ಬ್ರೇಕಿಂಗ್ ನ್ಯೂಸ್
06-11-24 09:11 pm HK News Desk ಕ್ರೈಂ
ಹಾಸನ, ನ.6: ಪೊಲೀಸ್ ಕಾನ್ಸ್ ಟೇಬಲ್ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸಿರುವ ಹಾಸನ ಪೊಲೀಸರು, ಕೊಲೆಗೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೇ ಕಾರಣ ಎನ್ನುವ ವಿಚಾರವನ್ನು ಪತ್ತೆ ಮಾಡಿದ್ದಾರೆ.
ಕೆಐಎಸ್ಎಫ್ ಪಡೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸ್ ಸಿಬಂದಿಯಾಗಿದ್ದ ಬಿವಿ ಹರೀಶ್ ಕೊಲೆಯಾಗಿದ್ದರು. ನ.11ರಂದು ಮದುವೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದರು. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಹಾಸನದಿಂದ ತನ್ನ ಸ್ವಗ್ರಾಮ ಅರಸೀಕೆರೆ ತಾಲೂಕಿನ ಬಾಗೇಶಪುರಕ್ಕೆ ತೆರಳುತ್ತಿದ್ದಾಗಲೇ ಬೈಕಿನಲ್ಲಿ ತೆರಳುತ್ತಿದ್ದಾಗ ಮೂವರು ಆಗಂತುಕರು ಅಡ್ಡಗಟ್ಟಿ ಕಣ್ಣಿಗೆ ಮೆಣಸಿನ ಪುಡಿ ಎರಚಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು.

ಘಟನೆ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ್ದು, ಹರೀಶ್ ಹಾಸನದಲ್ಲಿ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನುವ ಅಂಶವನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಮಾಜಿ ಯೋಧನ ಪತ್ನಿಯೊಂದಿಗೆ ಹರೀಶ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗುತ್ತಿದ್ದು, ಇದೇ ವಿಚಾರದಲ್ಲಿ ಯೋಧ ಮತ್ತು ಹರೀಶ್ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿತ್ತು. ಯೋಧ ಕರ್ತವ್ಯದಲ್ಲಿದ್ದಾಗೆಲ್ಲ ಹರೀಶ್ ಮಹಿಳೆಯ ಮನೆಗೆ ತೆರಳುತ್ತಿದ್ದ ಎನ್ನುವ ಶಂಕೆಯಲ್ಲಿ ಗಲಾಟೆ ಮಾಡಿಕೊಂಡಿದ್ದರು.
ಇದರಿಂದ ಸಿಟ್ಟುಗೊಂಡಿದ್ದ ಯೋಧ ಮೂರು ತಿಂಗಳ ಹಿಂದೆ ಸೇನೆಯ ಕೆಲಸವನ್ನೇ ಬಿಟ್ಟು ಬಂದಿದ್ದು, ಹರೀಶ್ ನನ್ನು ಕೊಲೆ ಮಾಡುವುದಾಗಿ ಹೇಳಿಕೊಂಡಿದ್ದ. ಇದೇ ವಿಚಾರದಲ್ಲಿ ತನ್ನ ಪತ್ನಿಯ ಜೊತೆಗೂ ಗಲಾಟೆ ಮಾಡಿಕೊಂಡಿದ್ದ. ಈ ನಡುವೆ, ಪೊಲೀಸ್ ಪೇದೆ ಹರೀಶ್ ಗೆ ಬೇರೆ ಯುವತಿ ಜೊತೆಗೆ ಮದುವೆ ನಿಶ್ಚಯವಾಗಿತ್ತು. ಇತ್ತೀಚೆಗೆ ತನ್ನ ಊರಲ್ಲಿ ಹೊಸ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿಸಿದ್ದ ಹರೀಶ್ ಮದುವೆ ಸಿದ್ಧತೆಯಲ್ಲಿದ್ದ. ಇದಕ್ಕಾಗಿ ನ.3ರಂದು ಕೆಲಸಕ್ಕೆ ರಜೆ ಪಡೆದು ಆಮಂತ್ರಣ ಪತ್ರಿಕೆ ಹಂಚುವುದರಲ್ಲಿ ತೊಡಗಿದ್ದ. ಮೊನ್ನೆ ರಾತ್ರಿ ಹಾಸನದಿಂದ ರಾತ್ರಿ ವೇಳೆ ತನ್ನ ಸ್ವಂತ ಊರಿಗೆ ತೆರಳುತ್ತಿದ್ದಾಗ, ದುದ್ದ ಗ್ರಾಮದ ಬಳಿಯ ಡಾಬಾ ಸರ್ಕಲ್ ಬಳಿಯ ರೈಲ್ವೇ ಬ್ರಿಡ್ಜ್ ಹತ್ತಿರ ಏಕಾಏಕಿ ದುಷ್ಕರ್ಮಿಗಳು ಮೆಣಸಿನ ಪುಡಿ ಎರಚಿ ತಲವಾರು ದಾಳಿ ನಡೆಸಿದ್ದಾರೆ. ತಲೆಗೆ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಹರೀಶ್ ಕೊಲೆಯಾಗಿದ್ದ.
ಯೋಧ ಮತ್ತು ಪೊಲೀಸ್ ಪೇದೆ ಹರೀಶ್ ನಡುವಿನ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆನಂತರ, ಬುದ್ಧಿ ಹೇಳಿ ಇಬ್ಬರನ್ನೂ ಕಳುಹಿಸಲಾಗಿತ್ತು. ಆದರೆ, ಪತ್ನಿಯ ಪೀಕಲಾಟದಿಂದ ಬೇಸತ್ತಿದ್ದ ಯೋಧನೇ ಈ ಕೊಲೆ ಮಾಡಿರಬೇಕು ಎನ್ನುವ ಶಂಕೆ ಹರಡಿದೆ. ಆದರೆ ಪೊಲೀಸರು ತನಿಖೆ ನಡೆಸುತ್ತಿದ್ದು, ಈವರೆಗೂ ಯಾರನ್ನೂ ಬಂಧಿಸಿರುವ ಬಗ್ಗೆ ಖಚಿತಪಡಿಸಿಲ್ಲ.
Police constable murder in Hassan, affair with soliders wife reason for deadly murder says sources. A police constable attached to the Karnataka State Industrial Security Force (KSISF), Bengaluru, was brutally murdered over an alleged illicit relationship near his native village in Hassan on Monday night. The victim is identified as BV Harish, a native of Bageshpura in Arasikere taluk.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm