ಬ್ರೇಕಿಂಗ್ ನ್ಯೂಸ್
            
                        21-07-25 11:01 pm HK News Desk ಕ್ರೈಂ
            ಬೀದರ್, ಜುಲೈ 21: ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಬೀದರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಾಗಿದೆ. 25 ವರ್ಷದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪ ಮಾಡಲಾಗಿದೆ.
2023 ರ ಡಿಸೆಂಬರ್ನಿಂದ 2024 ರ ಮಾರ್ಚ್ವರೆಗೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದು ಮಹಾರಾಷ್ಟ್ರ ಮೂಲದ ಮಹಿಳೆಯು ದೂರು ದಾಖಲಿಸಿದ್ದಾರೆ.
ಇನ್ನು ಎಫ್ಐಆರ್ ಪ್ರಕಾರ, ಎರಡು ವರ್ಷಗಳ ಹಿಂದೆ ಪ್ರತೀಕ್ ಚೌಹಾಣ್ ಮತ್ತು ಮಹಿಳೆ ಪ್ರೀತಿ ಮಾಡಿದ್ದಾರೆ. ಮದುವೆಯಾಗುವುದಾಗಿ ಪ್ರತೀಕ್ ಭರವಸೆ ನೀಡಿದ್ದ. ಆ ಭರವಸೆಯ ಮೇರೆಗೆ ಆಕೆ ಆತನೊಂದಿಗೆ ಹಲವು ಸ್ಥಳಗಳಿಗೆ ಹೋಗಿದ್ದಳು. ಈ ವೇಳೆ ಆತ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಮೊದಲ ಅತ್ಯಾಚಾರ ಬೆಂಗಳೂರಿನ ಹೋಟೆಲ್ ರೂಮ್ನಲ್ಲಿ ಸೆಪ್ಟೆಂಬರ್ 2023 ರಲ್ಲಿ ನಡೆಯಿತು ಎಂದು ಮಹಿಳೆ ಆರೋಪಿಸಿದ್ದಾರೆ.


ಡಿಸೆಂಬರ್ 25, 2023 ರಂದು ಚೌಹಾಣ್ ಅವರ ಕುಟುಂಬದ ನಿವಾಸದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಿತು. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಿತು. ಆ ನಂತರ ಮದುವೆಯ ದಿನಾಂಕವನ್ನು ನಿಗದಿಪಡಿಸುವಂತೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರು ಪದೇ ಪದೇ ಕೇಳಿಕೊಂಡರೂ ಪ್ರಯೋಜನವಾಗಲಿಲ್ಲ. ಬದಲಿಗೆ, ಲಾತೂರ್ ಮತ್ತು ಶಿರಡಿಗೆ ಧಾರ್ಮಿಕ ಭೇಟಿಗಳ ನೆಪದಲ್ಲಿ ಕರೆದೊಯ್ದು ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಯುವತಿ ಹೇಳಿದ್ದಾಳೆ.
ಅತ್ಯಾಚಾರ ಆರೋಪ ಸಂಬಂಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಬೀದರ್ ಜಿಲ್ಲಾ ಪೊಲೀಸರು ವಿವಿಧ ತಂಡಗಳನ್ನು ರಚಿಸಿ ತಲೆಮರೆಸಿಕೊಂಡಿರುವ ಪ್ರತೀಕ್ ಚೌಹಾಣ್ ಬಂಧನಕ್ಕಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ
            
            
            Prateek Chauhan, son of BJP MLA Prabhu Chauhan, has been booked on charges of rape by the Bidar Women’s Police Station following a complaint by a 25-year-old woman from Maharashtra. The FIR accuses him of sexually assaulting the woman multiple times after allegedly luring her with the promise of marriage.
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 06:15 pm
                        
            
                  
                Mangalore Correspondent    
            
                    
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm