ಬ್ರೇಕಿಂಗ್ ನ್ಯೂಸ್
26-11-23 06:47 pm Mangaluru Correspondent ಕ್ರೈಂ
ಉಳ್ಳಾಲ, ನ.26: ವನ್ ಗ್ರಾಮ್ ಗೋಲ್ಡ್ ಆಭರಣ ಧರಿಸಿ ನಿತಿನ್ ಶೆಟ್ಟಿ ಹೆಸರಲ್ಲಿ ನಗರದ ಹಲವು ಕಡೆಗಳಲ್ಲಿ ಅಮಾಯಕರಿಗೆ ವಂಚಿಸುತ್ತಿರುವ ಶೋಕಿಲಾಲ ಗೂಡ್ಸ್ ಮುನೀರ ಓಎಲ್ ಎಕ್ಸ್ ನಲ್ಲೂ ಮಹಿಳೆಯ ಹೆಸರಲ್ಲಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯೋರ್ವನ ಫೋಟೊ ಕ್ಯಾಮೆರಾ ಖರೀದಿಸಿ ಹಣ ಕೊಡದೆ ಪರಾರಿಯಾಗಿದ್ದು ಈ ಬಗ್ಗೆ ವಿದ್ಯಾರ್ಥಿ ಕದ್ರಿ ಠಾಣೆಗೆ ದೂರು ನೀಡಿದ್ದರೂ ಪೊಲೀಸರ ಅಸಡ್ಡೆಯಿಂದ ಮುನೀರ ಈಗಲೂ ವಂಚನೆ ಕೃತ್ಯ ಮುಂದುವರಿಸಿದ ವಿಚಾರ ತಿಳಿದುಬಂದಿದೆ.
ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಸೃಜನ್ ಆಳ್ವ ಎಂಬವರು ಓಎಲ್ ಎಕ್ಸ್ ಆಪಲ್ಲಿ ತನ್ನ ಕೆನನ್ ಕ್ಯಾಮೆರಾ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದರು.
+91 97392 09819, 088846 99575 ಸಂಖ್ಯೆಗಳಲ್ಲಿ ಮೊಬೈಲ್ ಕರೆ ಮಾಡಿದ ಮಹಿಳೆಯೋರ್ವಳು ತನಗೆ ಕ್ಯಾಮೆರಾ ಬೇಕೆಂದು ಹೇಳಿ ಸೃಜನ್ ಅವರನ್ನ ಅಕ್ಟೋಬರ್ 24 ರಂದು ಕಂಕನಾಡಿಗೆ ಬರುವಂತೆ ಹೇಳಿದ್ದಾಳೆ.
ಮಹಿಳೆಯ ಮಾತು ನಂಬಿ ಕಂಕನಾಡಿಗೆ ಬಂದ ಸೃಜನ್ ಗೆ ಬೈಕಲ್ಲಿ ಬಂದ ಆಭರಣಧಾರಿ ವ್ಯಕ್ತಿ ತಾನು ನಿತಿನ್ ಶೆಟ್ಟಿ ಎಂದು ಪರಿಚಯಿಸಿದ್ದು ಬೈಕ್ ಸಹಸವಾರೆ ಬುರ್ಖಾಧಾರಿ ಮಹಿಳೆ ಸೃಜನ್ ಕೈಯಿಂದ ಕ್ಯಾಮೆರಾ ಇಸ್ಕೊಂಡ ತಕ್ಷಣ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದ. ಸುಮಾರು 50,000 ರೂಪಾಯಿ ಮಾರುಕಟ್ಟೆ ಮೌಲ್ಯದ ಕ್ಯಾಮರದ ಹಣ ಸಿಗದೆ ಕಂಗಾಲಾದ ಸೃಜನ್ ತಕ್ಷಣ ಕದ್ರಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸೃಜನ್ ದೂರಲ್ಲಿ ನೀಡಿದ ಮೊಬೈಲ್ ನಂಬರ್ ನೋಡಿದ ಕ್ಷಣದಲ್ಲೇ ಪೊಲೀಸರು ಇದು ಗೂಡ್ಸ್ ಮುನೀರನೆಂದು ಹೇಳಿ ಕೈ ತೊಳೆದರೇ ಹೊರತು ಕದೀಮನನ್ನ ಹಿಡಿಯುವ ಗೋಜಿಗೇ ಹೋಗಿಲ್ಲ.
ಪರಿಣಾಮ ಅದೇ ಖದೀಮ ಕಳೆದ ನವೆಂಬರ್ 13 ರಂದು ಕುತ್ತಾರಿನ "ಸುಧಿ ಕಲೆಕ್ಷನ್ಸ್" ಎಂಬ ಮೊಬೈಲ್ ಮಳಿಗೆಯಲ್ಲೂ ಮೊಬೈಲ್ ಖರೀದಿಸಿ ಗೂಗಲ್ ಪೇ ಮಾಡಲು ತನ್ನ ಮೊಬೈಲ್ ಸ್ವಿಚ್ ಆಫ್ ಎಂದು ಬೋಂಗು ಬಿಟ್ಟು ಅಂಗಡಿ ಮಾಲೀಕ ದೀಪಕ್ ಅವರಿಗೆ ವಂಚಿಸಿದ್ದ.ಈ ಬಗ್ಗೆ ಉಳ್ಳಾಲ ಠಾಣೆಯಲ್ಲೂ ಮುನೀರನ ವಿರುದ್ಧ ದೂರು ದಾಖಲಾಗಿದೆ.
ಕಳೆದ ಅಕ್ಟೋಬರ್ ತಿಂಗಳ 7 ರಂದು ಇದೇ ಮುನೀರ ತೊಕ್ಕೊಟ್ಟಿನ ಅಯ್ಯಂಗಾರ್ ಬೇಕರಿ ಮತ್ತು ದಿನಸಿ ಅಂಗಡಿಯೊಂದರಲ್ಲೂ ಸಿಹಿತಿಂಡಿ , ದಿನಸಿ ಸಾಮಾಗ್ರಿಗಳನ್ನ ಖರೀದಿಸಿ ಅಂಗಡಿ ಮಾಲೀಕರಿಗೆ ಸಾವಿರಾರು ರೂಪಾಯಿಗಳನ್ನ ವಂಚಿಸಿ ,ಯಾಮಾರಿಸಿದ್ದ. ಗೂಡ್ಸ್ ಮುನೀರ ದ್ವಿಚಕ್ರ ವಾಹನಗಳ ಶೋರೂಮಿಂದ ಟೆಕ್ಸ್ಟ್ ರೈಡ್ ಗೆಂದು ಕೊಂಡೊಯ್ದ ವಾಹನಗಳನ್ನೇ ಮಾರಾಟ ಮಾಡಿದ್ದಾನಂತೆ. ಈತನ ಐನಾತಿ ಕೃತ್ಯಗಳಿಗೆ ಪತ್ನಿಯೇ ಸಾಥ್ ನೀಡುತ್ತಿದ್ದು ಈ ಬಂಟಿ-ಬಬ್ಲಿ ಜೋಡಿಗಳಿಂದ ಜನರು ಮತ್ತೆ ಮೋಸ ಹೋಗದಂತೆ ಪೊಲೀಸರು ಕಾರ್ಯ ಪೃವೃತ್ತರಾಗಬೇಕಿದೆ.
Infamous fraudulent man Goods Muneer has finally been taken into custody by Mangalore's Ullal police. Following his apprehension, an additional case of photo camera theft was reported to the Kadri police department.
20-03-25 01:07 pm
Bangalore Correspondent
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
20-03-25 07:19 pm
HK News Desk
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm