ಬ್ರೇಕಿಂಗ್ ನ್ಯೂಸ್
13-05-25 07:55 pm HK News Desk ಕ್ರೈಂ
ಹುಬ್ಬಳ್ಳಿ , ಮೇ 13 : ಮೂರುಸಾವಿರ ಮಠದ ಬಳಿಯ ಗುರುಸಿದ್ಧೇಶ್ವರ ನಗರದಲ್ಲಿ ಇಬ್ಬರು ಬಾಲಕರ ನಡುವೆ ಜಗಳ ಏರ್ಪಟ್ಟಿದ್ದು, ಕೋಪಗೊಂಡ 15 ವರ್ಷದ ಬಾಲಕ, 14 ವರ್ಷದ ತನ್ನ ಸ್ನೇಹಿತನಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.
ಸೋಮವಾರ ಸಂಜೆ ಘಟನೆ ನಡೆದಿದ್ದು, ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಬಾಲಕರು ಮೂರುಸಾವಿರ ಮಠದ ಬಳಿಯ ಜಿ ಅಡ್ಡಾ ನಿವಾಸಿಗಳು. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
ಯಾವ ಕಾರಣಕ್ಕಾಗಿ ಬಾಲಕರ ನಡುವೆ ಜಗಳ ಏರ್ಪಟ್ಟಿದೆ ಎಂದು ತಿಳಿದಿಲ್ಲ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದಾಗ, 15 ವರ್ಷದ ಬಾಲಕ ಮನೆಗೆ ಹೋಗಿ ರೇಡಿಯಂ ಕಟ್ ಮಾಡುವ ಚಾಕು ತಂದು ತನ್ನ ಸ್ನೇಹಿತ ಚೇತನಗೆ ಇರಿದಿದ್ದಾನೆ. ತೀವ್ರ ಗಾಯಗೊಂಡ ಚೇತನನ್ನು ಕೆಎಂಸಿ–ಆರ್ಐ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಶಶಿಕುಮಾರ್, ‘ಇಬ್ಬರು ಬಾಲಕರು ಎದುರು–ಬದುರು ಮನೆಯವರಾಗಿದ್ದು, ಜೊತೆಯಲ್ಲಿಯೇ ಆಡುತ್ತಿದ್ದರು. ಇಬ್ಬರ ನಡುವೆ ಏರ್ಪಟ್ಟ ಕ್ಷುಲ್ಲಕ ಜಗಳವು, ಮತ್ತೊಂದು ಬಾಲಕನ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕು ಇರಿದ ಬಾಲಕನ ತಾಯಿ, ಚಾಕು ಇರಿತಕ್ಕೆ ಒಳಗಾದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವ ಪ್ರಮಾಣದಲ್ಲಿ ಗಾಯಗಳಾಗಿವೆ, ಅವುಗಳ ತೀವ್ರತೆ ಎಷ್ಟಿತ್ತು ಎನ್ನುವುದು ತಿಳಿದು ಬಂದಿಲ್ಲ. ಆದರೆ, ಕೆಎಂಸಿ–ಆರ್ಐ ಆಸ್ಪತ್ರೆಗೆ ತರುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಹೇಳಿದರು.
‘ನನ್ನ ವೃತ್ತಿ ಬದುಕಿನಲ್ಲಿಯೇ ಇಂಥ ಹೃದಯ ವಿದ್ರಾವಕ ಘಟನೆ ನೋಡಿಲ್ಲ. ನಮ್ಮ ಸೊಂಟದ ಎತ್ತರಕ್ಕೂ ಬೆಳೆಯದ ಮಗು, ಚಾಕು ಹಿಡಿದು ಕೊಲೆ ಮಾಡುವಂಥ ಮನಸ್ಥಿತಿಗೆ ಬಂದಿದೆ ಎಂದರೆ, ಪೋಷಕರು ಎಚ್ಚರ ವಹಿಸಬೇಕು. ಕೊಲೆಯಾದ ಬಾಲಕನ ತಂದೆ ರೊಟ್ಟಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಕೊಲೆ ಮಾಡಿದ ಬಾಲಕನದ್ದು ಸಹ ಬಡ ಕುಟುಂಬವಾಗಿದೆ’ ಎಂದರು.
‘ಮಾರುಕಟ್ಟೆಗೆ ಹೋದಾಗ, ಮಗನನ್ನು ಕೊಲೆ ಮಾಡಲಾಗಿದೆ ಎನ್ನುವ ಸುದ್ದಿ ತಿಳಿಯಿತು. ಇಬ್ಬರು ಒಂದೇ ಓಣಿಯಲ್ಲಿ ಆಡುವ ಮಕ್ಕಳು ಅವರು. ಆಡುವಾಗ ಏನಾಯಿತೋ ಗೊತ್ತಿಲ್ಲ. ಎದುರು ಮನೆಯ ಹುಡುಗನೇ ಚಾಕು ಇರಿದು ಕೊಲೆ ಮಾಡಿದ್ದಾನೆ ಎಂದರು’ ಎಂದು ಮೃತ ಬಾಲಕ ತಂದೆ ಸೋಮಶೇಖರ್ ಕಣ್ಣೀರಾದರು.
ಇನ್ನು ಕೊಲೆ ಮಾಡಿದ ಬಾಲಕ ಮತ್ತು ಕೊಲೆಯಾದ ಬಾಲಕ ಇಬ್ಬರು ಪರಮಾಪ್ತ ಸ್ನೇಹಿತರಂತೆ. ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರಂತೆ. ಪ್ರತಿನಿತ್ಯ ಇಬ್ಬರು ಮನೆ ಬಳಿಯೇ ಆಟವಾಡುತ್ತಿದ್ದರು. ಚೇತನ್, ಬಹಳ ಒಳ್ಳೆಯ ಹುಡುಗ ಇದ್ದ ಅಂತ ಸ್ವತ ಕೊಲೆ ಮಾಡಿದ ಬಾಲಕನ ತಾಯಿ ಕೂಡಾ ಕಣ್ಣೀರು ಹಾಕಿ, ಮಗ ಮಾಡಿದ ಕೃತ್ಯಕ್ಕೆ ಕಂಗಾಲಾಗಿದ್ದಾಳೆ. ಇನ್ನು ಹುಬ್ಬಳ್ಳಿಯಲ್ಲಿ ನಡೆದ ಘಟನೆ ಕೇಳಿ ಸ್ವತ ಪೊಲೀಸ್ ಅಧಿಕಾರಿಗಳು ಶಾಕ್ ಆಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಕಿಮ್ಸ್ ಗೆ ಆಗಮಿಸಿದ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಪರಿಶೀಲನೆ ನಡೆಸಿದ್ದು, ಕೊಲೆಯಾದ ಬಾಲಕನ ಕುಟುಂಬದವರನ್ನು ಸಮಾಧಾನ ಮಾಡಿದರು.
A shocking incident has rocked the city as a schoolboy allegedly killed his close friend following a minor altercation. The deceased has been identified as Chethan, a student who was reportedly on good terms with the accused. According to early reports, the two boys were involved in a heated argument that unexpectedly escalated into violence. The exact nature of the dispute
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
01-02-26 02:00 pm
HK News Desk
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
01-02-26 10:29 pm
Mangalore Correspondent
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
01-02-26 03:41 pm
HK News Staffer
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm