ಬ್ರೇಕಿಂಗ್ ನ್ಯೂಸ್
13-01-25 03:30 pm Mangaluru Correspondent ಕ್ರೈಂ
ಮಂಗಳೂರು, ಜ.13: ತಣ್ಣೀರುಬಾವಿ ಬಳಿಯ ಗಣೇಶ್ ಕಟ್ಟೆ ಎಂಬಲ್ಲಿ ಭಾನುವಾರ (ನಿನ್ನೆ) ರಾತ್ರಿ ಯುವಕರ ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಗಾಂಜಾ ಮತ್ತು ಕುಡಿದ ಮತ್ತಿನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘಟನೆಯ ಬಗ್ಗೆ ಪಣಂಬೂರು ಠಾಣೆಯಲ್ಲಿ ಇತ್ತಂಡಗಳಿಂದ ದೂರು, ಪ್ರತಿದೂರು ದಾಖಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಹಿಂದು- ಮುಸ್ಲಿಂ ಗುಂಪುಗಳ ನಡುವೆ ಹೊಡೆದಾಟ ಆಗಿದೆಯೆಂದು ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಯತ್ನವೂ ನಡೆದಿದೆ.
ವೆಂಕಟೇಶ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಪ್ರಜ್ವಲ್ ಎಂಬವರು ಮದ್ಯಪಾನ ಮಾಡಿಕೊಂಡು ಸಿಗರೇಟ್ ಸೇದುತ್ತಿದ್ದಾಗ ಪ್ರೀತಂ ಮತ್ತು ಸನ್ವಿತ್ ಎಂಬವರು ಸ್ಥಳಕ್ಕೆ ಬಂದು ಸಿಗರ್ ಲೈಟ್ ಕೇಳಿದ್ದಾರೆ. ಪ್ರಜ್ವಲ್ ಸಿಗರ್ ಲೈಟ್ ನೀಡಿದ್ದು, ಹಿಂತಿರುಗಿ ನೀಡದೇ ಇದ್ದ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಗಾಂಜಾ ಅಮಲಿನಲ್ಲಿದ್ದ ಯುವಕರು ಪರಸ್ಪರ ಹೊಡೆದಾಡಿದ್ದಾರೆ. ಘಟನೆ ಸಂಬಂಧಿಸಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಒಬ್ಬನನ್ನು ಅಡ್ಮಿಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಾರ್ತಿಕ್ ತಲೆಗೆ ಬೀಯರ್ ಬಾಟಲಿಯಿಂದ ಹೊಡೆದು ಗಾಯಗೊಳಿಸಿದ್ದು, ಇತರ 4-5 ಜನರು ಸೇರಿ ಮರದ ದೊಣ್ಣೆಯಿಂದ ಪ್ರಜ್ವಲ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್ ಎಂಬವರಿಗೆ ಹಲ್ಲೆ ನಡೆಸಲಾಗಿದೆ. ಪ್ರೀತಂ ಎಂಬಾತ ನೀಡಿದ ದೂರಿನಂತೆ, ಪಣಂಬೂರು ಠಾಣೆಯಲ್ಲಿ ವೆಂಕಟೇಶ್, ಕಾರ್ತಿಕ್, ಸಂತೋಷ್, ಸೈಫ್, ಧನುಷ್, ಪ್ರಜ್ವಲ್ ಅವರನ್ನು ಆರೋಪಿಗಳೆಂದು ಹೇಳಿದ್ದು, ಈ ಪೈಕಿ ಕಾರ್ತಿಕ್, ಸಂತೋಷ್, ಧನುಷ್, ಪ್ರಜ್ವಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಯಾಗಿ ಪ್ರಜ್ವಲ್ ನೀಡಿದ ದೂರಿನಂತೆ, ಪ್ರೀತಂ ಮತ್ತು ಸನ್ವಿತ್ ಹಾಗೂ ಇತರರ ಮೇಲೆ ದೂರು ದಾಖಲಾಗಿದೆ.
ಸದ್ರಿ ಘಟನೆಗೆ ಸಂಬಂಧಿಸಿ ವಾಟ್ಸಪ್ ನಲ್ಲಿ ಬೆಂಗ್ರೆ ಪರಿಸರದಲ್ಲಿ ಹಿಂದುಗಳ ಮನೆಯನ್ನು ಗುರಿಯಾಗಿಸಿ ತಲವಾರು ಸಹಿತ ಮುಸ್ಲಿಮರು ನುಗ್ಗಿದ್ದು ಪರಿಶಿಷ್ಟ ಸಮುದಾಯದ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಪರಾರಿಯಾಗುವ ಯತ್ನದಲ್ಲಿ ಒಬ್ಬನನ್ನು ಸ್ಥಳೀಯರು ಸೆರೆಹಿಡಿದಿದ್ದಾಗಿ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಣ್ಣೀರುಬಾವಿ, ಬೆಂಗ್ರೆ ಪರಿಸರದಲ್ಲಿ ಗಾಂಜಾ ವ್ಯಸನ ಜೋರಾಗಿದ್ದು, ಯುವಕರು ಹಗಲಿನಲ್ಲೇ ತೇಲಾಡುತ್ತ ಇರುತ್ತಾರೆ. ಎರಡು ದಿನಗಳಿಂದ ಬೀಚ್ ಉತ್ಸವ ಕಾರಣಕ್ಕೆ ಯುವಕರು ಜಾಲಿ ಮಾಡುತ್ತಿದ್ದರು. ಅದೇ ಗುಂಗಿನಲ್ಲಿ ಗಲಾಟೆ ಆಗಿರುವ ಸಾಧ್ಯತೆಯಿದೆ.
Mangalore Fight near Tannirbhavi beach Two cases filed for spreading communal rumours, four arrested. An altercation late on January 12 near Ganesh Katte, Tannirbhavi, under the jurisdiction of Panambur police station, escalated into a violent clash between two groups
27-06-26 08:31 pm
HK News Staffer
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
27-06-26 09:10 pm
HK News Staffer
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am