ಬ್ರೇಕಿಂಗ್ ನ್ಯೂಸ್
24-07-25 12:01 pm HK News Desk ಕ್ರೈಂ
ಅಹ್ಮದಾಬಾದ್, ಜುಲೈ 24 : ನಿಷೇಧಿತ ಅಲ್ಖೈದಾ ಭಯೋತ್ಪಾದಕ ಸಂಘಟನೆ ಜತೆ ನಂಟು ಹೊಂದಿರುವ ಆರೋಪದ ಮೇರೆಗೆ ನಾಲ್ವರು ಶಂಕಿತ ಉಗ್ರರನ್ನು ಗುಜರಾತ್ ಉಗ್ರ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.
ಬಂಧಿತರನ್ನು ದಿಲ್ಲಿಯ ಮೊಹಮ್ಮದ್ ಪೈಕ್, ಗುಜರಾತ್ ನ ಅಹಮದಾಬಾದ್ ಮೂಲದ ಮೊಹಮ್ಮದ್ ಫರ್ದೀನ್, ಅರಾವಳಿ ಜಿಲ್ಲೆಯ ಸೈಫುಲ್ಲಾ ಖುರೇಶಿ ಮತ್ತು ಉತ್ತರಪ್ರದೇಶದ ನೋಯ್ಡಾದ ಜೀಶನ್ ಅಲಿ ಎಂದು ಗುರುತಿಸಲಾಗಿದೆ.
'ಬಂಧಿತರು 'ಭಾರತ ಉಪಖಂಡದಲ್ಲಿ ಅಲ್ಖೈದಾ' (ಎಕ್ಯೂಐಎಸ್) ಸಂಘಟನೆ ಜತೆಗೆ ಗುರುತಿಸಿಕೊಂಡಿದ್ದರು. ಇವರು ಮೂಲ ಸಂಘಟನೆ ಅಲ್ಖೈದಾ ಜತೆಗೆ ನಿರಂತರವಾಗಿ ಸಂಪರ್ಕ ಹೊಂದಿದ್ದರು. ಹಲವು ದಿನಗಳಿಂದ ಬಂಧಿತರ ಮೇಲೆ ಕಣ್ಣಿಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದು ಭಯೋತ್ಪಾದನೆ ನಿಗ್ರಹ ದಳದ ಡಿಐಜಿ ಸುನೀಲ್ ಜೋಷಿ ಮಾಹಿತಿ ನೀಡಿದ್ದಾರೆ.
ಇವರು ಜಾಲತಾಣದಲ್ಲಿ ಪರಸ್ಪರ ಸಂಪರ್ಕ ಹೊಂದಿದ್ದರು ಅಲ್ಲದೆ, ಪಾಕಿಸ್ತಾನಿಗಳ ಜೊತೆಗೆ ನಿರಂತರ ಕನೆಕ್ಷನ್ ಇಟ್ಟುಕೊಂಡಿದ್ದರು. ಭಾರತದಲ್ಲಿ ಆಪರೇಶನ್ ಸಿಂಧೂರ್ ವಿರುದ್ಧ ಯುವ ಜನರನ್ನು ಎತ್ತಿಕಟ್ಟುವುದು, ಆಮೂಲಕ ದೇಶದ ಆಂತರಿಕ ಭದ್ರತೆಗೆ ಅಪಾಯ ತರುವುದು, ಅಲ್ಲದೆ ದೇಶದಲ್ಲಿ ಷರಿಯಾ ಕಾನೂನು ತರುವ ಉದ್ದೇಶ ಹೊಂದಿದ್ದರು. ದಾಳಿ ನಡೆಸಿದ ವೇಳೆ ಮೊಹಮ್ಮದ್ ಪೈಕ್ ಮನೆಯಲ್ಲಿ ಜಿಹಾದಿ ಚಟುವಟಿಕೆ ಪ್ರಸಾರದ ಕುರಿತ ಪುಸ್ತಕ ಸಾಮಗ್ರಿಗಳು ಪತ್ತೆಯಾಗಿವೆ. ಸದ್ಯ ಅಲ್ ಕೈದಾ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸಕ್ರಿಯವಾಗಿದ್ದು ಭಾರತದಲ್ಲೂ ಪ್ರತಿಗಾಮಿ ಚಟುವಟಿಕೆಗಾಗಿ ಸಂಘಟನೆಯನ್ನು ಬೆಳೆಸುವ ಬಗ್ಗೆ ಟಾರ್ಗೆಟ್ ಇರಿಸಿದ್ದರು.
2024ರ ಮೇ 20ರಂದು ಅಹಮದಾಬಾದ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತ ಐಸಿಸ್ ಉಗ್ರರನ್ನು ಎಟಿಎಸ್ ಬಂಧಿಸಿತ್ತು. 2023ರಲ್ಲಿ ಅಲ್ಖೈದಾ ಜತೆ ಸಂಪರ್ಕ ಹೊಂದಿದ್ದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿತ್ತು. ಬಂಧಿತರು ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ವಿವಿಧ ವೇದಿಕೆ ಮತ್ತು ಆ್ಯಪ್ ಗಳ ಮೂಲಕ ಆಲ್ ಖೈದಾ ಸಂಘಟನೆಯ ಸಿದ್ಧಾಂತದ ಪ್ರಚಾರದಲ್ಲಿ ತೊಡಗಿದ್ದರು ಎನ್ನಲಾಗಿದೆ.
In a major counter-terror operation, the Gujarat Anti-Terrorism Squad (ATS) has arrested four suspected operatives allegedly linked to the banned terrorist organization Al-Qaeda in the Indian Subcontinent (AQIS). The suspects have been identified as Mohammad Paik from Delhi, Mohammad Fardeen from Ahmedabad, Saifullah Qureshi from Aravalli district in Gujarat, and Zeeshan Ali from Noida, Uttar Pradesh.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
01-02-26 02:00 pm
HK News Desk
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
01-02-26 10:29 pm
Mangalore Correspondent
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
01-02-26 03:41 pm
HK News Staffer
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm