ಬ್ರೇಕಿಂಗ್ ನ್ಯೂಸ್
06-08-25 08:02 pm Mangalore Correspondent ಕ್ರೈಂ
ಬೆಳ್ತಂಗಡಿ, ಆ.6: ಧರ್ಮಸ್ಥಳ ಬಳಿಯ ಪಾಂಗಾಳ ಎಂಬಲ್ಲಿ ಮೂವರು ಯೂಟ್ಯೂಬರ್ ಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು ಹಲ್ಲೆಗೀಡಾದವರು ಉಜಿರೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರ ಕೈಯಲ್ಲಿದ್ದ ಕ್ಯಾಮರಾವನ್ನು ಒಡೆದು ಹಾಕಲಾಗಿದೆ.
ಪಾಂಗಾಳದಲ್ಲಿರುವ ಸೌಜನ್ಯಾ ಕುಟುಂಬಸ್ಥರ ಮನೆಯ ಸಮೀಪ ಘಟನೆ ನಡೆದಿದೆ. ಬುಧವಾರ ಸಂಜೆ ಬಿಗ್‌ಬಾಸ್ ಖ್ಯಾತಿಯ ರಜತ್ ಸೌಜನ್ಯಾ ಮನೆಗೆ ಬಂದಿದ್ದು ಕುಟುಂಬ ಸದಸ್ಯರ ಜೊತೆಗೆ ಮಾತುಕತೆ ನಡೆಸಿದ್ದರು. ಇದೇ ವೇಳೆ, ನಾಲ್ಕು ಮಂದಿ ಯೂಟ್ಯೂಬ್ ನವರು ರಜತ್ ಹೇಳಿಕೆ ಪಡೆಯಲು ಬಂದಿದ್ದರು. ಈ ವೇಳೆ, ಸ್ಥಳೀಯ ಕೆಲವರು ಸೇರಿದ್ದು ಕುಡ್ಲ ರಾಂಪೇಜ್ ಯೂಟ್ಯೂಬರ್ ಅಜಯ್ ಅಂಚನ್ ಅವರನ್ನು ಪ್ರಶ್ನಿಸಿ ಜೋರು ಮಾಡಿದ್ದಾರೆ. ಈ ವೇಳೆ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದವರನ್ನೂ ಜೋರು ಮಾಡಿ ವಿಡಿಯೋ ಬಂದ್ ಮಾಡಿಸಿದ್ದಾರೆ. ಇದೇ ವೇಳೆ, ಯೂಟ್ಯೂಬರ್ ಮತ್ತು ಸ್ಥಳೀಯರ ನಡುವೆ ಮಾತಿಗೆ ಮಾತು ಬೆಳೆದು ಸ್ಥಳೀಯರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಎರಡೂ ಕಡೆಯ 50ಕ್ಕು ಹೆಚ್ಚು ಮಂದಿ ಸೇರಿದ್ದು ಬಳಿಕ ಪೊಲೀಸರು ಚದುರಿಸಿದ್ದಾರೆ.
ಅಜಯ್ ಅಂಚನ್, ಅಭಿಷೇಕ್, ವಿಜಯ್ ಮತ್ತು ಇನ್ನೊಬ್ಬ ಕ್ಯಾಮೆರಾ ಮ್ಯಾನ್ ಮೇಲೆ ಹಲ್ಲೆ ಆಗಿದೆ ಎನ್ನಲಾಗುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ, ಇವರ ಕೈಯಲ್ಲಿದ್ದ ಲಕ್ಷಾಂತರ ಬೆಲೆಬಾಳುವ ಕ್ಯಾಮರಾವನ್ನು ಪುಡಿಗಟ್ಟಲಾಗಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಗುಂಪನ್ನು ಚದುರಿಸಿದ್ದಾರೆ. ಎರಡು ದಿನದ ಹಿಂದೆಯೂ ಕುಡ್ಲ ರಾಂಪೇಜ್ ತಂಡದ ಅಜಯ್ ಅವರನ್ನು ಧರ್ಮಸ್ಥಳ ಸ್ನಾನಘಟ್ಟದ ಬಳಿ ಸ್ಥಳೀಯರು ಜೋರು ಮಾಡಿದ್ದು ಹಲ್ಲೆಗೂ ಮುಂದಾಗಿದ್ದರು.
Tension broke out near Pangala, close to Dharmasthala, after a group of local residents allegedly assaulted members of the ‘Kudla Rampage’ YouTube team Ajay Anchan and United Media. The incident occurred on Wednesday evening, leading to the hospitalization of four team members at a private hospital in Ujire. Reports indicate that expensive camera equipment was also damaged during the altercation.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 11:11 pm
Mangalore Correspondent
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm