ಬ್ರೇಕಿಂಗ್ ನ್ಯೂಸ್
07-04-25 10:51 pm HK News Desk ಕ್ರೈಂ
ಕಲಬುರಗಿ, ಏ 07: ಅತ್ತೆ ಮನೆಗೆ ಕನ್ನ ಹಾಕಿದ ಅಳಿಯನೊಬ್ಬ ಪೊಲೀಸರ ಕೈಗೆ ತಗ್ಲಾಕೊಂಡಿರೋ ಘಟನೆ ಕಾಳಗಿಯಲ್ಲಿ ನಡೆದಿದೆ. ಮೀನಪ್ಪ ಅತ್ತೆ ಮನೆಯಲ್ಲೇ ಕಳ್ಳತನ ಮಾಡಿರೋ ಆರೋಪಿ.
ಅತ್ತೆ ಸಿದ್ದಮ್ಮ ಜಮೀನು ಖರೀದಿಸುವ ಸಲುವಾಗಿ 11 ಲಕ್ಷ ರೂ. ಮನೆಯ ಟ್ರಂಕ್ನಲ್ಲಿ ಇಟ್ಟಿದ್ದಳು. ಅದೇ ಮನೆಯಲ್ಲಿ ಕುಟುಂಬ ಸಮೇತವಾಗಿ ಆಕೆಯ ಸೋದರಳಿಯ (ಸಹೋದರನ ಮಗ) ಮೀನಪ್ಪ ವಾಸವಿದ್ದ. ಹೀಗೆ ಮಾರ್ಚ್ 28ರಂದು ಮನೆಯ ಟ್ರಂಕ್ನಲ್ಲಿ ಇಟ್ಟಿದ್ದ 11 ಲಕ್ಷ ರೂಪಾಯಿಯನ್ನು ಅಳಿಯ ಮೀನಪ್ಪ ಕಳ್ಳತನ ಮಾಡಿದ್ದಾನೆ. ಹೀಗೆ ಮನೆಯಲ್ಲಿ ಇಟ್ಟಿದ್ದ 11 ಲಕ್ಷ ರೂಪಾಯಿಯನ್ನು ಎಗರಿಸಿ ಕಳ್ಳತನದ ಕಥೆ ಕಟ್ಟಿದ್ದಾನೆ

ಆದ್ರೆ, ಹಣ ತಾನೆ ಕದ್ದಿದ್ದರೂ ಅಕ್ಕ ಪಕ್ಕದ ಮನೆಯವರ ಮೇಲೆ ಅನುಮಾನ ಬರುವಂತೆ ಅತ್ತೆ ಮುಂದೆ ಅಳಿಯ ಮೀನಪ್ಪ ಮಾತಾಡಿದ್ದಾನೆ. ಎಷ್ಟು ಹುಡುಕಿದರೂ ಹಣ ಕಳೆದುಕೊಂಡ ಸಿದ್ದಮ್ಮ ಕಾಳಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಹಣ ಕಳುವಾದ ದಿನ ಮಧ್ಯಾಹ್ನ ಸಿದ್ದಮ್ಮನ ಮನೆಗೆ ಮೀನಪ್ಪ ಹೋಗಿ ಬಂದಿದ್ದು ಗೊತ್ತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ಮೀನಪ್ಪ ಸತ್ಯ ಬಾಯಿಬಿಟ್ಟಿದ್ದಾನೆ.
ಹೀಗೆ ಅತ್ತೆ ಮನೆಯಲ್ಲಿದ್ದ 11 ಲಕ್ಷ ರೂಪಾಯಿಯನ್ನು ಎಗರಿಸಿ ಅದನ್ನು ಸಹೋದರನ ಜೊತೆ ಸೇರಿ ಮೀನಪ್ಪ ಬೇರೆಡೆ ಶಿಫ್ಟ್ ಮಾಡಿಸಿದ್ದು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಆರೋಪಿಯಿಂದ ಸತ್ಯ ಬಾಯಿಬಿಡಿಸಿ ಕಳ್ಳತನವಾದ 11 ಲಕ್ಷ ರೂ. ಪೈಕಿ 9 ಲಕ್ಷ 30 ಸಾವಿರ ರೂಪಾಯಿ ಜಪ್ತಿ ಮಾಡಿದ್ದಾರೆ. ಉಳಿದ 1 ಲಕ್ಷ 70 ಸಾವಿರ ರೂಪಾಯಿ ಜೊತೆಗೆ ಪರಾರಿಯಾಗಿರೋ ಮೀನಪ್ಪನ ಸಹೋದರ ಅನೀಲ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೂ, ಕಾಳಗಿ ಪೊಲೀಸರ ಕಾರ್ಯಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸುಲು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kalaburagi theft, son in law Steals Lakhs from mother in law house.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 10:08 pm
HK News Staffer
Mangalore City Centre KFC raided: Six-month-o...
15-08-26 09:30 pm
ಗುಟ್ಕಾ, ಪಾನ್ ಮಸಾಲ ಪ್ರತ್ಯೇಕ ಕೊಟ್ಟರೆ ನಿರ್ಬಂಧ ಇಲ...
15-08-26 04:52 pm
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
15-08-26 09:06 pm
HK News Staffer
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm