ಬ್ರೇಕಿಂಗ್ ನ್ಯೂಸ್
02-03-25 06:37 pm Bangalore Correspondent ಕ್ರೈಂ
ಬೆಂಗಳೂರು, ಮಾ.2 : ಹೆಚ್ಚಿನ ಬಡ್ಡಿ ಆಮಿಷ ತೋರಿಸಿ ಹೈದರಾಬಾದ್ ಮೂಲದ ನಕಲಿ ಕಂಪನಿಯ ಮೇಲೆ ಕೋಟ್ಯಂತರ ರೂಪಾಯಿ ಹಣ ತೊಡಗಿಸಿದ ಬೆಂಗಳೂರಿನ ನೂರಾರು ಮಂದಿ ಮೋಸ ಹೋಗಿದ್ದಾರೆ. ಬೆಂಗಳೂರಿನಲ್ಲಿ 183 ಮಂದಿ 41 ಕೋಟಿ ರೂಪಾಯಿ ಹೂಡಿಕೆ ಮಾಡಿ ಮೋಸಕ್ಕೀಡಾಗಿದ್ದು, ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲು ಮಾಡಿದ್ದಾರೆ.
ಹೈದರಾಬಾದ್ ಮೂಲದ ಫಾಲ್ಕನ್ ಇನ್ ವಾಯ್ಸ್ ಡಿಸ್ಕೌಂಟಿಂಗ್ ಹೆಸರಿನ ಕಂಪನಿ ಕಡಿಮೆ ಅವಧಿಯ ಹೂಡಿಕೆಯ ಮೇಲೆ ವಾರ್ಷಿಕ 10ರಿಂದ 22 ಶೇಕಡಾ ಬಡ್ಡಿ ನೀಡುವುದಾಗಿ ಹೇಳಿ ಜನರನ್ನು ಆಕರ್ಷಿಸಿತ್ತು. ಹಣ ಹೂಡಿಕೆ ಮಾಡಿ ರಿಟರ್ನ್ಸ್ ಬಾರದೆ ಮೋಸಕ್ಕೀಡಾದವರು ಪೊಲೀಸ್ ದೂರು ನೀಡಿದ್ದಾರೆ. ಸಿಸಿಬಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎರಡು ಮತ್ತು ಪಶ್ಚಿಮ ಸಿಇಎನ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ಕಂಪನಿಯಿಂದ ಇನ್ ವಾಯ್ಸ್ ಡಿಸ್ಕೌಂಟ್ ಹೆಸರಲ್ಲಿ ಹೆಚ್ಚಿನ ಬಡ್ಡಿ ಆಮಿಷದಲ್ಲಿ ಹೂಡಿಕೆ ಆಕರ್ಷಿಸುತ್ತಿದ್ದರು. ಇನ್ ವಾಯ್ಸ್ ಗಳನ್ನು ಡಿಸ್ಕೌಂಟ್ ದರದಲ್ಲಿ ಮಾರಾಟ ಮಾಡುತ್ತಿದ್ದು, ಇದರ ಮೇಲೆ ಮನಿ ಪ್ಲಸ್ ಬಡ್ಡಿ ಸಿಗುವುದಾಗಿ ಹೇಳುತ್ತಿದ್ದರು. ಗ್ರಾಹಕರು ಹೂಡಿಕೆದಾರರು ಮತ್ತು ಹೆಸರಾಂತ ಕಂಪನಿಯ ನಡುವೆ ಮಧ್ಯವರ್ತಿಗಳಾಗಿ ಇರಲಿದ್ದು, ಇನ್ ವಾಯ್ಸ್ ಕ್ಲೀಯರ್ ಆದ ಸಂದರ್ಭದಲ್ಲಿ ಬಡ್ಡಿ ಪಡೆಯಲಿದ್ದಾರೆಂದು ಆಫರ್ ಕೊಡುತ್ತಿದ್ದರು.
ಬೆಂಗಳೂರಿನಲ್ಲಿ ನಿವೃತ್ತ ಯೋಧರೊಬ್ಬರು ತನ್ನ 1.07 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದು, ತನ್ನ ಹಣ ಮರಳಿ ಸಿಗುವ ಭರವಸೆ ಕಳಕೊಂಡಿದ್ದಾರೆ. 2021ರ ಬಳಿಕ ಹೂಡಿಕೆ ಮಾಡತೊಡಗಿದ್ದೆ. ನನ್ನ ಸೇವಾ ನಿವೃತ್ತಿಯ ಹಣವನ್ನು ಹೂಡಿಕೆ ಮಾಡಿದ್ದೇನೆ. ಎಲ್ಲವನ್ನೂ ಕಳಕೊಳ್ಳುವ ಭಯ ಕಾಡುತ್ತಿದೆ ಎಂದವರು ಹೇಳಿದ್ದಾರೆ. ಫಾಲ್ಕನ್ ಇನ್ ವಾಯ್ಸ್ ಡಿಸ್ಕೌಂಟಿಂಗ್ ಕಂಪನಿಯು 2021ರಲ್ಲಿ ಆಪರೇಶನ್ ಶುರು ಮಾಡಿದ್ದು, ದೇಶಾದ್ಯಂತ ಆರು ಸಾವಿರಕ್ಕೂ ಹೆಚ್ಚು ಜನರು ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಹೈದರಾಬಾದ್ ನಲ್ಲಿಯೂ ಹಲವಾರು ಪೊಲೀಸ್ ದೂರು ದಾಖಲಾಗಿದ್ದು, ಅಲ್ಲಿನ ಪೊಲೀಸರು ಕ್ಯಾಪಿಟಲ್ ಪ್ರೊಟೆಕ್ಷನ್ ಫೋರ್ಸ್ ಪ್ರೈ. ಲಿ. ಕಂಪನಿಯ ಉಪಾಧ್ಯಕ್ಷ ಪವನ್ ಕುಮಾರ್ ಮತ್ತು ಫಾಲ್ಕನ್ ಇನ್ ವಾಯ್ಸ್ ಡಿಸ್ಕೌಂಟಿಂಗ್ ಪ್ಲಾಟ್ ಫಾರ್ಮ್ ಕಂಪನಿಯ ಬಿಸಿನೆಸ್ ಹೆಡ್ ಕಾವ್ಯಾ ಎನ್. ಎಂಬವರನ್ನು ಬಂಧಿಸಿದ್ದಾರೆ. ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಅಮರ್ ದೀಪ್, ಸಿಓಓ ಆರ್ಯನ್ ಸಿಂಗ್ ಮತ್ತು ಸಿಇಓ ಯೋಗೇಂದ್ರ ಸಿಂಗ್ ತಲೆಮರೆಸಿಕೊಂಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ಆರೋಪಿಗಳು ಏಪ್ ಮತ್ತು ವೆಬ್ ಸೈಟ್ ಮೂಲಕ ಹೆಸರಾಂತ ಕಂಪನಿಗಳ ಹೆಸರು ಹೇಳಿ ಗ್ರಾಹಕರನ್ನು ಆಕರ್ಷಿಸುತ್ತಿದ್ದರು. ಕಂಪನಿಯ ಲಾಭವನ್ನು ಹೆಚ್ಚಿರುವಂತೆ ತೋರಿಸಿ ಗ್ರಾಹಕರನ್ನು ನಂಬಿಸುತ್ತಿದ್ದರು. ಗ್ರಾಹಕರಿಂದ 1700 ಕೋಟಿಯಷ್ಟು ಹಣವನ್ನು ಸಂಗ್ರಹಿಸಿದ್ದರೆ, 850 ಕೋಟಿಯಷ್ಟು ಮಾತ್ರ ಹಿಂತಿರುಗಿಸಿದ್ದರು ಎನ್ನಲಾಗಿದೆ.
ಇದಲ್ಲದೆ, ಹೊಸ ಗ್ರಾಹಕರನ್ನು ಸೃಷ್ಟಿಸಿಕೊಟ್ಟರೆ ಮತ್ತಷ್ಟು ಕಮಿಷನ್ ನೀಡುವ ಆಮಿಷ ತೋರಿಸಿ ಇನ್ನಷ್ಟು ಗ್ರಾಹಕರನ್ನು ಸೇರಿಸಿಕೊಳ್ಳುತ್ತಿದ್ದರು. ಕ್ರಿಪ್ಟೋ ಕರೆನ್ಸಿ ಸೇರಿದಂತೆ ವಿವಿಧ ಹೂಡಿಕೆ ಕಂಪನಿಗಳಲ್ಲಿ ಇನ್ವೆಸ್ಟ್ ಮಾಡಿಸುವುದಾಗಿಯೂ ಹೇಳುತ್ತಿದ್ದರು. ಫೆ.21ರಂದು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಕಂಪನಿಯ ಮೋಸದ ಬಗ್ಗೆ ಹೈದರಾಬಾದ್ ನಲ್ಲಿ ಇಸಿಐಆರ್ ದಾಖಲು ಮಾಡಿದ್ದು, ತನಿಖೆ ಆರಂಭಿಸಿದ್ದಾರೆ. ಇನ್ನಷ್ಟು ಹೆಚ್ಚು ಜನರು ಮೋಸ ಹೋದವರು ಇದ್ದಿರಬಹುದು. ಹಣವೂ ದೊಡ್ಡ ಮಟ್ಟದಲ್ಲಿ ವಂಚನೆ ಆಗಿದೆ. ಎಫ್ಐಆರ್ ಇಲ್ಲಿ ದಾಖಲಾಗಿದ್ದರೂ, ಇಡಿಯವರು ತನಿಖೆ ನಡೆಸಲಿದ್ದಾರೆ ಎಂದು ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
At least 183 people in Bengaluru lost over Rs 41 crore after investing in a Hyderabad-based firm that recently busted as a Rs 850-crore Ponzi scheme.The victims were allegedly duped by Falcon Invoice Discounting, which promised annual returns of 11-22% on short-term investments.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
15-08-25 09:22 pm
Mangalore Correspondent
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm