ಬ್ರೇಕಿಂಗ್ ನ್ಯೂಸ್
13-12-23 09:07 pm Mangalore Correspondent ಕ್ರೈಂ
ಉಳ್ಳಾಲ, ಡಿ.13: ರಾತ್ರಿ ನಿಲ್ಲಿಸಿದ್ದ ಸಿಟಿ ಬಸ್ಸಿನ ಎರಡು ಬ್ಯಾಟರಿಗಳನ್ನ ಕಳ್ಳನೋರ್ವ ಗೋಣಿ ಚೀಲವನ್ನ ಮುಖಕ್ಕೆ ಅಡ್ಡಲಾಗಿ ಹಿಡಿದು ಬಂದು ಸಿಸಿ ಕ್ಯಾಮೆರಾಕ್ಕೆ ತುರುಕಿ ಕಳವು ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಪಲ ಬಗಂಬಿಲದಲ್ಲಿ ಬುಧವಾರ ನಸುಕಿನ ಜಾವ ನಡೆದಿದ್ದು, ಕಳ್ಳನ ಕೈಚಳಕ ಬಸ್ಸಿನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಕುಂಪಲ- ಕೊಟ್ಟಾರ ನಡುವೆ ಓಡಾಟ ನಡೆಸುವ ರೂಟ್ ನಂಬರ್ 44 ಮೂಕಾಂಬಿಕಾ ಟ್ರಾವೆಲ್ಸ್ ಸಿಟಿ ಬಸ್ಸನ್ನು ನಿನ್ನೆ ರಾತ್ರಿ ಓಡಾಟ ಮುಗಿಸಿ ಕುಂಪಲದ ಬಗಂಬಿಲ ಎಂಬಲ್ಲಿ ನಿಲ್ಲಿಸಲಾಗಿತ್ತು. ನಸುಕಿನ ವೇಳೆ ಬಸ್ಸಿನೊಳಗೆ ಮುಖಕ್ಕೆ ಗೋಣಿ ಚೀಲವನ್ನು ಅಡ್ಡಲಾಗಿ ಹಿಡಿದು ನುಗ್ಗಿದ ಕಳ್ಳನೋರ್ವ ಗೋಣಿ ಚೀಲವನ್ನ ಸಿಸಿ ಕ್ಯಾಮೆರಾಕ್ಕೆ ತುರುಕಿ ಬಸ್ಸಿನ ಎರಡು ಬ್ಯಾಟರಿ ಹಾಗೂ ಕೇಬಲ್ ಗಳನ್ನು ಕಳವು ಮಾಡಿದ್ದಾನೆ. ಬಸ್ಸು ಹಳೆಯದಾದರೂ ಅದರೊಳಗಿದ್ದ ಸಿಸಿ ಟಿವಿ ಸುಸ್ಥಿತಿಯಲ್ಲಿದ್ದು ಕಳ್ಳನ ಕರಾಮತ್ತಿನ ವೀಡಿಯೋ ಚಿತ್ರಣ ಅದರಲ್ಲಿ ದಾಖಲಾಗಿದೆ.
ಸುಮಾರು 40,000 ರೂಪಾಯಿ ಮೌಲ್ಯದ ಬ್ಯಾಟರಿಗಳನ್ನ ಕಳವು ಮಾಡಲಾಗಿದ್ದು ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂಪಲ ಪ್ರದೇಶದಲ್ಲಿ ಬೆರಳೆಣಿಕೆಯಷ್ಟೇ ಬಸ್ಸುಗಳು ಓಡಾಟ ನಡೆಸುತ್ತಿದ್ದು ಬ್ಯಾಟರಿ ಇಲ್ಲದ ಬಸ್ಸು ಬುಧವಾರ ಓಡಾಟ ನಡೆಸದೆ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು.
Mangalore Bus battery stolen, covers Cc camera with sack cloth at Ullal. Video of this goes viral on social media.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm