ಬ್ರೇಕಿಂಗ್ ನ್ಯೂಸ್
29-12-24 10:50 pm Mangalore Correspondent ಕ್ರೈಂ
ಮಂಗಳೂರು, ಡಿ.29: ನಕಲಿ ಷೇರು ಮಾರುಕಟ್ಟೆ ಜಾಲದಲ್ಲಿ ಮಂಗಳೂರಿನ ಕದ್ರಿ ಠಾಣೆ ವ್ಯಾಪ್ತಿಯ ಮತ್ತೊಬ್ಬ ಮಹಿಳೆ 8.75 ಲಕ್ಷ ಹಣ ಕಳಕೊಂಡಿದ್ದಾರೆ. ಷೇರು ಮೂಲಕ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಯೂಟ್ಯೂಬ್ ನಲ್ಲಿ ಬಂದ ಮಾಹಿತಿಯನ್ನು ಆಧರಿಸಿ ಮೊಬೈಲ್ ಪ್ಲೇ ಸ್ಟೋರ್ ನಲ್ಲಿ SMCTK App ಅನ್ನು ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ಲೋಡ್ ಮಾಡಿದ್ದು, ಆಬಳಿಕ ತನ್ನ ಮೊಬೈಲ್ ವಿವರ ಮತ್ತು ಬ್ಯಾಂಕ್ ಖಾತೆ ನಮೂದಿಸಿದ್ದರು.
ಆನಂತರ ಮಹಿಳೆಯ ಮೊಬೈಲ್ ನಂಬರನ್ನು ಎಸ್ ಎಂಸಿ ಗ್ಲೋಬಲ್ ಸೆಕ್ಯುರಿಟೀಸ್, ಎಸ್ ಎಂಸಿ ಮಾರ್ಕೆಟ್ ವಾಚ್ ವಾಟ್ಸಪ್ ಗ್ರೂಪ್ ಗೆ ಸೇರಿಸಲಾಗಿತ್ತು. ಅದರಲ್ಲಿ ಗ್ರೂಪ್ ಅಡ್ಮಿನ್ ಆಗಿರುವ ಅಜಯ್ ಗಾರ್ಗ್ ಎಂಬಾತ ತನ್ನನ್ನು ಕಂಪನಿ ಸಿಇಓ ಎಂದು ಪರಿಚಯಿಸಿ ವಾಟ್ಸಪ್ ಕರೆ ಮಾಡಿದ್ದ. ಅಲ್ಲದೆ, ತಮ್ಮ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಸಿಗುವುದಾಗಿ ನಂಬಿಸಿದ್ದಾನೆ.
ಆನಂತರ ಖಾಸಗಿಯಾಗಿ ಚಾಟಿಂಗ್ ಮಾಡುತ್ತ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದ. ಇದರಂತೆ, ಗೂಗಲ್ ಪ್ಲೇ ಸ್ಟೋರಿನಿಂದ ಡೌನ್ಲೋಡ್ ಮಾಡಿದ್ದ ಎಸ್ಎಂಸಿಟಿಕೆ ಆಪ್ ನಲ್ಲಿ ಹಣ ಹೂಡಿಕೆ ಮಾಡಲು ಮುಂದಾಗಿದ್ದು ಆತ ನೀಡಿರುವ ಬ್ಯಾಂಕ್ ಖಾತೆಗಳಿಗೆ ಹಣವನ್ನು ರವಾನಿಸಿದ್ದಾರೆ. ಎರಡು ಬ್ಯಾಂಕ್ ಖಾತೆಗಳಿಗೆ 8,75000 ರುಪಾಯಿ ಹಣವನ್ನು ಹಂತ ಹಂತವಾಗಿ ನೆಫ್ಟ್ ಮೂಲಕ ಹಾಕಿದ್ದರು. ಆಬಳಿಕ ಏಪ್ ಅನ್ನು ಗಮನಿಸಿದಾಗ ತನ್ನ ಹಣ ದುಪ್ಪಟ್ಟು ಆಗಿರುವುದು ಕಂಡುಬಂದಿತ್ತು. ಅಲ್ಲದೆ, ಸ್ಪಷ್ಟವಾಗಿ 16,69,229 ರೂ. ಹಣ ಇರುವುದಾಗಿ ತೋರಿಸಿತ್ತು. ಈ ಹಣವನ್ನು ಹಿಂತಿರುಗಿ ಪಡೆಯಲು ಸಿಇಓ ಅಜಯ್ ಗಾರ್ಗ್ ಅವರನ್ನು ಮಹಿಳೆ ಸಂಪರ್ಕಿಸಿದ್ದಾರೆ.
ಆದರೆ ಲಾಭದ ಹಣವನ್ನು ಪಡೆಯಲು 1,97,307 ರೂ. ಹಣವನ್ನು ಟ್ಯಾಕ್ಸ್ ರೂಪದಲ್ಲಿ ಕಟ್ಟಬೇಕಾಗುತ್ತದೆ. ಆ ಹಣವನ್ನು ಕಟ್ಟಿದರೆ ಮಾತ್ರ ಲಾಭದ ಹಣ ಸಿಗುತ್ತದೆ ಎಂದು ಆತ ಹೇಳಿದ್ದಾನೆ. ಇದರಿಂದ ತಾನು ಮೋಸ ಹೋಗಿರುವುದಾಗಿ ತಿಳಿದು ಮಂಗಳೂರಿನ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
Mangalore kadri Woman looses 8.75 lakhs in fake stock market after watching fake youtube video on stock market. A case has been registered at the CEN police station.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 11:04 pm
HK News Desk
Puttur News, Girl Pregnant, Father Arrest: ಸಹ...
05-07-25 09:06 pm
Puttur, Pregnant, Arrest, Jagannivasa Rao: ಸಹ...
05-07-25 01:20 pm
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm