ಬ್ರೇಕಿಂಗ್ ನ್ಯೂಸ್
10-12-24 06:46 pm Mangalore Correspondent ಕ್ರೈಂ
ಮಂಗಳೂರು, ಡಿ.10: ಕಂಕನಾಡಿ ಮಾರುಕಟ್ಟೆ ಬಳಿಯಲ್ಲಿ ನಿಲ್ಲಿಸಿದ್ದ ಕ್ರೆಟಾ ಕಾರಿನಿಂದ ಗ್ಲಾಸ್ ಒಡೆದು ಚಿನ್ನಾಭರಣಗಳಿದ್ದ ವ್ಯಾನಿಟಿ ಬ್ಯಾಗನ್ನು ಕಳವು ಮಾಡಿದ್ದ ಪ್ರಕರಣವನ್ನು ಕದ್ರಿ ಪೊಲೀಸರು 24 ಗಂಟೆಯಲ್ಲಿ ಭೇದಿಸಿದ್ದಾರೆ.
ಡಿ.8ರ ಭಾನುವಾರ ರಾತ್ರಿ 10.30ರ ವೇಳೆಗೆ ಘಟನೆ ನಡೆದಿತ್ತು. ನಗರದ ಕಂಕನಾಡಿ ಮಾರುಕಟ್ಟೆ ಹತ್ತಿರ ಪಾರ್ಕ್ ಮಾಡಿ ಹೋಗಿದ್ದ ಕ್ರೆಟಾ ಕಾರಿನಲ್ಲಿದ್ದ ವ್ಯಾನಿಟಿ ಬ್ಯಾಗನ್ನು ಕಳ್ಳರು ಗ್ಲಾಸ್ ಒಡೆದು ಕಳವು ಮಾಡಿದ್ದರು. ಬ್ಯಾಗ್ ನಲ್ಲಿ 6.80 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಲ್ಯಾಪ್ ಟಾಪ್ ಇತ್ತು. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



ತನಿಖೆ ನಡೆಸಿದ ಎಸ್ಐ ಉಮೇಶ್ ನೇತೃತ್ವದ ಪೊಲೀಸರು ಪರಿಸರದ ಸಿಸಿಟಿವಿಗಳನ್ನು ಆಧರಿಸಿ ತನಿಖೆ ನಡೆಸಿದ್ದರು. ಆರೋಪಿಯನ್ನು ಗುರುತಿಸಿ, ಆತನ ಹಿಂದೆ ಬಿದ್ದಿದ್ದರು. ನಿನ್ನೆ ರಾತ್ರಿ (ಡಿ.9) 10.30ರ ವೇಳೆಗೆ ಕಂಕನಾಡಿ ಪರಿಸರದ ಮೆಡಿಕಲ್ ಒಂದಕ್ಕೆ ಇನ್ನೊಬ್ಬ ಯುವಕನ ಜೊತೆಗೆ ಬಂದಿದ್ದ. ಅದೇ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಅಡ್ಯಾರ್ ಪದವು ನಿವಾಸಿ ಅಬ್ದುಲ್ ಅಕ್ರಮ್ (33) ಎಂದು ಗುರುತಿಸಲಾಗಿದೆ.
ಅಕ್ರಮ್ ಮೊದಲ ಬಾರಿಗೆ ಕಳವು ಕೃತ್ಯ ನಡೆಸಿದ್ದು, ಆರೋಪಿಯನ್ನು ಪೊಲೀಸರು ಹಿಂದೆ ಬಿದ್ದು 24 ಗಂಟೆಯೊಳಗೆ ಬಂಧಿಸಿದ್ದೇ ರೋಚಕ. ಕೃತ್ಯಕ್ಕೆ ಬಳಸಿದ್ದ ಆಕ್ಸೆಸ್ ಸ್ಕೂಟರ್ ಹಾಗೂ ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದಂತೆ 7.30 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ದೂರುದಾರ ಮಹಿಳೆ ಕೋಣಾಜೆಯವರಾಗಿದ್ದು, ತಾಯಿ ಮನೆಯಿಂದ ರಾತ್ರಿ ಗಂಡನ ಮನೆಗೆ ತೆರಳುತ್ತಿದ್ದರು. ರಾತ್ರಿ ಲೇಟ್ ಆಗಿದ್ದರಿಂದ ಊಟ ಮಾಡ್ಕೊಂಡು ಹೋಗೋಣ ಎಂದು ಕಾರನ್ನು ಕಂಕನಾಡಿಯಲ್ಲಿ ನಿಲ್ಲಿಸಿ ಹೊಟೇಲ್ ಹೋಗಿದ್ದರು. ಅಷ್ಟರಲ್ಲಿ ಕಾರಿನ ಗ್ಲಾಸ್ ಒಡೆದು ಚಿನ್ನಾಭರಣ ಎಗರಿಸಲಾಗಿತ್ತು.
Mangalore Kadri police nab accused within 24 hrs of theft at Kankandy, recover gold worth Rs 7.3 lakhs. Acting swiftly, the police team traced and arrested Abdul Akram, aged 33, a resident of Adyar village, Mangaluru taluk.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 04:52 pm
HK News Staffer
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
15-08-26 06:11 pm
HK News Staffer
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm
Belthangady Couple Suicide, Bangalore: ಬೆಂಗಳೂ...
15-08-26 01:28 pm