ಬ್ರೇಕಿಂಗ್ ನ್ಯೂಸ್
25-08-25 04:39 pm Mangalore Correspondent ಕ್ರೈಂ
ಬಂಟ್ವಾಳ, ಆ.25 : ಹೆಸರಾಂತ ರಸಗೊಬ್ಬರ ಉತ್ಪಾದಕ ಸಂಸ್ಥೆಯ ಡೀಲರ್ ಶಿಪ್ ನೀಡುವುದಾಗಿ ನಂಬಿಸಿ ಶುಲ್ಕ ರೂಪದಲ್ಲಿ ಹಂತ ಹಂತವಾಗಿ ಹಣ ಪಡೆದು ಬಂಟ್ವಾಳದ ವ್ಯಕ್ತಿಯೊಬ್ಬರಿಗೆ 17.60 ಲಕ್ಷ ರೂ. ವಂಚಿಸಿರುವ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳದ ವಿಕ್ರಮ್ ಅವರು ಎಂಜಿನಿಯರಿಂಗ್ ಪದವಿ ಮುಗಿಸಿ ಮನೆಯಲ್ಲೇ ಇದ್ದರು. ಕಳೆದ ಜುಲೈ 4ರಂದು ಅವರ ಮೊಬೈಲ್ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಹೆಸರಾಂತ ರಸಗೊಬ್ಬರ ಕಂಪೆನಿಯ ರಿಲೇಶನ್ಶಿಪ್ ಮ್ಯಾನೇಜರ್ ನಿಲೇಶ್ ಮಿಶ್ರಾ ಎಂದು ಪರಿಚಯಿಸಿದ್ದು, ಕಂಪನಿಯ ಡೀಲರ್ ಶಿಪ್ ನೀಡುವುದಾಗಿ ನಂಬಿಸಿದ್ದ. ವಿಕ್ರಮ್ ಅದಕ್ಕೆ ಒಪ್ಪಿಗೆ ಸೂಚಿಸಿದ್ದರು. ಬಳಿಕ ಸಂಬಂಧಪಟ್ಟ ಅರ್ಜಿಗಳನ್ನು ಇ-ಮೇಲ್ಗೆ ಕಳುಹಿಸಿದ್ದು ಅದನ್ನು ಭರ್ತಿ ಮಾಡಿ ಬ್ಯಾಂಕ್ ವಿವರ ಸೇರಿ ವೈಯಕ್ತಿಕ ದಾಖಲೆಗಳನ್ನು ನೀಡಿದ್ದರು.
ನೋಂದಣಿ ಶುಲ್ಕವಾಗಿ 35 ಸಾವಿರ ರೂ. ಕಳುಹಿಸಿದ್ದರು. ಆನಂತರ, ಶುಲ್ಕ ರೂಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 17,60,810 ರೂ. ಕಳುಹಿಸುವಂತೆ ಮಾಡಿದ್ದರು. ಕಂಪೆನಿಯ ಉತ್ಪನ್ನಗಳ ಸಾಗಾಟ ಸಮಯದಲ್ಲಿ ಏನಾದರೂ ಸಮಸ್ಯೆಯಾದರೆ ಕರೆ ಮಾಡಿ ಎಂದು ಹೇಳಿ, ರಸಗೊಬ್ಬರ ಕಳಿಸಿಕೊಡುವುದಾಗಿ ವಾಹನ ಚಾಲಕರ ಮೊಬೈಲ್ ಸಂಖ್ಯೆಯನ್ನೂ ವಂಚಕರು ನೀಡಿದ್ದರು. ಆ.8ರಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ನಾವು ಬೆಂಗಳೂರಿಗೆ ಬಂದಿದ್ದು, 10ರಂದು ಮಡಂತ್ಯಾರಿನಲ್ಲಿರುವ ವಿಕ್ರಮ್ ಅವರ ಗೋದಾಮಿಗೆ ಬರುತ್ತೇವೆ ಎಂದು ತಿಳಿಸಿದ್ದರು. ಆದರೆ ಅವರು ಹೇಳಿದಂತೆ ಯಾವುದೇ ವಾಹನ ಬಂದಿರಲಿಲ್ಲ.
ಆ.11ರಂದು ವಿಕ್ರಮ್ ಅವರು ಕರೆ ಮಾಡಿದಾಗ ಎಲ್ಲವೂ ಸ್ವಿಚ್ ಆಫ್ ಆಗಿತ್ತು. ಅವರು ಕೊಟ್ಟಿದ್ದ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದಾಗ 'ನಿಮ್ಮ ಉತ್ಪನ್ನ ಬರುತ್ತಿದ್ದು, ಅಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಕರೆ ಸಿಗದೇ ಇರಬಹುದು ನಾವು ಅವರಿಗೆ ತಿಳಿಸುತ್ತೇವೆ' ಎಂದು ಹೇಳಿದ್ದರು. ಮುಂದೆ ಯಾವುದೇ ಕರೆ ಬರಲಿಲ್ಲ. ಇವರು ಕರೆ ಮಾಡಿದರೆ ಸ್ವಿಚ್ ಆಫ್ ಎಂಬ ಸಂದೇಶ ಬರುತ್ತಿದೆ. ಈ ಕುರಿತು ಸಂಶಯಗೊಂಡು ಬೇರೆಯವರಲ್ಲಿ ವಿಚಾರಿಸಿದಾಗ ಇದೊಂದು ಮೋಸದ ಜಾಲ ಎಂದು ತಿಳಿದುಬಂದಿದೆ ಎಂದು ಅವರು ಸೆನ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
A young engineering graduate from Bantwal has reportedly been defrauded of ₹17.6 lakh by fraudsters who promised him a dealership with a reputed fertilizer manufacturing company. A case has been registered at the Bantwal Town Police Station.
25-08-25 06:07 pm
HK News Desk
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 05:24 pm
Mangalore Correspondent
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
Fake Human Right, Rowdy Sheeter Madan Bugadi,...
24-08-25 10:49 pm
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am