ಬ್ರೇಕಿಂಗ್ ನ್ಯೂಸ್
10-12-24 03:59 pm HK News Desk ಕ್ರೈಂ
ನವದೆಹಲಿ, ಡಿ.9: ಒಂದು ಸ್ಮಾರ್ಟ್ ಫೋನ್ ಕೈಗೆ ಸಿಕ್ಕರೆ ಏನೂ ಮಾಡಲು ಸಾಧ್ಯ ಎಂಬುದನ್ನು ಹಲವರು ತೋರಿಸಿಕೊಟ್ಟಿದ್ದಾರೆ. ಸೈಬರ್ ವಂಚಕರು ತಮ್ಮ ಸ್ಮಾರ್ಟ್ ಬುದ್ಧಿಯನ್ನು ಬಳಸಿ ಕೇವಲ ಮೊಬೈಲ್ ಬಳಸಿಯೇ ಹಲವಾರು ಜನರನ್ನು ಯಾಮಾರಿಸಿ ಹಣ ಕಬಳಿಸಿದ್ದನ್ನೂ ನೋಡಿದ್ದೇವೆ. ಸ್ಪೈನ್ ದೇಶದಲ್ಲಿ 26 ವರ್ಷದ ಯುವತಿಯೊಬ್ಬಳು ಕೇವಲ 8 ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರನ್ನು ತನ್ನ ಬಲೆಗೆ ಬೀಳಿಸಿ ಹಣ ಪೀಕಿಸಿದ್ದು ಈಗ ಸುದ್ದಿಯಾಗಿದೆ.
ಸ್ಪೈನ್ ಪೊಲೀಸರು 26 ವರ್ಷದ ಯುವತಿಯನ್ನು ಅರೆಸ್ಟ್ ಮಾಡಿದ್ದು, 311 ವಂಚನೆ ಕೇಸುಗಳಲ್ಲಿ ಆಕೆಯೇ ಆರೋಪಿಯೆಂದು ಕೇಸು ಜಡಿದಿದ್ದಾರೆ. ಈಕೆ, ಕೇವಲ ಸಾಮಾನ್ಯ ಸ್ಮಾರ್ಟ್ ಫೋನ್ ಮತ್ತು ಕೆಲವು ಏಪ್ಸ್ ಗಳನ್ನು ಬಳಸ್ಕೊಂಡು ಯುವಕರನ್ನು ಪರಿಚಯಿಸ್ಕೊಂಡು ಅವರನ್ನೇ ಯಾಮಾರಿಸುತ್ತ ವಂಚನೆ ಮಾಡುತ್ತಿದ್ದಳು. ಕೇವಲ 8 ತಿಂಗಳಲ್ಲಿ 13,500 ಪೌಂಡ್ ಹಣವನ್ನು ಅಂದರೆ, ಅಂದಾಜು 15 ಲಕ್ಷ ರೂ. ಹಣವನ್ನು ವಂಚನೆ ಮೂಲಕ ಸಂಪಾದಿಸಿದ್ದಾಳೆ.
ಸ್ಪೇನ್ ದೇಶದ ಸ್ಯಾನ್ ಸೆಬಾಸ್ಟಿಯನ್ ನಗರದ ಅಜ್ಕೋಟಿಯಾ ಎಂಬಲ್ಲಿ ಯುವತಿಯ ಬಂಧನ ಮಾಡಲಾಗಿದೆ. ಪೊಲೀಸರು ಬಂಧನ ಮಾಡುತ್ತಲೇ ಯುವತಿ ತನ್ನ ವಂಚನೆ ಜಾಲದ ಬಗ್ಗೆ ಬಾಯಿಬಿಟ್ಟಿದ್ದಾಳೆ. ಇವಳಲ್ಲಿ ಸಾಮಾನ್ಯ ರೀತಿಯ ಸ್ಮಾರ್ಟ್ ಫೋನ್ ಇದ್ದು, ಯುವಕರ ಚಿತ್ರಗಳನ್ನು ಎಐ ತಂತ್ರಜ್ಞಾನದ ಮೂಲಕ ಇನ್ಯಾರದ್ದೋ ಹುಡುಗಿಯರ ಜೊತೆಗಿರುವ ರೀತಿ ಕ್ರಿಯೇಟ್ ಮಾಡುತ್ತಿದ್ದಳು. ಆನಂತರ ಆ ಚಿತ್ರವನ್ನು ಯುವಕನ ಕುಟುಂಬಸ್ಥರಿಗೆ ಕಳಿಸಿಕೊಟ್ಟು ಹಣ ಕೊಡದೇ ಇದ್ದರೆ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದಳು. ಆಮೂಲಕ ಹಣ ಗಿಟ್ಟಿಸಿಕೊಳ್ಳುತ್ತಿದ್ದಳು.
ಪೊಲೀಸರು ಆಕೆಯ ಮೊಬೈಲ್ ತಪಾಸಣೆ ನಡೆಸಿದಾಗ, ಬರೋಬ್ಬರಿ 3500 ಮಂದಿ ಜೊತೆಗೆ ಇದೇ ರೀತಿ ಮೋಸದ ಚಾಟಿಂಗ್ ಮಾಡಿರುವುದು ಕಂಡುಬಂದಿದೆ. ಅವರನ್ನೆಲ್ಲ ಬ್ಲಾಕ್ಮೇಲ್ ಮಾಡಿದ್ದಾಳೆಯೇ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
With the advent of the internet and smartphones, our lives have become increasingly intertwined with these technologies. While some utilise them for personal and societal benefit, others exploit them for malicious purposes.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 04:52 pm
HK News Staffer
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
15-08-26 06:11 pm
HK News Staffer
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm
Belthangady Couple Suicide, Bangalore: ಬೆಂಗಳೂ...
15-08-26 01:28 pm