ಬ್ರೇಕಿಂಗ್ ನ್ಯೂಸ್
15-07-25 11:38 am Mangalore Correspondent ಕ್ರೈಂ
ಮಂಗಳೂರು, ಜುಲೈ 16 : ದುಬೈಯಲ್ಲಿ ವಹಿವಾಟು ಹೊಂದಿದ್ದ ಕೇರಳ ಮೂಲದ ನಾಲ್ವರನ್ನು ಮಂಗಳೂರಿಗೆ ಕರೆಸಿ ಕೊಠಡಿಯೊಂದರಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದಲ್ಲದೆ ಅವರಲ್ಲಿದ್ದ ಒಂದು ಲಕ್ಷಕ್ಕೂ ಹೆಚ್ಚು ನಗದನ್ನು ಕಿತ್ತುಕೊಂಡು ಷೇರು ಖಾತೆಯಲ್ಲಿದ್ದ 28 ಲಕ್ಷ ಮೊತ್ತವನ್ನು ಬೇರೆಯವರ ಖಾತೆಗೆ ವರ್ಗಾಯಿಸಿರುವ ಘಟನೆ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಜಿಕ್ಕೋಡ್ ನಿವಾಸಿ ಅಬ್ದುಲ್ ಮನಫಾ ಹಾಗೂ ಅವರ ಸ್ನೇಹಿತರಾದ ಅರ್ಶಕ್ ಅಹಮ್ಮದ್, ಯಾಸರ್ ಅರಾಫತ್ ವಿ.ಪಿ. ಹಾಗೂ ಮೊಹಮ್ಮದ್ ಸಾಹಿರ್ ಎಂಬವರು ದುಬೈಯಲ್ಲಿ ವ್ಯವಹಾರ ಹೊಂದಿದ್ದು, ಮೂರು ತಿಂಗಳಿನಿಂದ ತಮ್ಮ ಊರಾದ ಕೋಜಿಕ್ಕೋಡ್ ಬಂದು ಲ್ಯಾಂಡ್ ಬ್ರೋಕರಿಂಗ್, ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು. ಇವರ ಪರಿಚಯದ ಮಂಗಳೂರಿನ ಸರ್ಫರಾಜ್ ಎಂಬಾತ ಈ ನಾಲ್ವರನ್ನು ವ್ಯವಹಾರ ಸಂಬಂಧಿಸಿ ಮಂಗಳೂರಿಗೆ ಕರೆಸಿಕೊಂಡಿದ್ದು, ಜುಲೈ 11ರಂದು ಸಂಜೆ ಪಂಪ್ವೆಲ್ ಗೆ ಬಂದಿದ್ದವರನ್ನು ಕಾರಿನಲ್ಲಿ ಮಲ್ಲೂರಿನಲ್ಲಿ ಒಂದು ವಹಿವಾಟು ಬಗ್ಗೆ ಮಾತನಾಡಲಿಕ್ಕಿದೆ ಎಂದು ಹೇಳಿ ಕರೆದೊಯ್ದಿದ್ದರು.
ಸರ್ಫರಾಜ್ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಕೇರಳದ ನಾಲ್ವರನ್ನು ತಮ್ಮದೇ ಕಾರಿನಲ್ಲಿ ಉಳಾಯಿಬೆಟ್ಟು ಬಳಿಯ ಮಲ್ಲೂರಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಮನೆಯೊಂದಕ್ಕೆ ಒಯ್ದು ಮಾತನಾಡುವ ನೆಪದಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಮನೆಯ ಒಳಗಡೆ ಕಾದು ಕುಳಿತಿದ್ದ ಇತರ ಹತ್ತು ಜನರು ಕೇರಳದ ನಾಲ್ವರಿಗೂ ಹಲ್ಲೆ ನಡೆಸಿದ್ದು, ತಲವಾರು ಹಿಡಿದು ಬೆದರಿಕೆ ಹಾಕಿದ್ದಾರೆ. ಬಳಿಕ ಯಾಸಿರ್ ಕಿಸೆಯಲ್ಲಿದ್ದ 90 ಸಾವಿರ ನಗದು, ಮಹಮ್ಮದ್ ಸಾಹಿರ್ ಮೊಬೈಲಿನಿಂದ 10 ಸಾವಿರ ಗೂಗಲ್ ಪೇ ಮಾಡಿಸಿದ್ದಾರೆ. ಯಾಸಿರ್ ಅರಾಫತ್ ಕುತ್ತಿಗೆಯ ಬಳಿ ಪಿಸ್ತೂಲ್ ಇಟ್ಟು ಬೆದರಿಸಿ ಹಣ ನೀಡುವಂತೆ ಬ್ಲಾಕ್ಮೇಲ್ ಮಾಡಿದ್ದಾರೆ. ಆನಂತರ, ಅಬ್ದುಲ್ ಮನಫಾ ಮೊಬೈಲ್ ಕಿತ್ತುಕೊಂಡು ಲಾಕ್ ತೆಗೆದು, ಷೇರು ವ್ಯವಹಾರಕ್ಕೆ ಸಂಬಂಧಿಸಿದ ಷೇರ್ಸ್ ಸ್ಟಾಕ್ ಅಕೌಂಟ್ ನಿಂದ 28 ಲಕ್ಷ ರೂ. ಮೊತ್ತದ ಷೇರುಗಳನ್ನು ಬೇರೆಯವರ ಖಾತೆಗೆ ವರ್ಗಾಯಿಸಿದ್ದಾರೆ.
ಅಲ್ಲದೆ, ನಾಲ್ವರ ಕೈಯಲ್ಲಿದ್ದ ಪರ್ಸ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಹಾಗೂ ನಗದು ಹಣವನ್ನು ಕಿತ್ತುಕೊಂಡು ಸಂಜೆಯಿಂದ ರಾತ್ರಿ 10 ಗಂಟೆ ವರೆಗೂ ಮನೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಅರ್ಶಕ್ ಅಹ್ಮದ್ ಎಂಬವರ ಹೊಟ್ಟೆ, ತಲೆಯ ಭಾಗಕ್ಕೆ ತುಳಿದು ಹಲ್ಲೆ ನಡೆಸಿದ್ದರಿಂದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
In a shocking incident, four men from Kerala involved in business dealings in Dubai were allegedly lured to Mangaluru, confined in a house, brutally assaulted, and robbed of over ₹29 lakh in cash and stock holdings. A case has been registered at the Mangaluru Rural Police Station.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 02:28 pm
HK News Desk
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
15-07-25 06:07 pm
Mangalore Correspondent
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am
ಮ್ಯಾಟ್ರಿಮನಿ ಸೈಟಲ್ಲಿ ಸಿಕ್ಕ ಗೆಳತಿಯಿಂದಲೇ ಮೋಸ ; ಆ...
13-07-25 05:23 pm