ಬ್ರೇಕಿಂಗ್ ನ್ಯೂಸ್
07-07-25 10:31 pm Mangalore Correspondent ಕ್ರೈಂ
ಮಂಗಳೂರು, ಜುಲೈ 7 : ಮನೆಯಿಂದಲೇ ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಗಳಿಸಬಹುದು ಎನ್ನುವ ಜಾಹೀರಾತನ್ನು ನಂಬಿ ವ್ಯಕ್ತಿಯೊಬ್ಬರು 6.50 ಲಕ್ಷ ರೂ. ಕಳಕೊಂಡ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ 25ರಂದು ವಾಟ್ಸಪ್ ನಲ್ಲಿ ಪಾರ್ಟ್ ಟೈಮ್ ಕೆಲಸದ ಬಗ್ಗೆ ಸಂದೇಶ ಬಂದಿತ್ತು. ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ಟೆಲಿಗ್ರಾಮ್ ಏಪ್ ಡೌನ್ಲೋಡ್ ಮಾಡುವಂತೆ ತಿಳಿಸಲಾಗಿತ್ತು. ಆನಂತರ ಮತ್ತೆರಡು ಲಿಂಕ್ ಕಳುಹಿಸಿದ್ದು, ಅದರ ಮೂಲಕ 20 ವರ್ಕ್ ಟಾಸ್ಕ್ ಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದ್ದರು. ಇದಕ್ಕೂ ಮೊದಲು ವರ್ಕಿಂಗ್ ಐಡಿ ನಂಬರ್ ಕೊಡುವುದಕ್ಕಾಗಿ ಬ್ಯಾಂಕ್ ಖಾತೆ ವಿವರಗಳನ್ನು ನೀಡುವಂತೆ ಸೂಚಿಸಿದ್ದರು.
ಪ್ರತಿ ಟಾಸ್ಕ್ ಮುಗಿಸಿದಾಗ ಖಾತೆಗೆ 180 ರೂ. ಹಣ ಹಾಕುವುದಾಗಿ ಹೇಳಿದ್ದರು. ಆನಂತರ, ಇಂತಿಷ್ಟು ಹಣ ಕಟ್ಟಿ ಟಾಸ್ಕ್ ಪೂರೈಸಿದರೆ ದುಪ್ಪಟ್ಟು ಹಣ ಸಿಗುವುದಾಗಿ ನಂಬಿಸಿದ್ದಾರೆ. ಅದರಂತೆ, ಈ ವ್ಯಕ್ತಿ ಅಪರಿಚಿರು ಹೇಳಿದ ರೀತಿಯಲ್ಲೇ ಹಣ ಪಾವತಿಸಿದ್ದರು. ಮತ್ತಷ್ಟು ಹಣ ಹಾಕಿದರೆ ಡಬಲ್ ಆಗುವುದಾಗಿ ನಂಬಿಸಿದ್ದು ಮತ್ತು ಅದರ ತೆರಿಗೆಯೆಂದು ಹೇಳಿ ಇನ್ನಷ್ಟು ಹಣ ಕೇಳಿದ್ದರು. ಅದೇ ಪ್ರಕಾರ ಹಂತ ಹಂತವಾಗಿ 6.50 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿದ್ದರು. ಅಲ್ಲಿ ವರೆಗೂ ಈ ವ್ಯಕ್ತಿಗೆ 380 ರೂ. ಮಾತ್ರ ಮರಳಿ ಸಿಕ್ಕಿತ್ತು. ಹಣವನ್ನು ವಾಪಸ್ ಕೇಳಿದಾಗ ದುಬಾರಿ ತೆರಿಗೆ ಕಟ್ಟುವಂತೆ ಹೇಳಿದ್ದು ಇದರಿಂದ ತಾನು ಮೋಸ ಹೋಗಿರುವುದಾಗಿ ತಿಳಿದು ಪೊಲೀಸರಿಗೆ ದೂರು ನೀಡಿದ್ದಾರೆ.
A man from Mangaluru has reportedly lost ₹6.5 lakh after falling victim to an online scam that promised earnings through a work-from-home part-time job. The incident has been registered at the Mangaluru Rural Police Station.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 10:08 pm
HK News Staffer
Mangalore City Centre KFC raided: Six-month-o...
15-08-26 09:30 pm
ಗುಟ್ಕಾ, ಪಾನ್ ಮಸಾಲ ಪ್ರತ್ಯೇಕ ಕೊಟ್ಟರೆ ನಿರ್ಬಂಧ ಇಲ...
15-08-26 04:52 pm
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
15-08-26 09:06 pm
HK News Staffer
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm