ಬ್ರೇಕಿಂಗ್ ನ್ಯೂಸ್
07-07-25 10:18 pm Mangalore Correspondent ಕ್ರೈಂ
ಮಂಗಳೂರು, ಜುಲೈ 7 : ದುಬೈನ ಎನ್ನೆಂಸಿ ಹೆಲ್ತ್ ಸೆಂಟರಿನಲ್ಲಿ ಉದ್ಯೋಗ ಇದೆಯೆಂದು ಹೇಳಿ ಮಹಿಳೆಯೊಬ್ಬಳು ಮಾಡಿದ ಫೋನ್ ಕರೆಗೆ ಮಂಗಳೂರಿನ ಯುವ ವೈದ್ಯ ಬೌಲ್ಡ್ ಆಗಿದ್ದು, ಕುಳಿತಲ್ಲೇ 4.20 ಲಕ್ಷ ರೂಪಾಯಿ ಕಳಕೊಂಡ ಬಗ್ಗೆ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿದೆ.
ಜೂನ್ 6ರಂದು ಸಂಗೀತಾ ಎಂದು ತನ್ನನ್ನು ಪರಿಚಯಿಸಿದ್ದ ಮಹಿಳೆ ಮಂಗಳೂರಿನ ವೈದ್ಯರೊಬ್ಬರಿಗೆ ಕರೆ ಮಾಡಿದ್ದಾಳೆ. ತಾನು ದುಬೈನ ಎನ್ ಎಂಸಿ ಹೆಲ್ತ್ ಸೆಂಟರಿನಲ್ಲಿದ್ದು ಇಲ್ಲಿ ಡಾಕ್ಟರ್ ಹುದ್ದೆಯೊಂದು ಖಾಲಿಯಿದ್ದು, ನೀವು ಎಪ್ಲೈ ಮಾಡಬಹುದು ಎಂದು ಹೇಳಿ ಆಫರ್ ಮಾಡಿದ್ದಳು. ಅಲ್ಲದೆ, ಹುದ್ದೆ ಖಾಲಿಯಿರುವ ಬಗ್ಗೆ ಮೈಲ್ ಸಂದೇಶ ಕಳುಹಿಸುವುದಾಗಿಯೂ ಹೇಳಿದ್ದಳು.
ಆನಂತರ, [email protected] ಹೆಸರಿನಲ್ಲಿ ವೈದ್ಯರಿಗೆ ಮೈಲ್ ಬಂದಿದ್ದು, ಹುದ್ದೆಯ ವಿವರ, ಸ್ಯಾಲರಿ ಇತ್ಯಾದಿ ಮಾಹಿತಿಯನ್ನೂ ಕೊಡಲಾಗಿತ್ತು. ಇದರ ಬೆನ್ನಲ್ಲೇ ವಿನಯ್ ಸಿಂಗ್ ಎಂಬಾತ ವೈದ್ಯರನ್ನು ಸಂಪರ್ಕಿಸಿದ್ದು, ಎನ್ನೆಂಸಿ ಹೆಲ್ತ್ ಸೆಂಟರಿನಲ್ಲಿ ಉದ್ಯೋಗ ಖಾತ್ರಿ ಪಡಿಸುವುದಕ್ಕೆ ರಿಜಿಸ್ಟ್ರೇಶನ್ ಮಾಡುವಂತೆ ಹೇಳಿ ಅದಕ್ಕಾಗಿ 5499 ರೂ. ಕಳಿಸುವಂತೆ ತಿಳಿಸಿದ್ದ. ಇದನ್ನು ನಂಬಿದ ಮಂಗಳೂರಿನ ವೈದ್ಯ ಜೂನ್ 13ರಂದು ಹಣವನ್ನು ರವಾನಿಸಿದ್ದಾರೆ. ಆಮೇಲೆ ವೆರಿಫಿಕೇಶನ್, ಪ್ರೊಸೆಸ್ಸಿಂಗ್, ಲೈಸನ್ಸಿಂಗ್, ಎನ್ಓಸಿ ಇತ್ಯಾದಿ ಹೆಸರಲ್ಲಿ ಹಣವನ್ನು ಕೇಳಿದ್ದು, ವೈದ್ಯರು ದುಬೈ ಉದ್ಯೋಗ ಸಿಕ್ಕೇಬಿಡ್ತು ಎಂದುಕೊಂಡು ಹಣ ಕಳಿಸಿದ್ದರು. ಒಟ್ಟು 4,20,062 ರೂಪಾಯಿ ಹಣವನ್ನು ಅಪರಿಚಿತ ಹೇಳಿದ ಖಾತೆಗಳಿಗೆ ವರ್ಗಾಯಿಸಿದ್ದರು.
ಇಷ್ಟಾದರೂ, ಹಣದ ಬೇಡಿಕೆ ನಿಂತಿರಲಿಲ್ಲ. ಮತ್ತೆ 2.62 ಲಕ್ಷ ರೂಪಾಯಿ ಹಣವನ್ನು ಕಳಿಸುವಂತೆ ವೈದ್ಯರಿಗೆ ಸೂಚಿಸಲಾಗಿತ್ತು. ಇದರಿಂದ ಸಂಶಯಕ್ಕೀಡಾದ ವೈದ್ಯ ತನ್ನ ಗೆಳೆಯರಲ್ಲಿ ಹೇಳಿಕೊಂಡಿದ್ದು, ಎನ್ನೆಂಸಿ ಹೆಲ್ತ್ ಸೆಂಟರಿನಲ್ಲಿ ಜಾಬ್ ಆಫರ್ ಇರೋದು ಹೌದಾ ಎಂದು ಚೆಕ್ ಮಾಡಲು ಮುಂದಾಗಿದ್ದರು. ಚೆಕ್ ಮಾಡಿದಾಗ, ಎನ್ನೆಂಸಿ ಸಂಸ್ಥೆಯಲ್ಲಿ ಅಂತಹ ಹುದ್ದೆಯೇ ಇಲ್ಲ ಎನ್ನುವುದು ಗೊತ್ತಾಗಿದೆ. ತಾನು ಮೋಸ ಹೋದ ಅರಿವಾಗುತ್ತಿದ್ದಂತೆ ವೈದ್ಯ ಮಂಗಳೂರಿನ ಕಂಕನಾಡಿ ನಗರ ಠಾಣೆಯಲ್ಲಿ ದೂರು ನೀಡಿದ್ದು, ಸೈಬರ್ ವಂಚಕರು ಹೀಗೂ ಮೋಸ ಮಾಡುತ್ತಾರಲ್ಲಾ ಎಂದು ಹುಬ್ಬೇರಿಸಿದ್ದಾರೆ.
In a shocking case of cyber fraud, a young doctor from Mangaluru was duped of ₹4.20 lakh after falling for a fake job offer allegedly from NMC Healthcare in Dubai. The incident has been reported at the Kankanady Town Police Station in Mangaluru.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 10:08 pm
HK News Staffer
Mangalore City Centre KFC raided: Six-month-o...
15-08-26 09:30 pm
ಗುಟ್ಕಾ, ಪಾನ್ ಮಸಾಲ ಪ್ರತ್ಯೇಕ ಕೊಟ್ಟರೆ ನಿರ್ಬಂಧ ಇಲ...
15-08-26 04:52 pm
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
15-08-26 09:06 pm
HK News Staffer
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm