ಬ್ರೇಕಿಂಗ್ ನ್ಯೂಸ್
01-09-25 01:58 pm Mangalore Correspondent ಕ್ರೈಂ
ಮಂಗಳೂರು, ಸೆ.1 : ಮನೆಯೊಂದರಲ್ಲಿ ಅಕ್ರಮ ಮದ್ಯ ತಯಾರಿ ನಡೆಸುತ್ತಿರುವ ಮಾಹಿತಿ ಮೇರೆಗೆ ಎಸಿಪಿ ವಿಜಯಕ್ರಾಂತಿ ನೇತೃತ್ವದಲ್ಲಿ ಕೊಣಾಜೆ ಪೊಲೀಸರು ಪಜೀರು ಗ್ರಾಮದ ಕಂಬಳಪದವು ಎಂಬಲ್ಲಿಗೆ ದಾಳಿ ನಡೆಸಿದ್ದು ಒಂದು ಲಕ್ಷ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಆ.31ರ ಮಧ್ಯಾಹ್ನ 12 ಗಂಟೆಗೆ ಉಳ್ಳಾಲ ತಾಲೂಕು ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾ ಕಾಳಿ ದೇವಸ್ಥಾನದ ರಸ್ತೆಯ ಮನೆಯೊಂದರಲ್ಲಿ ಆಕ್ರಮವಾಗಿ ಮದ್ಯ ತಯಾರಿಕೆ ನಡೆಸುತ್ತಿರುವುದಾಗಿ ಬಂದ ಮಾಹಿತಿಯಂತೆ ಪಂಚರನ್ನು ಕರೆಸಿ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಣವ್ ಶೆಣೈ ಮತ್ತು ಅನೂಷ್ ಎಂಬವರು ಮನೆಯಲ್ಲಿದ್ದು, ಅವರನ್ನು ಬಂಧಿಸಲಾಗಿದೆ. ಇವರು ವಿಸಿ ತೋಮಸ್ ಮತ್ತು ಮಣಿಕುಟ್ಟನ್ ಎಂಬವರೊಂದಿಗೆ ಸೇರಿಕೊಂಡು ಆಕ್ರಮ ಮದ್ಯ ತಯಾರಿಸುತ್ತಿದ್ದರು.
ಮನೆಯನ್ನು ಪರಿಶೀಲಿಸಿದ ಸಂದರ್ಭದಲ್ಲಿ ಸುಮಾರು 1,15,110 ರೂ. ಬೆಲೆಯ ಆಕ್ರಮ ಮದ್ಯ ತಯಾರಿಕೆಗೆ ಬಳಸುತ್ತಿದ್ದ ಮೂರು ಮೆಶಿನ್ ಗಳು, ಮಿಕ್ಸರ್ ಮೆಶಿನ್, ಅಕ್ರಮ ಮದ್ಯದ ಬಾಟ್ಲಿಗಳು, ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟ ಮಾಡುವ ಪರವಾನಿಗೆ ಇರುವ 8 MANSION HOUSE ಹೆಸರಿನ ಮದ್ಯದ ಬಾಟ್ಲಿಗಳು, ಮದ್ಯ ತಯಾರಿಕೆಗೆ ಬೇಕಾದ ಇತರ ಸೊತ್ತುಗಳು ಪತ್ತೆಯಾಗಿವೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 104/2025 ಕಲಂ 123 ಜೊತೆಗೆ 3(5) BNS 2023, ಮತ್ತು ಕಲಂ 13, 32, 34 KE ACT ಕಾಯ್ದೆಯಂತೆ ಪ್ರಕರಣ ದಾಖಲು ಮಾಡಲಾಗಿದೆ.
ಆರೋಪಿಗಳಾದ ಪ್ರಣವ್ ಪಿ. ಶೆಣೈ(24) ಕಾಸರಗೋಡು ಬೀಚ್ ರೋಡ್ ನಿವಾಸಿಯಾಗಿದ್ದು, ಅನೂಷ್ ಆರ್ (24) ಕಾಸರಗೋಡು ತಾಳಿಪಡ್ಪು ಅಡ್ಕದಬೈಲ್ ನಿವಾಸಿ. ತೋಮಸ್ ಮತ್ತು ಮಣಿಕುಟ್ಟನ್ ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ವಿಜಯಕ್ರಾಂತಿ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪ್ರಭಾರ ನಿರೀಕ್ಷಕರಾದ ವಿರೂಪಾಕ್ಷ, ಪಿಎಸ್ಐ ನಾಗರಾಜ್, ಸಿಬ್ಬಂದಿಗಳಾದ ಶೈಲೇಂದ್ರ, ರಮೇಶ್, ಬಸವನ ಗೌಡ ಮತ್ತು ರಮೇಶ್ ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.
In a major crackdown on illegal liquor production, the Konaje police, led by ACP Vijayakranti, raided a house in Kambalapadavu, Pajir village, under Ullal taluk, and seized liquor and equipment worth over ₹1 lakh. The raid was conducted based on a tip-off about unauthorized alcohol manufacturing taking place at the location. During the operation, police detained two individuals — Pranav P. Shenoy (24), a resident of Beach Road, Kasaragod, and Anoosh R. (24) from Talipadpu Adkad have been arrested.
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 10:01 pm
Mangalore Correspondent
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
01-09-25 09:21 pm
Udupi Correspondent
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm