ಬ್ರೇಕಿಂಗ್ ನ್ಯೂಸ್
25-11-23 09:56 pm Mangalore Correspondent ಕ್ರೈಂ
ಮಂಗಳೂರು, ನ.25: ಸ್ಕಾರ್ಪಿಯೋ ಕಾರು ಚಾಲಕನೊಬ್ಬ ಮಧ್ಯರಾತ್ರಿ ಬೈಕಿಗೆ ಡಿಕ್ಕಿಯಾಗಿ ಸವಾರ ನೆಲಕ್ಕುರುಳಿದರೂ ಸ್ಥಳದಿಂದ ಪರಾರಿಯಾದ ಘಟನೆ ನಗರದ ಯೆಯ್ಯಾಡಿಯಲ್ಲಿ ನಡೆದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡು ರಸ್ತೆಗೆ ಬಿದ್ದ ಬೈಕ್ ಸವಾರನನ್ನು ಇತರೇ ಕಾರು ಚಾಲಕರು ಕಂಡರೂ ಕಾಣದೆ ನಿರ್ಲಕ್ಷ್ಯ ತೋರಿದ್ದಾರೆ.
ನ.21ರಂದು ನಡುರಾತ್ರಿ 12.15ರ ಸುಮಾರಿಗೆ ಘಟನೆ ನಡೆದಿದ್ದು ಸವಾರ ಬೊಂದೇಲ್ ನಿವಾಸಿ ಆಲಿಸ್ಟರ್ ತೌರೊ (24) ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಫಂಕ್ಷನ್ ಮುಗಿಸಿ ನಡುರಾತ್ರಿಯಲ್ಲಿ ಬೈಕಿನಲ್ಲಿ ಮನೆಯತ್ತ ಹೊರಟಿದ್ದರೆ, ಯೆಯ್ಯಾಡಿ ಬಳಿ ಸ್ಕಾರ್ಪಿಯೊ ಚಾಲಕ ನೇರವಾಗಿ ತಿರುವು ಪಡೆದಿದ್ದ. ಇದನ್ನು ಗಮನಿಸದೆ ಬೈಕ್ ನೇರವಾಗಿ ಡಿಕ್ಕಿಯಾಗಿದ್ದು ರಸ್ತೆಗೆ ಎಸೆಯಲ್ಪಟ್ಟ ಸವಾರ ಆಲಿಸ್ಟರ್ ತೌರೊ ಮತ್ತು ಹಿಂಬದಿ ಸವಾರ ಲಾಯ್ಡ್ ಗಾಯಗೊಂಡಿದ್ದಾರೆ.
ರಸ್ತೆಗೆ ಬಿದ್ದು ಇಬ್ಬರು ಯುವಕರು ನರಳುತ್ತಿದ್ದರೂ, ಅದರ ಬೆನ್ನಲ್ಲೇ ಇನ್ನೊಬ್ಬ ಸ್ವಿಫ್ಟ್ ಕಾರು ಅದೇ ದಾರಿಯಲ್ಲಿ ಬಂದಿದ್ದು ಅದರ ಚಾಲಕ ನೋಡಿಯೂ ಕರುಣೆ ತೋರದೆ ಸ್ಥಳದಿಂದ ತೆರಳಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಸ್ಥಳೀಯರು ಬಂದಿದ್ದು ಗಾಯಗೊಂಡಿದ್ದ ಯುವಕರನ್ನು ಎತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಲಿಸ್ಟರ್ ತೌರೊ ಸ್ಥಿತಿ ಗಂಭೀರವಾಗಿದ್ದು ಮುಖ, ತಲೆಗೆ ಏಟಾಗಿದೆ. ಕೈ ಮುರಿದಿದ್ದು ಶಸ್ತ್ರಚಿಕಿತ್ಸೆ ನಡೆಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬಗ್ಗೆ ಕದ್ರಿ ಸಂಚಾರಿ ಠಾಣೆಯಲ್ಲಿ ಹಿಟ್ ಅಂಡ್ ರನ್ ಕೇಸು ದಾಖಲಾಗಿದ್ದು ಕಾರನ್ನು ವಶಕ್ಕೆ ಪಡೆಯಲಾಗಿದೆ.
ಡೆಕೊರೇಶನ್ ಕೆಲಸ ಮಾಡುತ್ತಿದ್ದ ಆಲಿಸ್ಟರ್ ತೌರೊ ಬಡ ಕುಟುಂಬದ ಯುವಕನಾಗಿದ್ದು ಆಸ್ಪತ್ರೆ ಖರ್ಚು ಭರಿಸಲು ದಾನಿಗಳ ಸಹಾಯ ಯಾಚಿಸಿದ್ದಾರೆ. ಈತನ ಸೋದರ ಆಸ್ಪತ್ರೆಯಲ್ಲಿದ್ದು ನೋಡಿಕೊಳ್ಳುತ್ತಿದ್ದಾರೆ. ಸಹೃದಯರು ಇವರ ಗೂಗಲ್ ಪೇ ಅಥವಾ ಬ್ಯಾಂಕ್ ಖಾತೆಗೆ ನೆರವು ನೀಡುವಂತೆ ಕೇಳಿಕೊಂಡಿದ್ದಾರೆ. Google Pay: Astel Touro - 7795924633
Mangalore Yeyyadi accident, 24 year old youth Astel Touro admitted in hospital in serious condition. Video of the accident has gone viral on social media.
20-03-25 01:07 pm
Bangalore Correspondent
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
20-03-25 07:19 pm
HK News Desk
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm