ಬ್ರೇಕಿಂಗ್ ನ್ಯೂಸ್
09-01-25 01:26 pm Mangaluru Correspondent ಕ್ರೈಂ
ಮಂಗಳೂರು, ಜ.10: ಹಳೆಯ ನಾಣ್ಯಗಳ ಖರೀದಿಸುತ್ತೇವೆಂದು ಹೇಳಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 58 ಲಕ್ಷ ರೂ. ವಂಚಿಸಿದ ಘಟನೆ ನಡೆದಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ವ್ಯಕ್ತಿ 2024ರ ನವೆಂಬರ್ 25ರಂದು ಫೇಸ್ಬುಕ್ ನಲ್ಲಿ ಹಳೆಯ ನಾಣ್ಯಗಳನ್ನು ನೀಡಿದರೆ, ಖರೀದಿಸಿ ಹೆಚ್ಚಿನ ಹಣ ನೀಡುವುದಾಗಿ ತಿಳಿಸಿರುವ ಜಾಹೀರಾತನ್ನು ನೋಡಿದ್ದಾರೆ. ಬಳಿಕ ಆ ಜಾಹೀರಾತಿನಲ್ಲಿದ್ದ ವಾಟ್ಸ್ಆ್ಯಪ್ ಖಾತೆಗೆ ತಮ್ಮ ಬಳಿ ಇದ್ದ 15 ಹಳೆಯ ನಾಣ್ಯಗಳ ಫೋಟೋಗಳನ್ನು ಕಳುಹಿಸಿದ್ದರು. ಅದರಂತೆ, ಆ ಕಡೆಯಿಂದ 15 ಹಳೆಯ ನ್ಯಾಣ್ಯಗಳನ್ನು ಖರೀದಿಸಿ, ಅದಕ್ಕೆ ಪ್ರತಿಯಾಗಿ 49,00,000 ರೂ. ಹಣ ನೀಡುವುದಾಗಿ ತಿಳಿಸಿದ್ದರು.
ಬೇರೆ ಬೇರೆ ಶುಲ್ಕ ವಸೂಲಿ;
ಆದರೆ ನಾಣ್ಯ ಮಾರಾಟ ಮಾಡಬೇಕಿದ್ದರೆ ಮೊದಲಿಗೆ ಆರ್ಬಿಐ ನೋಂದಣಿ ಮಾಡಲು 750 ರೂ. ಹಣ ಪಾವತಿಸುವಂತೆ ಆರೋಪಿ ತಿಳಿಸಿದ್ದು, ಮಂಗಳೂರಿನ ವ್ಯಕ್ತಿ ಯುಪಿಐ ಮೂಲಕ ಹಣ ಪಾವತಿಸಿದ್ದರು. ಆ ಬಳಿಕ ಜಿಎಸ್ಟಿ ಪ್ರೊಸೀಡಿಂಗ್ ಡಾಟಾ ಶುಲ್ಕವೆಂದು 17,500 ರೂ., ಇನ್ಶೂರೆನ್ಸ್ ಶುಲ್ಕ 94,500 ರೂ., ಟಿಡಿಎಸ್ ಮೊತ್ತದ ಶುಲ್ಕ 49,499 ರೂ., ಜಿಪಿಎಸ್ ಶುಲ್ಕ 71,500 ರೂ., ಐಟಿಆರ್ ಶುಲ್ಕ 39,990 ರೂ. ಹಾಗೂ ಆರ್ಬಿಐ ನೋಟಿಸ್ ಪೆಂಡಿಂಗ್ ಶುಲ್ಕವೆಂದು 3,50,000 ರೂ. ಹಣ ಪಾವತಿಸುವಂತೆ ಆರೋಪಿ ವಾಟ್ಸ್ಆ್ಯಪ್ ನಂಬರ್ಗೆ ಸಂದೇಶ ಕಳಿಸಿದ್ದಾನೆ. ಆತ ತಿಳಿಸಿದಂತೆ ತಾವು ಹಣವನ್ನು ವರ್ಗಾವಣೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆನಂತರ, 2024ರ ಡಿಸೆಂಬರ್ 15ರಂದು ತಮ್ಮ ಮೊಬೈಲ್ ನಂಬರ್ಗೆ ಕರೆ ಬಂದಿದ್ದು, ಆ ಕಡೆಯಿಂದ ವ್ಯಕ್ತಿ ತನ್ನನ್ನು ಮುಂಬೈ ಸೈಬರ್ ಪೊಲೀಸ್ ಆಯುಕ್ತ ಗೌರವ್ ಶಿವಾಜಿ ರಾವ್ ಶಿಂದೆ ಎಂಬುದಾಗಿ ಪರಿಚಯಿಸಿಕೊಂಡಿದ್ದು ಆರ್ಬಿಐ ಕಡೆಯಿಂದ ನೋಟಿಸ್ ಬಂದಿದ್ದು, ನಿಮ್ಮನ್ನು ಬಂಧಿಸುತ್ತೇವೆ. ಆದ್ದರಿಂದ ಆರ್ಬಿಐ ಗೈಡ್ಲೈನ್ಸ್ ಪ್ರಕಾರ 12,55,000 ರೂ. ಹಣ ಪಾವತಿಸಬೇಕು. ಬಳಿಕ ನಾವು ಚೆಕ್ ಮಾಡಿ, 1 ಗಂಟೆಯೊಳಗೆ ನಿಮ್ಮ ಖಾತೆಗೆ ಎಲ್ಲ ಹಣವನ್ನು ವರ್ಗಾಯಿಸುತ್ತೇವೆ ಎಂದು ನಂಬಿಸಿದ್ದಾನೆ.
ಅದರಂತೆ, ಅಪರಿಚಿತ ಕರೆಯ ವ್ಯಕ್ತಿ ತಿಳಿಸಿದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸಂಶಯಪಟ್ಟು ಅವರನ್ನು ಪ್ರಶ್ನಿಸಿದ್ದಕ್ಕೆ ಅಪರಿಚಿತನು ಏಕಾಏಕಿ ಗದರಿಸಲು ಶುರು ಮಾಡಿದ್ದಾನೆ. ಇದೇ ರೀತಿ 2024ರ ನವೆಂಬರ್ 25ರಿಂದ ಡಿ.30ರ ವರೆಗೆ ಅಪರಿಚಿತರು ಫೋನ್ ಕರೆ ಮಾಡಿ ಹಾಗೂ ವಾಟ್ಸ್ಆ್ಯಪ್ ಖಾತೆಗೆ ಸಂದೇಶ ಕಳಿಸಿ, ಜಿಎಸ್ಟಿ ಪ್ರೊಸೀಡಿಂಗ್ ಡಾಟಾ, ಇನ್ಶೂರೆನ್ಸ್ ಶುಲ್ಕ, ಟಿಡಿಎಸ್ ಮೊತ್ತದ ಶುಲ್ಕ, ಜಿಪಿಎಸ್ ಶುಲ್ಕ, ಐಟಿಆರ್ ಶುಲ್ಕ ಹಾಗೂ ಆರ್ಬಿಐ ನೋಟಿಸ್ ಪೆಂಡಿಂಗ್ ಹಾಗೂ ಇತರೆ ಶುಲ್ಕಗಳನ್ನು ಪಾವತಿಸುವಂತೆ ತಿಳಿಸಿ, ಹಂತ ಹಂತವಾಗಿ ಒಟ್ಟು 58,26,399 ರೂ. ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ತಮಗೆ ಮೋಸ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ.
In yet another case of online scam, a man from Mangaluru ended up losing Rs 58.26 lakh while attempting to sell old coins through an online platform. The victim came across the platform on Facebook, and as he connected with an individual from the platform, he ended up trapped in the foul play of cybercriminals.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 04:52 pm
HK News Staffer
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
15-08-26 06:11 pm
HK News Staffer
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm
Belthangady Couple Suicide, Bangalore: ಬೆಂಗಳೂ...
15-08-26 01:28 pm