ಬ್ರೇಕಿಂಗ್ ನ್ಯೂಸ್
26-08-25 05:24 pm HK News Desk ಕ್ರೈಂ
ನವದೆಹಲಿ, ಆ. 26 : ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯಾಮಾರಿಸಿ ಪಂಜಾಬ್ ಮೂಲದ ಸೈಬರ್ ವಂಚಕರು ಸುಮಾರು 350 ಕೋಟಿಗೂ ಹೆಚ್ಚಿನ ಮೊತ್ತದ ಹಣವನ್ನು ಕಿತ್ತುಕೊಂಡ ಘಟನೆ ನಡೆದಿದ್ದು ಮೂವರು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಪಂಜಾಬಿನಲ್ಲಿ ಬಂಧಿಸಿದ್ದಾರೆ.
ಅಮೃತಸರದಲ್ಲಿ ‘ಡಿಜಿಕಾಪ್ಸ್ ದಿ ಫ್ಯೂಚರ್ ಆಫ್ ಡಿಜಿಟಲ್’ ಹೆಸರಿನಲ್ಲಿ ಆರೋಪಿಗಳು ಕಾಲ್ ಸೆಂಟರ್ ಮಾಡಿಕೊಂಡಿದ್ದರು. 2023ರಿಂದ ಅಮೆರಿಕದ ನಾಗರಿಕರನ್ನು ಗುರಿಯಾಗಿಸಿ, ಅವರ ಕಂಪ್ಯೂಟರ್, ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಹಣವನ್ನು ಪೀಕಿಸಿದ್ದಾರೆ. ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಮಾಹಿತಿ ಆಧರಿಸಿ ಸಿಬಿಐ ವಂಚಕರ ಜಾಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಜಿಗರ್ ಅಹ್ಮದ್, ಯಶ್ ಖುರಾನಾ ಮತ್ತು ಇಂದರ್ ಜೀತ್ ಸಿಂಗ್ ಬಾಲಿ ಎಂದು ಗುರುತಿಸಲಾಗಿದೆ.
ಆರೋಪಿಗಳು ಮಾಲ್ ಸಾಫ್ಟ್ವೇರ್ ಬಳಸಿಕೊಂಡು ಅಮೆರಿಕದ ಪ್ರಜೆಗಳ ಕಂಪ್ಯೂಟರ್ ಮತ್ತು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದರು. ಬಳಿಕ, ಬ್ಯಾಂಕ್ನಲ್ಲಿರೋ ನಿಮ್ಮ ಹಣಕ್ಕೆ ತೊಂದರೆ ಇದೆ, ಕ್ರಿಪ್ಟೋ ಕರೆನ್ಸಿಗೆ ವರ್ಗಾಯಿಸಿ ಎಂದು ಹೇಳುತ್ತಿದ್ದರು. ಇವರದ್ದೇ ನಿಯಂತ್ರಣದಲ್ಲಿರುವ ಕ್ರಿಪ್ಟೋ ಕರೆನ್ಸಿಗೆ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾಯಿಸುತ್ತಿದ್ದಂತೆ ವಂಚಕರು ಅವನ್ನು ಎಗರಿಸುತ್ತಿದ್ದರು. ಅಮೆರಿಕದಿಂದ 40 ಮಿಲಿಯನ್ ಯುಎಸ್ ಡಾಲರ್ (350 ಕೋಟಿ ರು.) ಮೊತ್ತವನ್ನು ಕಿತ್ತುಕೊಂಡಿರುವ ಆರೋಪ ಇದೆ.
ಬಂಧಿತರಿಂದ 54 ಲಕ್ಷ ರೂ., ಎಂಟು ಮೊಬೈಲ್ಗಳು ಮತ್ತು ಲ್ಯಾಪ್ಟಾಪ್ಗಳು ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಲಾಗಿದೆ. ಆ.18 ರಂದು ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿತ್ತು. ಬಳಿಕ ಸಿಬಿಐ ಅಧಿಕಾರಿಗಳು ಅಮೃತಸರ ಮತ್ತು ದೆಹಲಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಅಮೃತಸರದ ಕಾಲ್ ಸೆಂಟರ್ ನಲ್ಲಿ 30 ಜನರು ಇದೇ ರೀತಿಯ ವಂಚನೆ ಕೆಲಸದಲ್ಲಿ ತೊಡಗಿದ್ದರು ಎಂಬ ಮಾಹಿತಿಯಿದ್ದು ಸಿಬಿಐ ಕಾರ್ಯಾಚರಣೆ ಮುಂದುವರಿಸಿದೆ.
In a major international cybercrime bust, the Central Bureau of Investigation (CBI) has arrested three individuals from Punjab for allegedly scamming American citizens out of over ₹350 crore (approximately USD 40 million) over a span of two years
27-06-26 04:21 pm
HK News Staffer
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 04:23 pm
HK News Staffer
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am
Mumbai Train Murder, Mangalore: ಮುಂಬೈ ಲೋಕಲ್ ಟ...
26-06-26 07:35 pm