಿಂದ ಹಣ ಕಳವು ಮಾಡುವ ಪ್ರಯತ್ನ ವಿಫಲಗೊಂಡಿದೆ.
An attempted ATM robbery in Kotekar was foiled in the early hours of Thursday after a real-time alert from Delhi prompted Ullal Police to act swiftly and arrest the accused. The incident occurred at the SBI ATM center in Beeri, Kotekar, where the accused, Nagappa Keralatti (41), a native of Kushtagi taluk in Koppal district, was caught red-handed while trying to break open the cash box inside the ATM.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 09:38 pm
HK News Desk
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
Vijay New CM: ತಮಿಳರ ಮುಖ್ಯಮಂತ್ರಿ ಆಗುತ್ತಲೇ ಜೋಸೆ...
10-05-26 12:26 pm
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am