ಬ್ರೇಕಿಂಗ್ ನ್ಯೂಸ್
24-01-25 09:59 pm HK News Desk ಕ್ರೈಂ
ಹೈದರಾಬಾದ್, ಜ.24: ನಿವೃತ್ತ ಯೋಧನೊಬ್ಬ ಪತ್ನಿಯನ್ನು ಕೊಂದು ಮೃತದೇಹವನ್ನು ಕತ್ತರಿಸಿ ಕುಕ್ಕರ್ ನಲ್ಲಿಟ್ಟು ಬೇಯಿಸಿ ಕೆರೆಗೆ ಎಸೆದಿರುವ ಭಯಾನಕ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ರಂಗಾರೆಡ್ಡಿ ಜಿಲ್ಲೆಯ ಮೀರ್ ಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ವೆಂಕಟೇಶ್ವರ ಕಾಲೊನಿಯಲ್ಲಿ ಜ.16ರಂದು ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ಪುಟ್ಟವೆಂಕಟ ಮಾಧವಿ (35) ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಂದ ನಿವೃತ್ತ ಸೈನಿಕ ಗುರುಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜ.16ರಂದು ಪತಿಯೊಂದಿಗೆ ಜಗಳವಾಡಿ ಮನೆಯಿಂದ ಹೊರ ಹೋಗಿದ್ದ ಮಗಳು ಕಾಣೆಯಾಗಿದ್ದಾಳೆಂದು ಆಕೆಯ ತಾಯಿ ಜ.18ರಂದು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಪತಿ ಗುರುಮೂರ್ತಿಯನ್ನು ವಶಕ್ಕೆ ಪಡೆದು ಟ್ರೀಟ್ಮೆಂಟ್ ನೀಡಿದಾಗ ನಿಜವಿಚಾರ ಬಯಲಾಗಿದೆ.
ಮಾಂಸ, ಮೂಳೆಗಳನ್ನು ಕುಕ್ಕರ್ ನಲ್ಲಿ ಬೇಯಿಸಿದ್ದ
ಪತ್ನಿಯನ್ನು ಕೊಂದ ಆರೋಪಿ ಸ್ನಾನಗೃಹದಲ್ಲಿ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಬಳಿಕ ವಾಸನೆ ಬರಬಾರದೆಂದು ಕುಕ್ಕರ್ ನಲ್ಲಿಟ್ಟು ಬೇಯಿಸಿದ್ದಾನೆ. ಮೂಳೆಗಳನ್ನು ಬೇರ್ಪಡಿಸಿ ಪುಡಿ ಮಾಡಿ ಮತ್ತೆ ಬೇಯಿಸಿದ್ದಾನೆ. ಯಾರಿಗೂ ಅನುಮಾನ ಬಾರದಂತೆ ಕೆರೆಯಲ್ಲಿ ಎಸೆದು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೇನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಗುರುಮೂರ್ತಿ ನಿವೃತ್ತಿ ಬಳಿಕ ಹೈದರಾಬಾದ್ ನ ಕಾಂಚನ್ ಬಾಗ್ ನಲ್ಲಿರುವ ಡಿಆರ್ ಡಿಓ ಕೇಂದ್ರದಲ್ಲಿ ಭದ್ರತಾ ಸಿಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. 13 ವರ್ಷಗಳ ಹಿಂದೆ ಮಾಧವಿಯನ್ನು ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಐದು ವರ್ಷಗಳಿಂದ ವೆಂಕಟೇಶ್ವರ ಕಾಲನಿಯಲ್ಲಿ ವಾಸವಿದ್ದರು. ಕೌಟುಂಬಿಕ ಕಲಹದಿಂದ ಬೇಸತ್ತು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ.
ತಂದೂರಿ ರೀತಿ ಬೇಯಿಸಿದ್ದ ಕಟುಕ
ಪತ್ನಿಯನ್ನು ಹತ್ಯೆಗೈದು ಕುಕ್ಕರ್ ನಲ್ಲಿ ಬೇಯಿಸಿದ ಪ್ರಕರಣ 1995ರಲ್ಲಿ ದೆಹಲಿಯಲ್ಲಿ ನಡೆದಿದ್ದ ನೈನಾ ಸಾಹ್ನಿಯ ಕೊಲೆ ಪ್ರಕರಣ ನೆನಪಿಸಿದೆ. ಪತ್ನಿಯನ್ನು ಕೊಂದಿದ್ದ ಪತಿ ಸುಶೀಲಾ ಶರ್ಮಾ ಎಂಬಾತ ಮೃತದೇಹವನ್ನು ಸ್ನೇಹಿತನ ರೆಸ್ಟೋರೆಂಟ್ ನಲ್ಲಿ ತಂದೂರಿ ಚಿಕನ್ ರೀತಿ ಬೇಯಿಸಿ ಬಿಸಾಡಿದ್ದ ಘಟನೆ ನಡೆದಿತ್ತು. ಕಳೆದ ವರ್ಷ 2024 ಜೂನ್ 9ರಂದು ಮುಂಬೈನ ಮೀರಾ ರೋಡ್ ನಲ್ಲಿ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಸರಸ್ವತಿ ವೈದ್ಯ ಅವರನ್ನು ಕೊಲೆ ಮಾಡಿದ್ದ ಮನೋಜ್ ಸಾನೆ ಎಂಬಾತ ಮೃತದೇಹವನ್ನು ಕುಕ್ಕರ್ ನಲ್ಲಿ ಬೇಯಿಸಿ ಬೀದಿ ನಾಯಿಗಳಿಗೆ ಎಸೆದಿದ್ದ. ದಿಲ್ಲಿಯಲ್ಲಿ 2022ರಲ್ಲಿ ಶ್ರದ್ಧಾ ವಾಕರ್ ಎಂಬ ಯುವತಿಯನ್ನು ಲಿವ್ ಇನ್ ರಿಲೇಶನ್ನಲ್ಲಿದ್ದ ಯುವಕನೊಬ್ಬ ಆಕೆಯ ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಸಮೀಪದ ಅರಣ್ಯದಲ್ಲಿ ಎಸೆದು ಬಂದಿದ್ದ. ಪ್ರಕರಣ ಪತ್ತೆ ಮಾಡಿದ್ದ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದರು.
A Hyderabad man allegedly killed his wife and attempted to cover up the crime by chopping up the body and boiling the parts in a pressure cooker. Guru Murthy, 45, a former soldier who works as a security guard with the Defence Research and Development Organisation (DRDO), allegedly confessed to the police, but his horrific story is yet to be corroborated.
14-03-25 11:11 pm
Bangalore Correspondent
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
ಕುದುರೆಮುಖ ರಾಷ್ಟ್ರೀಯ ಅರಣ್ಯಕ್ಕೆ ಬೆಂಕಿ ; ಸ್ಥಳೀಯರ...
13-03-25 02:56 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
14-03-25 10:35 pm
Mangalore Correspondent
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm