ಬ್ರೇಕಿಂಗ್ ನ್ಯೂಸ್
07-12-24 09:48 pm Mangalore Correspondent ಕ್ರೈಂ
ಮಂಗಳೂರು, ಡಿ.7 : ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ನಂಬಿಸಿದ ಸೈಬರ್ ವಂಚಕರು ವ್ಯಕ್ತಿಯೊಬ್ಬರಿಗೆ 46 ಲಕ್ಷ ರೂ. ವಂಚಿಸಿದ ಪ್ರಸಂಗ ನಡೆದಿದ್ದು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೊಬ್ಬರ ವಾಟ್ಸಾಪ್ ನಂಬರ್ ಗೆ ಮೆಸೇಜ್ ಮಾಡಿದ್ದ ಶ್ರದ್ಧಾ ಬೆಲಾನಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಷೇರು ಟ್ರೇಡಿಂಗ್ನಲ್ಲಿ ಹಣ ತೊಡಗಿಸಿದರೆ ಶೇ.500ರಷ್ಟು ಲಾಭಾಂಶ ಬರುವುದಾಗಿ ನಂಬಿಸಿದ್ದರು. ಅದರಂತೆ ಈ ವ್ಯಕ್ತಿ ಆತ ಕಳುಹಿಸಿದ ಲಿಂಕ್ ಒತ್ತಿ ಷೇರು ಮಾರುಕಟ್ಟೆಗೆ ರಿಜಿಸ್ಟ್ರೇಷನ್ ಮಾಡಿಕೊಂಡಿದ್ದರು. ನಂತರ ಇವರನ್ನು H 777 ARES Stock Exchange Group ಎಂಬ ವಾಟ್ಸಾಪ್ ಗ್ರೂಪ್ ಸೇರಿಸಿದ್ದರು.
ಗ್ರೂಪ್ನಲ್ಲಿ ಶ್ರದ್ಧಾ ಬೆಲಾನಿ ಎಂಬವರು ಗ್ರೂಪ್ ಅಡ್ಮಿನ್ ಆಗಿದ್ದರು. ಮೊದಲಿಗೆ ಈ ವ್ಯಕ್ತಿ ಸ್ಟಾಕ್ ಖರೀದಿ ಮಾಡಲು ತನ್ನ ಬ್ಯಾಂಕ್ನಿಂದ 2 ಲಕ್ಷ ರೂ. ಹಣವನ್ನು ಆರ್ಟಿಜಿಎಸ್ ಮಾಡಿದ್ದರು. ಮರುದಿನ ಆ ಸ್ಟಾಕ್ ಅನ್ನು ಸೇಲ್ ಮಾಡಿದ್ದು, ಇದರಿಂದ 50,000 ರೂ. ಲಾಭವಾಗಿ ಬಂದಿರುತ್ತದೆ. ಇದನ್ನು ನಂಬಿದ ವ್ಯಕ್ತಿ ಇನ್ನೂ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಅದೇ ಖಾತೆಗೆ ಪುನಃ 5 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ. ನಂತರ 9,00,000 ರೂ. ಹಣ ಸೇರಿದಂತೆ ನವೆಂಬರ್ 1 ರಿಂದ 19 ರ ವರೆಗೆ ಒಟ್ಟು 29 ಲಕ್ಷ ರೂ. ಹಾಗೂ ನವೆಂಬರ್ 27ರಂದು ಮತ್ತೆ 1 ಲಕ್ಷ ಹಣ ಹೂಡಿಕೆ ಮಾಡಿದ್ದಾರೆ. ಹೀಗೆ ಒಟ್ಟು 46 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿದ್ದರು.
ನವೆಂಬರ್ 29 ರಂದು ಈ ವ್ಯಕ್ತಿಗೆ ಹಣದ ಅವಶ್ಯಕತೆ ಇದ್ದುದರಿಂದ 20 ಲಕ್ಷ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದ್ದರು. ಆದರೆ ಹಣ ವಿತ್ ಡ್ರಾ ಮಾಡಲು ಆಗಿರಲಿಲ್ಲ. ಈ ಬಗ್ಗೆ ಶ್ರದ್ಧಾ ಬೆಲಾನಿ ಹಾಗೂ ಗ್ರೂಪ್ ಅಡ್ಮಿನ್ ಆಗಿದ್ದ ಅಭಿಷೇಕ್ ರಾಮ್ ಜೀ ಅವರನ್ನು ಸಂಪರ್ಕಿಸಿದಾಗ ಅವರು ಹಣವನ್ನು ವಾಪಾಸ್ ತೆಗೆಯಬೇಕಾದರೆ ಮತ್ತೆ 8.78 ಲಕ್ಷ ರೂ. ಹಣ ವರ್ಗಾವಣೆ ಮಾಡಿ ನಿಮ್ಮ ಖಾತೆಯನ್ನು ಮುಕ್ತಾಯ ಮಾಡಿಕೊಳ್ಳಬಹುದಾಗಿ ತಿಳಿಸಿದ್ದರು. ಈ ಬಗ್ಗೆ ಅನುಮಾನ ಬಂದ ಈ ವ್ಯಕ್ತಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಶ್ರದ್ದಾ ಬೆಲಾನಿ ಮತ್ತು ಅಭಿಷೇಕ್ ರಾಮ್ ಜೀ ಎಂಬವರು ಖಾಸಗಿ ಶೇರು ಕಂಪನಿಯ ಹೆಸರಿನಲ್ಲಿ ಆನ್ಲೈನ್ ಮೂಲಕ ಅಕ್ಟೋಬರ್ 24 ರಿಂದ ನವೆಂಬರ್ 27ರ ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 46 ಲಕ್ಷ ಹಣ ಪಾವತಿಸಿ ಬಳಿಕ ಮರು ಪಾವತಿ ಮಾಡದೆ ಮೋಸ ಮಾಡಿದ್ದಾರೆ ಎಂದವರು ದೂರು ನೀಡಿದ್ದಾರೆ.
Fraud in the name of high returns in stock market, Mangalore man looses 46 lakhs. A case has been registered at the cyber crime police station.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 04:52 pm
HK News Staffer
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
15-08-26 06:11 pm
HK News Staffer
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm
Belthangady Couple Suicide, Bangalore: ಬೆಂಗಳೂ...
15-08-26 01:28 pm