ಬ್ರೇಕಿಂಗ್ ನ್ಯೂಸ್
16-03-25 10:39 pm Bangalore Correspondent ಕ್ರೈಂ
ಬೆಂಗಳೂರು, ಮಾ.16 : ವೃದ್ಧೆಗೆ 50 ಲಕ್ಷ ರೂ. ವಂಚಿಸಿದ ಖಾಸಗಿ ಬ್ಯಾಂಕ್ ಒಂದರ ಡೆಪ್ಯುಟಿ ಮ್ಯಾನೇಜರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡೆಪ್ಯೂಟಿ ಮ್ಯಾನೇಜರ್ ಮೇಘನಾ, ಅವರ ಪತಿ ಶಿವಪ್ರಸಾದ್, ಸ್ನೇಹಿತರಾದ ವರದರಾಜು ಮತ್ತು ಅನ್ವರ್ ಘೋಷ್ ಬಂಧಿತರು.
ಬೆಂಗಳೂರಿನ ಗಿರಿನಗರದ ಖಾಸಗಿ ಬ್ಯಾಂಕ್ವೊಂದರಲ್ಲಿ ವೃದ್ಧ ದಂಪತಿ ಜಾಯಿಂಟ್ ಅಕೌಂಟ್ ತೆರೆದಿದ್ದರು. ಅದೇ ಬ್ಯಾಂಕ್ನಲ್ಲಿ ಎಫ್ಡಿ ಖಾತೆಯನ್ನೂ ಸಹ ಹೊಂದಿದ್ದರು. ಇದೇ ವೇಳೆ, ವೃದ್ಧೆಗೆ ಬ್ಯಾಂಕ್ನ ಡೆಪ್ಯೂಟಿ ಮ್ಯಾನೇಜರ್ ಆಗಿರುವ ಮೇಘನಾ ಪರಿಚಯವಾಗಿತ್ತು. ಬ್ಯಾಂಕ್ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದ ಮೇಘನಾ ಜೊತೆ ಕುಟುಂಬದ ಕಷ್ಟ ಸುಖಗಳನ್ನು ವೃದ್ಧೆ ಹಂಚಿಕೊಳ್ಳುತ್ತಿದ್ದರು.
ದಂಪತಿ ಚಾಮರಾಜಪೇಟೆಯಲ್ಲಿದ್ದ ಮನೆ ಮಾರಾಟ ಮಾಡಿರುವ ವಿಚಾರವನ್ನೂ ವೃದ್ಧೆ ಮೇಘನಾಗೆ ಹೇಳಿದ್ದರು. ಮನೆ ಮಾರಾಟದಿಂದ ವೃದ್ಧ ದಂಪತಿಯ ಬ್ಯಾಂಕ್ ಖಾತೆಗೆ ಒಂದು ಕೋಟಿ ಹಣ ಜಮೆಯಾಗಿತ್ತು. ಆ ಹಣದ ಮೇಲೆ ಕಣ್ಣಿಟ್ಟಿದ್ದ ಮ್ಯಾನೇಜರ್ ಮೇಘನಾ, ವೃದ್ಧೆ ಬ್ಯಾಂಕ್ಗೆ ಹೋದಾಗ ನಿಮ್ಮ ಎರಡು ಬಾಂಡ್ ಅವಧಿ ಮುಗಿದಿದೆ. ಹೊಸ ಬಾಂಡ್ ಖರೀದಿಗೆ ದಾಖಲಾತಿ ಮತ್ತು ಚೆಕ್ ಅವಶ್ಯಕತೆ ಇದೆ ಎಂದು ಹೇಳಿದ್ದಾಳೆ. ಬಳಿಕ ಮೇಘನಾ ವೃದ್ಧೆಯ ಮನೆಗೆ ತೆರಳಿ ಎರಡು ಖಾಲಿ ಚೆಕ್ ಮೇಲೆ ಸಹಿ ಮಾಡಿಸಿಕೊಂಡು, ಜೊತೆಗೆ ಒಂದಿಷ್ಟು ಕಾಗದ ಪತ್ರಗಳಿಗೂ ಸಹಿ ಪಡೆದಿದ್ದಳು.
ಅದೇ ಸಂದರ್ಭದಲ್ಲಿ ಆರ್ಟಿಜಿಎಸ್ ಪತ್ರಕ್ಕೂ ಸಹಿ ಪಡೆದಿದ್ದ ಮೇಘನಾ, 50 ಲಕ್ಷ ರೂ. ಹಣವನ್ನ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾಳೆ. ವೃದ್ಧ ದಂಪತಿಯ ಮಗ ಮೊಬೈಲ್ನಲ್ಲಿ ಅಕೌಂಟ್ ಬ್ಯಾಲೆನ್ಸ್ ನೋಡುವಾಗ ಹಣ ಕಡಿಮೆ ಇರುವುದು ಪತ್ತೆಯಾಗಿದೆ. ಬಳಿಕ, ಬ್ಯಾಂಕ್ನಿಂದ ಬಂದಿದ್ದ ಮೆಸೇಜ್ಗಳನ್ನು ಪರಿಶೀಲಿಸಿದ್ದಾರೆ. ಫೆಬ್ರವರಿ 13ರಂದು ಬೇರೆ ಖಾತೆಗೆ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ನಂತರ ವೃದ್ಧೆ ಬ್ಯಾಂಕ್ಗೆ ಹೋಗಿ ಮೇಘಾಳನ್ನು ಪ್ರಶ್ನಿಸಿದಾಗ, 'ನೀವು ಹೇಳಿದ ಖಾತೆಗೆ ಆರ್ಟಿಜಿಎಸ್ ಮಾಡಲಾಗಿದೆ' ಎಂದು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ.
ಬಳಿಕ ವೃದ್ಧೆ ಗಿರಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಮ್ಯಾನೇಜರ್ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
The Girinagar police have made significant strides in combating financial fraud with the arrest of four individuals, including a deputy manager of a prominent private bank, in connection with the swindling of an elderly woman out of Rs 50 lakh. The accused, identified as Meghana, the deputy manager, along with her husband Shivaprasad and their acquaintances Varadaraju and Anwar Ghosh, were apprehended following an investigation launched after the victim reported the fraudulent activities.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 09:38 pm
HK News Desk
ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡ...
10-05-26 09:15 pm
Vijay New CM: ತಮಿಳರ ಮುಖ್ಯಮಂತ್ರಿ ಆಗುತ್ತಲೇ ಜೋಸೆ...
10-05-26 12:26 pm
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am