ಬ್ರೇಕಿಂಗ್ ನ್ಯೂಸ್
18-04-25 03:41 pm Bangalore Correspondent ಕ್ರೈಂ
ಬೆಂಗಳೂರು, ಏ 18: ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿ ಬಳಿಕ ಮೃತ ನವಜಾತ ಶಿಶುವನ್ನು ಕಸದಲ್ಲಿ ಎಸೆದಿದ್ದ ಆರೋಪಿಯನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಭರತ್ (23) ಬಂಧಿತ ಆರೋಪಿ. ಈತ ಯಲಹಂಕ ನಿವಾಸಿ. ವೃತ್ತಿಯಲ್ಲಿ ಆಟೋ ಚಾಲಕ. ಎರಡು ವರ್ಷಗಳ ಹಿಂದೆ ಅಪ್ರಾಪ್ತೆಯೊಂದಿಗೆ ಸ್ನೇಹ ಬೆಳೆಸಿದ್ದ. ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು. ಪ್ರೀತಿಯ ಸೋಗಿನಲ್ಲಿ ಅಪ್ರಾಪ್ತೆಯನ್ನು ಗರ್ಭವತಿ ಮಾಡಿದ್ದ. 9 ತಿಂಗಳ ಬಳಿಕ ಅಕ್ಕಪಕ್ಕದ ಮನೆಯವರೇ ಮಗುವನ್ನು ಡೆಲಿವರಿ ಮಾಡಿಸಿದ್ದರು. ಕಳೆದ 10 ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹೆತ್ತ ಮಗುವನ್ನು ಕಸದೊಂದಿಗೆ ಹಾಕಿದ್ರು:
ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಅಪ್ರಾಪ್ತೆ ನವಜಾತ ಶಿಶುವನ್ನು ಕಸದ ಬ್ಯಾಗಿನಲ್ಲಿ ತುಂಬಿದ್ದಳು. ಇದಕ್ಕೆ ಆರೋಪಿ ಕುಮ್ಮಕ್ಕು ನೀಡಿದ್ದ. ಪಕ್ಕದ ಮನೆಯ ವ್ಯಕ್ತಿಗೆ ಕಸ ನೀಡಿ ಅದರ ಮೂಲಕ ಮಗುವನ್ನು ಹೊರಹಾಕುವಂತೆ ಸೂಚಿಸಿದ್ದಳು. ಮೃತ ಮಗುವಿರುವುದನ್ನು ಅರಿಯದ ವ್ಯಕ್ತಿ ಕಸ ತೆಗೆದುಕೊಂಡು ಹೋಗಿ ಖಾಸಗಿ ಆಸ್ಪತ್ರೆಯ ಬಳಿ ಖಾಲಿ ಜಾಗದಲ್ಲಿ ಹಾಕಿದ್ದ. ಕಸದಲ್ಲಿ ಮಗು ಪತ್ತೆಯಾಗುತ್ತಿದ್ದಂತೆ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸಿಸಿಟಿವಿ ಆಧರಿಸಿ ತನಿಖೆ ನಡೆಸಿದಾಗ ವ್ಯಕ್ತಿಯೋರ್ವ ಸೈಕಲ್‌ನಲ್ಲಿ ಬಂದು ಕವರ್ನಲ್ಲಿ ಕಸ ಹಾಕಿರುವ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದರು. ಆತನನ್ನು ಪತ್ತೆ ಹಚ್ಚಿ ಪ್ರಶ್ನಿಸಿದಾಗ, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಪಕ್ಕದ ಮನೆಯವರು ಕಸ ಹಾಕುವುದಕ್ಕೆ ನೀಡಿದ್ದರು ಎಂದು ಹೇಳಿಕೆ ನೀಡಿದ್ದರು. ಈತ ನೀಡಿದ ಮಾಹಿತಿ ಆಧರಿಸಿ ಅಪ್ರಾಪ್ತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
BBMP workers discover body of a newborn wrapped in a blanket in garbage at Yelahanka in Bangalore. According to police reports, the newborn was identified as the child of a local minor girl who reportedly gave birth with the assistance of neighbors. Preliminary investigations suggest that following the delivery, the infant was found lifeless and subsequently discarded in the garbage.
09-07-25 11:50 am
HK News Desk
ಸಿಎಂ ಸೀಟು ಗೊಂದಲ ಕೇವಲ ಮಾಧ್ಯಮಗಳ ಸೃಷ್ಟಿ ; ಮೊದಲು...
08-07-25 08:35 pm
Karnataka Ban Online Betting and Gambling: ಆನ...
08-07-25 05:01 pm
Exorcism Ritual in Shivamogga, Death; ದೆವ್ವ ಬ...
08-07-25 02:47 pm
Heart Attack Case, Karnataka: ಹಠಾತ್ ಸಾವುಗಳನ್ನ...
08-07-25 11:15 am
07-07-25 08:45 pm
HK News Desk
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
08-07-25 09:33 pm
Mangalore Correspondent
“Mission Possible: KMC Attavar Performs Life-...
08-07-25 03:37 pm
KMC Hospital Mangalore, Attavar, Surgery: ಅಪಘ...
08-07-25 03:27 pm
Mangalore suicide, Thumbe: ಮೊಬೈಲ್ ಗೀಳು ; ತುಂಬ...
08-07-25 10:15 am
ಎಂಟು ವರ್ಷದ ಪ್ರೀತಿ ಸಾವಿನಲ್ಲಿ ಅಂತ್ಯ ; ಪ್ರೀತಿಸುತ...
07-07-25 05:02 pm
08-07-25 10:01 pm
Bengaluru Staffer
Mangalore, Job Fraud, Crime: ಪಾರ್ಟ್ ಟೈಮ್ ಕೆಲಸ...
07-07-25 10:31 pm
Job Fraud, Mangalore, Doctor: ದುಬೈನ ಎನ್ಎಂಸಿ ಹ...
07-07-25 10:18 pm
ಹದಿನಾರರ ವಯಸ್ಸು ಹುಚ್ಚುಕೋಡಿ ಮನಸ್ಸು ; 16ರ ಹುಡುಗಿ...
07-07-25 07:13 pm
Digital Arrest, Cyber Fraud, Mangalore: ಡಿಜಿಟ...
07-07-25 03:30 pm