ಬ್ರೇಕಿಂಗ್ ನ್ಯೂಸ್
22-05-25 02:22 pm HK News Desk ಕ್ರೈಂ
ದಾವಣಗೆರೆ, ಮೇ 22 : ಷೇರು ಮಾರುಕಟ್ಟೆಯಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಆಮಿಷ ತೋರಿಸಿದ ಫೇಸ್ಬುಕ್ನ ಅಪರಿಚಿತ ಸ್ನೇಹಿತ, ನಗರದ ವೈದ್ಯರೊಬ್ಬರಿಗೆ 2,40,92,150 ವಂಚಿಸಿ ಪಂಗನಾಮ ಹಾಕಿದ್ದಾನೆ
ನಗರದ ಪ್ರತಿಷ್ಠಿತ ಕುಟುಂಬದ ವೈದ್ಯ ಟೆಲಿಗ್ರಾಂ ಗ್ರೂಪ್ನಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ಹಾಕಿದ ಸಂದೇಶಕ್ಕೆ, ಅಪರಿಚಿತ ವ್ಯಕ್ತಿ ಪ್ರತಿಕ್ರಿಯಿಸಿದ. ವಾಟ್ಸ್ ಆಪ್ನಲ್ಲಿ ಚಾಟ್ ಮಾಡಲು ಆರಂಭಿಸಿದ. ಕೆಲ ದಿನಗಳಲ್ಲಿ ಫೇಸ್ ಬುಕ್ ಮೂಲಕ ಸ್ನೇಹಿತನಾದ ನಂತರ 'ಸಿಎಂಸಿ ಮಾರ್ಕೆಟ್' ಎಂಬ (ನಕಲಿ) ಜಾಲತಾಣದಲ್ಲಿ ಬಂಗಾರದ ಮೇಲೆ ಇಬ್ಬರೂ ಒಟ್ಟಿಗೆ ಹೂಡಿಕೆ ಮಾಡೋಣ, ಕಮಿಷನ್ ರೂಪದಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದು ವಂಚಕ, ವೈದ್ಯರನ್ನು ನಂಬಿಸಿದ.
ವಂಚಕನು ವಾಟ್ಸ್ಆಪ್ನಲ್ಲಿ ಕಳುಹಿಸಿದ ಲಿಂಕ್ ಮೂಲಕ ಸಿಎಂಸಿ ಮಾರ್ಕೆಟ್ ವೆಬ್ಸೈಟ್ ನಲ್ಲಿ ಕಳೆದ ಫೆ.18ರಿಂದ ಮೇ 15ರವರೆಗೆ ಒಟ್ಟು 2.40 ಕೋಟಿ ರೂ.ಗಳನ್ನು ವೈದ್ಯರು ಹೂಡಿಕೆ ಮಾಡಿದ್ದಾರೆ. ನಾನಾ ಬ್ಯಾಂಕ್ ಖಾತೆಗಳಿಗೆ ಒಟ್ಟು 17 ಬಾರಿ ಹಣ ರ್ಮಾವಣೆ ಮಾಡಿರುವ ವೈದ್ಯ, ಮಾರ್ಚ್ 11ರಂದು 5 ಲಕ್ಷ ರೂ. ವಿತ್ ಡ್ರಾ ಮಾಡಿದ್ದಾರೆ. ಬಳಿಕ ಹಣ ವಿತ್ ಡ್ರಾ ಮಾಡಲು ನಡೆಸಿದ ಹತ್ತಾರು ಪ್ರಯತ್ನಗಳು ವಿಫಲವಾದವು. ಅನುಮಾನಗೊಂಡ ವೈದ್ಯ, ಮೇ 17ರಂದು '1930' ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾರೆ. ದಾವಣಗೆರೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2.98ಕೋಟಿ ಹೂಡಿಕೆ ಮಾಡಿ ವಂಚನೆ;
ಇತ್ತೀಚೆಗೆ ಬೀದರ್ನ ವ್ಯಕ್ತಿಯೊಬ್ಬರು ಆನ್ಲೈನ್ನಲ್ಲಿ 2.98ಕೋಟಿ ಹೂಡಿಕೆ ಮಾಡಿ ವಂಚನೆಗೆ ಒಳಗಾದ ಘಟನೆ ನಡೆದಿದೆ. ಈ ಬಗ್ಗೆ ನಗರದ ಸಿಟಿ ಸೈಬರ್ ಎಕಾನಾಮಿಕ್ ಮತ್ತು ನಾರ್ಕೋಟಿಕ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೀದರ್ನ ಶಿವನಗರ ನಿವಾಸಿ ರಘುವೀರ ಜೋಶಿ ಎಂಬುವರು ವಂಚನೆಗೆ ಒಳಗಾದವರು.
ಎಂಜಿನಿಯರ್ ಪದವೀಧರರಾದ ಇವರು ಆಫ್ರಿಕಾದ ಕಾಂಗೋದಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಫೆಬ್ರವರಿಯಲ್ಲಿ ನಗರಕ್ಕೆ ಬಂದಿದ್ದಾರೆ. ಇವರ ಮೊಬೈಲ್ ಫೇಸ್ಬುಕ್ ಖಾತೆಗೆ ಮಾರ್ಚ್ 17ರಂದು ಬಂದ ಜಾಹೀರಾತೊಂದನ್ನು ಕ್ಲಿಕ್ ಮಾಡಿದ ನಂತರ 'ಬ್ಲಿಂಕ್ಸ್' ಎಂಬ ಸಂಸ್ಥೆಯಿಂದ ರಿಕ್ವೆಸ್ಟ್ ಬಂದಿದೆ. ಅದನ್ನು ಒಪ್ಪಿಕೊಂಡ ಬಳಿಕ ಅವರಿಗೆ ಆ ಸಂಸ್ಥೆಯ ಪ್ರತಿನಿಧಿಗಳೆಂದು ಹೇಳಿಕೊಂಡಿದ್ದಾರೆ. ತಾವು ಹೂಡಿಕೆ ಮಾಡಿದ ಹಣಕ್ಕೆ ಶೇ. 5ರಷ್ಟು ಹೆಚ್ಚುವರಿ ಹಣ ಕೊಡುವುದಾಗಿ ಹೇಳಿದರು. ಆರಂಭದಲ್ಲಿ ₹10 ಲಕ್ಷ ಹೂಡಿಕೆ ಮಾಡಿ ಶೇ. 5 ರಷ್ಟು ಲಾಭ ಪಡೆದರು. ನಂತರ ನೀವು ಮತ್ತೊಂದು ಟ್ರೇಡಿಂಗ್ನಲ್ಲಿ ಹಣ ಹೂಡಿದರೆ ಶೇ. 20ರಷ್ಟು ಲಾಭವಾಗುತ್ತದೆ ನಂಬಿಸಿದರು.
ಹೆಚ್ಚುವರಿ ಹಣದ ಆಮಿಷಕ್ಕೆ ಒಳಗಾದ ರಘುವೀರ ಜೋಶಿ ಅವರು ಮತ್ತೆ ಮತ್ತೆ ಹಣ ಹೂಡಿಕೆ ಮಾಡಿ ವಾಪಸ್ ಪಡೆಯಲು ಯತ್ನಿಸಿದಾಗ ಆ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬರಲಿಲ್ಲ. ಆನ್ಲೈನ್ ಹೂಡಿಕೆಯಲ್ಲಿ ವಂಚನೆಗೊಳಗಾಗಿದ್ದು ಖಾತ್ರಿಯಾದ ನಂತರ ಮೇ 8ರಂದು ಬೀದರ್ ಸಿಟಿ ಸೈಬರ್ ಎಕಾನಾಮಿಕ್ ಮತ್ತು ನಾರ್ಕೋಟಿಕ್ಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
Davangere Doctor Duped in Stock Market Scam, Loses Rs 2.4 Crore After Falling for Facebook Post.
22-05-25 07:36 pm
Bangalore Correspondent
BJP Chalavadi Narayanaswamy, Congress, Priyan...
22-05-25 06:31 pm
Hassan, Bangalore, Heart Attack: ಪ್ರತ್ಯೇಕ ಪ್ರ...
22-05-25 01:09 pm
Bagalkot, Monkey Visits Animal Hospital: ಬಾಗಲ...
22-05-25 12:41 pm
Ola News, Suicide, Bangalore: ಓಲಾ ಕಂಪನಿಯ ಎಐ ವ...
21-05-25 09:16 pm
22-05-25 05:53 pm
HK News Desk
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
21-05-25 11:09 pm
HK News Desk
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
Dr M A Saleem New DG&IGP: ಡಿಜಿಪಿ ಅಲೋಕ್ ಮೋಹನ್...
21-05-25 07:17 pm
Tiranga Yatra, Mangalore: ಮಂಗಳೂರಿನಲ್ಲಿ ತಿರಂಗಾ...
20-05-25 11:12 pm
22-05-25 02:22 pm
HK News Desk
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm