ಬ್ರೇಕಿಂಗ್ ನ್ಯೂಸ್
30-01-24 12:49 pm Bangalore Correspondent ಕ್ರೈಂ
ಬೆಂಗಳೂರು, ಜ 30: ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷ-ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಸಂಧ್ಯಾ ಪವಿತ್ರಾ ನಾಗರಾಜ್ ಎಂಬವರ ವಿರುದ್ಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿ ಸಂಧ್ಯಾ ಅವರು ಫೇಸ್ ಬುಕ್ನಲ್ಲಿ ಪರಿಚಯ ಮಾಡಿಕೊಂಡು, ತಾನು ಕಾಂಗ್ರೆಸ್ ಪಕ್ಷದ ಯುವ ನಾಯಕಿ ಎಂದು ಹೇಳಿಕೊಂಡು ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಲಕ್ಷ ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದಾರೆ ಎಂದು ವೀಣಾ ಎಂಬ ಯುವತಿ ದೂರು ದಾಖಲು ಮಾಡಿದ್ದಾರೆ.
ಬೆಂಗಳೂರು ಟು ಯಾದಗಿರಿ ವಂಚನೆ ಜಾಲ ;
ದೂರು ನೀಡಿರುವ ಯುವತಿ ಮಾತ್ರವಲ್ಲದೇ ಇನ್ನು ಹತ್ತಾರು ಜನರಿಗೆ ಕೆಲಸ ಕೊಡಿಸುತ್ತೇನೆ ಎಂದು ಹಣ ಪೀಕಿ ವಂಚನೆ ಮಾಡಿರುವ ಆರೋಪ ಸಂಧ್ಯಾ ವಿರುದ್ಧ ಕೇಳಿ ಬಂದಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ಯಾದಗಿರಿವರೆಗೂ ಸಂಧ್ಯಾ ವಂಚನೆ ಜಾಲ ಹರಡಿದೆ ಎಂಬ ಆರೋಪ ಎದುರಾಗಿದೆ.
ಎಂಎಸ್ ಬಿಲ್ಡಿಂಗ್ನಲ್ಲಿ ಕೆಲಸ ಕೊಡಿಸೋದಾಗಿ ವಂಚನೆ
ಬೆಂಗಳೂರಿನ ಮಹಿಳೆ ಮತ್ತು ಯಾದಗಿರಿಯ ಯುವಕನಿಗೂ ಯುವ ಕಾಂಗ್ರೆಸ್ ಎಂದು ಹೇಳಿ ಕೊಂಡು ಲಕ್ಷಾಂತರ ಹಣ ಪಡೆದು ವಂಚನೆ ಮಾಡಿದ್ದರಂತೆ. ಈ ಸಂಬಂಧ ಬೆಂಗಳೂರಿನ ವೀಣಾ ಅವರು ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 2021ರಲ್ಲಿ ಎಂ.ಎಸ್ ಬಿಲ್ಡಿಂಗ್ ನಲ್ಲಿ ಕೆಲಸ ಕೊಡಿಸುವುದಾಗಿ 20 ಲಕ್ಷ ರೂಪಾಯಿಗಳನ್ನು ಆರೋಪಿ ಸಂಧ್ಯಾ ಪಡೆದುಕೊಂಡಿದ್ದರಂತೆ. ಆದರೆ 3 ವರ್ಷ ಆದರೂ ಕೆಲಸ ಕೊಡಿಸಲಿಲ್ಲ, ಹಣವನ್ನೂ ವಾಪಸ್ ನೀಡಿಲ್ಲ ಎಂದು ವೀಣಾ ಆರೋಪಿಸಿದ್ದಾರೆ.
ಯಾದಗಿರಿ ಯುವಕನಿಂದ ವಿಡಿಯೋ
ಇನ್ನೂ, ಯಾದಗಿರಿಗೆ ಸೇರಿದ ಯುವಕ ಚಂದ್ರ ಎಂಬಾತನಿಗೆ ಕೆಲಸ ಕೊಡಿಸುವುದಾಗಿ ಲಕ್ಷ ಲಕ್ಷ ಹಣ ಪಡೆದು ಆರೋಪಿ ಸಂಧ್ಯಾ ವಂಚನೆ ಮಾಡಿದ್ದರಂತೆ. ಸದ್ಯ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಚಂದು, ತನ್ನ ಹಣ ತನಗೆ ವಾಪಸ್ ನೀಡಿ ಎಂದು ವಿಡಿಯೋ ಮಾಡಿ ಗೋಳಿಟ್ಟಿದ್ದಾರೆ. ಮನೆಯಲ್ಲಿ ಕಷ್ಟ ಇದ್ದು, ಅನಾರೋಗ್ಯ ಪೀಡಿತನಾಗಿ ಆಸ್ಪತ್ರೆ ಖರ್ಚಿಗೆ ಹಣ ಬೇಕಿದೆ ಎಂದು ಯುವಕ ಚಂದು ವಿಡಿಯೋದಲ್ಲಿ ಅಂಗಲಾಚುತ್ತಿರುವುದನ್ನು ಕಾಣಬಹುದಾಗಿದೆ.
Congress member Sandhya Pavithra Nagaraj cheats many by Promising them of job offers by showing her pictures with cm Siddaramaiah and Dk Shivakumar. A case has been filed aginst her in Bangalore.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm