ಬ್ರೇಕಿಂಗ್ ನ್ಯೂಸ್
26-06-25 10:49 pm Mangalore Correspondent ಕ್ರೈಂ
ಮಂಗಳೂರು, ಜೂನ್ 26 : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ದುಪ್ಪಟ್ಟು ಮಾಡಿಸುತ್ತೇನೆಂದು ಹೇಳಿ ಕುಟುಂಬಸ್ಥರಿಂದಲೇ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ ಬಳಿಕ ದಿಢೀರ್ ನಾಪತ್ತೆಯಾಗಿದ್ದ ಕೃಷ್ಣಪ್ರಸಾದ್ ಶೆಟ್ಟಿ ಎಂಬಾತನನ್ನು ಒಂದೂವರೆ ವರ್ಷದ ಬಳಿಕ ಮಂಗಳೂರಿನ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಪ್ರಸಾದ್ ಶೆಟ್ಟಿ ಮೂಲತಃ ಕುಂದಾಪುರ ತಾಲೂಕಿನ ಸಿದ್ದಾಪುರದ ಬಂಟಕೋಡು ಎಂಬಲ್ಲಿನ ನಿವಾಸಿಯಾಗಿದ್ದು, 2016ರಲ್ಲಿ ಮಂಗಳೂರಿನ ಯುವತಿಯನ್ನು ಮದುವೆಯಾಗಿದ್ದ. ಆನಂತರ, ಯುವತಿ ಕುಟುಂಬಸ್ಥರನ್ನು ನಂಬಿಸಿ ಹಣ ಪಡೆದಿದ್ದು, ಷೇರು ಮಾರುಕಟ್ಟೆಯಲ್ಲಿ ದಿನವಹಿ ವಹಿವಾಟು ನಡೆಸಿದರೆ ಗರಿಷ್ಠ ಲಾಭ ಸಿಗುತ್ತದೆ ಎಂದು ನಂಬಿಸಿದ್ದ. ಆತನ ಮಾತನ್ನು ನಂಬಿ ಹಲವಾರು ಮಂದಿ ಹಣ ಹೂಡಿಕೆ ಮಾಡಿದ್ದರು. ಈ ರೀತಿ ಹೂಡಿಕೆ ಮಾಡಿದವರು ಹೆಚ್ಚಿನವರು ಸಂಬಂಧಿಕರೇ ಆಗಿದ್ದರು. ಇದಲ್ಲದೆ, ಪತ್ನಿಯ ಒಡವೆ, ಆಸ್ತಿಯ ಹಣವನ್ನೂ ಪಡೆದು ಹೂಡಿಕೆ ಮಾಡಿಸಿದ್ದ.
ಎಲ್ಲರ ಹಣ ಪಡೆದು ತನ್ನದೇ ಹೆಸರಿನಲ್ಲಿ ಷೇರು ಮಾರುಕಟ್ಟೆಯ ಯುಎಫ್ಓ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದ್ದು, ಅದರಲ್ಲಿ ಭಾರೀ ನಷ್ಟಕ್ಕೀಡಾಗಿದ್ದ. ಸಂಬಂಧಿಕರು ಅನೇಕರು ಹಣ ನೀಡಿದ್ದು ಅವರು ಮರಳಿ ಕೇಳತೊಡಗಿದ್ದಾಗ 2023ರ ನವೆಂಬರ್ ತಿಂಗಳಲ್ಲಿ ದಿಢೀರ್ ಕಾಣೆಯಾಗಿದ್ದ. ಪತ್ನಿ ಜೊತೆಗೆ ಮಂಗಳೂರಿನ ಬಂಟ್ಸ್ ಹಾಸ್ಟೆಲಿಗೆ ಕಾರಿನಲ್ಲಿ ಬಂದು, ಆಕೆಯನ್ನು ಕಾರಿನಲ್ಲಿ ಕೂರಿಸಿ ಆಕ್ಸಿಸ್ ಬ್ಯಾಂಕಿಗೆಂದು ತೆರಳಿ ಅಲ್ಲಿಂದಲೇ ನಾಪತ್ತೆಯಾಗಿದ್ದ. ಆನಂತರ, ಎಲ್ಲಿ ಹೋಗಿದ್ದಾನೆಂದು ತಿಳಿಯದೇ ಸಂಬಂಧಿಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಂದರು ಠಾಣೆಯಲ್ಲಿ ದಾಖಲಾಗಿದ್ದ ಮೋಸದ ಪ್ರಕರಣ ಬಳಿಕ ಸಿಇಎನ್ ಠಾಣೆಗೆ ವರ್ಗಾವಣೆಗೊಂಡಿತ್ತು. ಕಳೆದ ಜೂನ್ 3ರಂದು ಕುಂದಾಪುರದ ತನ್ನ ಮನೆಗೆ ಬಂದಿದ್ದಾನೆಂದು ತಿಳಿದ ಮಂಗಳೂರು ಪೊಲೀಸರು ತೆರಳಿ ವಶಕ್ಕೆ ಪಡೆದಿದ್ದಾರೆ ಎನ್ನುವುದು ತಡವಾಗಿ ತಿಳಿದುಬಂದಿದೆ.
ಸದ್ಯಕ್ಕೆ ಆರೋಪಿ ಕೃಷ್ಣಪ್ರಸಾದ್ ಮಂಗಳೂರು ಜೈಲಿನಲ್ಲಿದ್ದು, ಜೆರೋದಾ ಸೇರಿದಂತೆ ವಿವಿಧ ಷೇರು ಮಾರುಕಟ್ಟೆ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಮಾಹಿತಿ ಕೇಳಿ ಪೊಲೀಸರು ಕಂಪನಿಗಳಿಗೆ ಪತ್ರ ರವಾನಿಸಿದ್ದಾರೆ. ಒಂದೂವರೆ ವರ್ಷದಲ್ಲಿ ದೆಹಲಿ, ಬೆಂಗಳೂರು ಸೇರಿ ವಿವಿಧ ಕಡೆಗಳಲ್ಲಿ ನೆಲೆಸಿದ್ದ ಕೃಷ್ಣಪ್ರಸಾದ್, ಅಲ್ಲಿಯೂ ಷೇರು ಮಾರುಕಟ್ಟೆ ವಹಿವಾಟು ನಡೆಸಿದ್ದ ಎನ್ನುವ ಮಾಹಿತಿಯಿದೆ. ಕೆಲವು ಸಂಬಂಧಿಕರು ತಮ್ಮ ಸ್ನೇಹಿತರಿಂದಲೇ ಹಣ ಪಡೆದು ದುಪ್ಪಟ್ಟು ಲಾಭದ ಆಸೆಯಿಂದ ಷೇರು ಮಾರುಕಟ್ಟೆಗೆ ಹೂಡಿಕೆ ಮಾಡಿಸಿದ್ದರು. ಅಂದಾಜು 6 ಕೋಟಿಗೂ ಹೆಚ್ಚು ಹಣ ನೀರಿನಲ್ಲಿಟ್ಟ ಹೋಮದಂತೆ ಖಾಲಿಯಾಗಿದೆ ಎಂದು ಹೇಳುತ್ತಿದ್ದು, ಹಣ ಕಳಕೊಂಡವರು ಹಿಡಿಶಾಪ ಹಾಕುತ್ತಿದ್ದಾರೆ.
Mangaluru police have arrested a man accused of duping his own relatives of several crores by promising high returns through stock market investments. The accused, who had been missing for over one and a half years, was finally nabbed by the CEN (Cyber, Economic, and Narcotics) police. The arrested man, Krishnaprasad Shetty, hails from Bantakodu, Siddapura in Kundapur taluk.
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am