ಬ್ರೇಕಿಂಗ್ ನ್ಯೂಸ್
16-02-24 07:08 pm Mangalore Correspondent ಕ್ರೈಂ
ಉಳ್ಳಾಲ, ಫೆ.16: ಗಾಂಜಾ ವ್ಯಸನಿಯೋರ್ವ ನಶೆಯಲ್ಲಿ ಸಾರ್ವಜನಿಕರತ್ತ ಜಲ್ಲಿ ಕಲ್ಲು ಎಸೆದಿದ್ದು ತಡೆಯಲು ಹೋದ ವ್ಯಕ್ತಿಗೆ ಸೋಡಾ ಬಾಟಲಿಯಿಂದ ಹಲ್ಲೆಗೈದಿದ್ದಾನೆ. ಧಾಂದಲೆಕೋರನಿಗೆ ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.
ಮಂಚಿಲ ನಿವಾಸಿ ಮಹಮ್ಮದ್ ಮುಶ್ತಾಕ್ ಯಾನೆ ಮಿಸ್ತ ಎಂಬಾತ ಶುಕ್ರವಾರ ಮಧ್ಯಾಹ್ನದ ವೇಳೆ ನಶೆಯ ಮತ್ತಿನಲ್ಲಿ ತೊಕ್ಕೊಟ್ಟು ಒಳಪೇಟೆಯ ರಿಕ್ಷಾ ಪಾರ್ಕಿನ ಬಳಿಯ ರೈಲ್ವೇ ಹಳಿಯಲ್ಲಿ ನಿಂತು ಹಳಿಗಳಲ್ಲಿದ್ದ ಜಲ್ಲಿ ಕಲ್ಲುಗಳನ್ನ ರಸ್ತೆಗೆ ಎಸೆಯಲಾರಂಭಿಸಿದ್ದಾನೆ. ಸಾರ್ವಜನಿಕರು, ಶಾಲಾ ಮಕ್ಕಳು ತೆರಳುತ್ತಿದ್ದ ರಸ್ತೆಗೆ ಕಲ್ಲೆಸೆಯುತ್ತಿದ್ದುದನ್ನ ಪ್ರಶ್ನಿಸಿ, ತಡೆಯಲು ಮುಂದಾದ ಸ್ಥಳೀಯ ನಿವಾಸಿ ರಾಜೇಶ್ ಶೆಟ್ಟಿ ಎಂಬವರ ತಲೆ ಮತ್ತು ಕೈಗೆ ಪಕ್ಕದ ಅಂಗಡಿಯಲ್ಲಿದ್ದ ಸೋಡಾ ಬಾಟಲಿಯಿಂದ ಮಿಸ್ತ ಹಲ್ಲೆಗೈದಿದ್ದಾನೆ. ಕೂಡಲೇ ಅಲ್ಲಿ ನೆರೆದಿದ್ದ ಸಾರ್ವಜನಿಕರು ಧಾಂದಲೆ ನಡೆಸುತ್ತಿದ್ದ ಮಿಸ್ತಾನನ್ನ ಹಿಡಿದು ಥಳಿಸಿ ಉಳ್ಳಾಲ ಪೊಲೀಸರಿಗೊಪ್ಪಿಸಿದ್ದಾರೆ.
ಸೋಡಾ ಬಾಟಲಿ ಏಟಿನಿಂದ ತಲೆ ಮತ್ತು ಕೈಗೆ ಹಲ್ಲೆಗೊಳಗಾದ ರಾಜೇಶ್ ಶೆಟ್ಟಿ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಮಿಸ್ತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿದ್ದು ಆತನ ವಿರುದ್ಧ ಸೂಕ್ತ ಕ್ರಮಕ್ಕಾಗಿ ರಾಜೇಶ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಉಳ್ಳಾಲ ಠಾಣಾ ವ್ಯಾಪ್ತಿಯ ಒಳಪೇಟೆ, ಕೇಂದ್ರ ಬಸ್ಸು ನಿಲ್ದಾಣದ ಹಿಂದಿನ ಪ್ರದೇಶ ಸೇರಿದಂತೆ ಅನೇಕ ನಿರ್ಜನ ಪ್ರದೇಶಗಳಲ್ಲಿ ಯುವಕರು ಸಾಮೂಹಿಕವಾಗಿ ಮಾದಕ ಪದಾರ್ಥಗಳನ್ನ ಸೇವಿಸುತ್ತಿದ್ದು ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Mangalore Ganja addict attacks man with bottle at Thokottu. Rajesh Shetty was Attacked with stones. Druggi Mohammed Mushtaq thrashed by localites and handed over to police.
13-08-26 10:19 pm
HK News Desk
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
ಐಷಾರಾಮಿ ಹೊಟೇಲ್ ಬಳಿಕ ಸರ್ಕಾರಿ ಕಚೇರಿಗಳ ಕ್ಯಾಂಟೀನ್...
13-08-26 02:22 pm
ಸಚಿವ ಸ್ಥಾನ ಕೈತಪ್ಪಿದ ಮಂಕಾಳ ವೈದ್ಯಗೆ ವಿಧಾನಸಭೆ ಉಪ...
13-08-26 01:00 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 11:06 pm
HK News Desk
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
13-08-26 04:29 pm
HK News Staffer
ನಿರ್ಮಾಣ ಹಂತದ ಕಟ್ಟಡದಿಂದ ಕೆಳಕ್ಕೆ ಬಿದ್ದ ವಲಸೆ ಕಾರ...
13-08-26 03:22 pm
ಮದುವೆ ನಿಶ್ಚಿತಾರ್ಥ ಆಗಿದ್ದ ಎಸ್ ಬಿಐ ಬ್ಯಾಂಕ್ ಉದ್ಯ...
13-08-26 01:17 pm
Mangalore crime, Arrest: ಕೈ ಕೋಳದಲ್ಲೇ ಪೊಲೀಸರನ್...
12-08-26 11:18 pm
Panambur Robbery, Update, Mangalore: ಪಣಂಬೂರು...
12-08-26 07:47 pm