ಬ್ರೇಕಿಂಗ್ ನ್ಯೂಸ್
30-07-25 10:42 pm Bangalore Correspondent ಕ್ರೈಂ
ಬೆಂಗಳೂರು, ಜುಲೈ 30 : ನಗರದ ಬೆಳ್ಳಂದೂರಿನಲ್ಲಿರುವ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಕಂಪನಿ ನೆಬಿಲೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ವ್ಯಾಲೆಟ್ ಹ್ಯಾಕ್ ಮಾಡಿರುವ ಸೈಬರ್ ವಂಚಕರು, 378 ಕೋಟಿ ರೂ ಅಂದ್ರೆ ಸುಮಾರು 44 ಮಿಲಿಯನ್ ಅಮೆರಿಕನ್ ಡಾಲರ್ ಲೂಟಿ ಮಾಡಿದ್ದಾರೆ. ಈ ಕುರಿತು ಕಂಪನಿಯ ಉಪಾಧ್ಯಕ್ಷ ಹರ್ದೀಪ್ ಸಿಂಗ್ ನೀಡಿರುವ ದೂರಿನ ಆಧಾರದಲ್ಲಿ ವೈಟ್ಫೀಲ್ಡ್ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮ ಉದ್ಯೋಗಿರಾಹುಲ್ ಅಗರ್ವಾಲ್ ಎಂಬವರಿಗೆ ಕೆಲಸ ಮಾಡಲು ಕಂಪನಿ ಲ್ಯಾಪ್ಟಾಪ್ ನೀಡಿತ್ತು. ಸೈಬರ್ ಕಳ್ಳರು ಈ ಲ್ಯಾಪ್ಟಾಪ್ನ ವ್ಯಾಲೆಟ್ ಹ್ಯಾಕ್ ಮಾಡಿದ್ದಾರೆ.
ಇಷ್ಟು ದೊಡ್ಡ ಮೊತ್ತ ವಂಚನೆಯಾಗಿರುವುದು ಬೆಳಕಿಗೆ ಬಂದ ತಕ್ಷಣ ಕಂಪನಿ ಆಂತರಿಕ ತನಿಖೆ ನಡೆಸಿದೆ. ಈ ವೇಳೆ, ರಾಹುಲ್ ಅಗರ್ವಾಲ್ ಅವರು ಕಂಪನಿ ಲ್ಯಾಪ್ಟಾಪ್ ಅನ್ನು ಮತ್ತೊಂದು ಪಾರ್ಟ್ಟೈಂ ಉದ್ಯೋಗಕ್ಕೆ ಬಳಸಿರುವುದು ಗೊತ್ತಾಗಿದೆ. ಕಳೆದ ಒಂದು ವರ್ಷದಿಂದ ಪಾರ್ಟ್ಟೈಮ್ ಉದ್ಯೋಗದ ಮೂಲಕ ಅಗರ್ವಾಲ್ 15 ಲಕ್ಷ ರೂ ಸಂಪಾದಿಸಿರುವುದೂ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈತನೇ ಬೇರೆ ವ್ಯಕ್ತಿಗಳೊಂದಿಗೆ ಸೇರಿ ಈ ವಂಚನೆ ಎಸಗಿರುವ ಸಾಧ್ಯತೆ ಇದೆ ಎಂದು ಕಂಪನಿ ದೂರಿನಲ್ಲಿ ತಿಳಿಸಿದೆ.
"ನೆಬಿಲೋ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ರಾಹುಲ್ ಅಗರ್ವಾಲ್ ಕಳೆದ ಐದಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಆತನ ಲ್ಯಾಪ್ಟಾಪ್ನಿಂದ ಕಂಪನಿಯ ಕ್ರಿಪ್ಟೋ ಕರೆನ್ಸಿ ವರ್ಗಾವಣೆಯಾಗಿರುವ ಕಾರಣ ಆತನನ್ನು ವಶಕ್ಕೆ ಪಡೆಯಲಾಗಿದೆ. ಸೈಬರ್ ವಂಚನೆ ಪ್ರಕರಣದಲ್ಲಿ ಆತನ ಕೈವಾಡವಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ" ಎಂದು ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಹಿತಿ ನೀಡಿದರು.
In a shocking case of cyber fraud, Nebilo Technologies Private Limited, a cryptocurrency trading company based in Bellandur, Bengaluru, reported a theft of approximately ₹378 crore (around 44 million US dollars) from its crypto wallet. The fraud came to light following an internal investigation, and a formal complaint has been lodged at the Whitefield Cyber Crime Police Station based on a report filed by the company’s Vice President, Hardeep Singh.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 08:16 pm
HK News Desk
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm