ಬ್ರೇಕಿಂಗ್ ನ್ಯೂಸ್
21-11-23 03:00 pm Bangalore Correspondent ಕ್ರೈಂ
ಬೆಂಗಳೂರು, ನ 21: ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಹೆದರಿಸಿ ನಗರದ ವ್ಯಕ್ತಿಯೊಬ್ಬರಿಂದ 1.5 ಕೋಟಿ ರೂ. ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೈಕೊ ಲೇಔಟ್ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ದಕ್ಷಿಣ ವಿಭಾಗದ ಸೆನ್ ಠಾಣೆ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಫೆಡೆಕ್ಸ್ ಕೊರಿಯರ್ ಪ್ರತಿನಿಧಿ ಹೆಸ್ರಲ್ಲಿ ನ.10ರಂದು ದೂರುದಾರರಿಗೆ ಕಾರ್ತಿಕೇಯನ್ ಎಂಬ ಹೆಸರಿನಲ್ಲಿ ಕರೆ ಮಾಡಿದ್ದ ಆರೋಪಿ, ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಕೊರಿಯರ್ ಬಂದಿದೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕೊರಿಯರ್ ಜಪ್ತಿ ಮಾಡಿದ್ದಾರೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳುತ್ತಿದ್ದಾರೆ ಎಂದಿದ್ದಾನೆ. ಅದಕ್ಕೆ ದೂರು ದಾರರು ಕೋರಿಯರ್ ನಮ್ಮದಲ್ಲ ಎಂದಿದ್ದಾರೆ. ಆಗ ಆರೋಪಿ, ಪೊಲೀಸರನ್ನು ಸಂಪರ್ಕಿಸುವಂತೆ ಹೇಳಿ ಕರೆ ಸ್ಥಗಿತಗೊಳಿಸಿದ್ದಾನೆ. ಕೆಲ ನಿಮಿಷಗಳ ನಂತರ ಮುಂಬೈ ಸೈಬರ್ ಕ್ರೈಂ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ್ದ ಆರೋಪಿ, ಕೊರಿಯರ್ ನಿಮ್ಮದಲ್ಲವೆಂದರೆ ವೈಯಕ್ತಿಕ ವಿವರ ಹಾಗೂ ಖಾತೆ ವಿವರ ನೀಡಿ. ಪ್ರಕರಣ ದಾಖಲಿಸುವುದಿಲ್ಲ. ಇಲ್ಲದಿದ್ದರೆ, ಡ್ರಗ್ಸ್ ಸಪ್ಲೈ ಕೇಸ್ ದಾಖಲಿಸಿ ಜೈಲಿಗೆ ಕಳಿಸ್ತೀವಿ ಎಂದು ಬೆದರಿಸಿದ್ದಾರೆ.
ಬಂಧನದ ಭೀತಿಯಲ್ಲಿದ್ದ ದೂರುದಾರ, ಆರೋಪಿಗಳು ಹೇಳಿದ್ದ ಅಕೌಂಟ್ ಗೆ ಹಂತ ಹಂತವಾಗಿ 1.52 ಕೋಟಿ ವರ್ಗಾಯಿಸಿದ್ದರು. ಆ ಬಳಿಕವೂ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟಿದಾಗ ಅನುಮಾನಗೊಂಡ ದೂರುದಾರ ಪೊಲೀಸರಿಗೆ ದೂರು ನೀಡಿದ್ದಾರೆ.
Courier fraud Bengalore man loses Rs 1.52 cr to scammers posing as Mumbai police, drugs case. A senior citizen in Bengaluru has been defrauded of Rs 1.52 crore in the widespread courier scam wherein perpetrators make phone calls claiming to be police officials who have intercepted parcels with contraband material. As part of their modus operandi, the fraudsters ask the victims to transfer large amounts of funds to be cleared of drug trafficking and money laundering charges.
13-08-26 08:09 pm
HK News Staffer
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
ಐಷಾರಾಮಿ ಹೊಟೇಲ್ ಬಳಿಕ ಸರ್ಕಾರಿ ಕಚೇರಿಗಳ ಕ್ಯಾಂಟೀನ್...
13-08-26 02:22 pm
ಸಚಿವ ಸ್ಥಾನ ಕೈತಪ್ಪಿದ ಮಂಕಾಳ ವೈದ್ಯಗೆ ವಿಧಾನಸಭೆ ಉಪ...
13-08-26 01:00 pm
ಕೊನೆಗೂ ಖಾತೆ ಫೈನಲ್ ; ಜಮೀರ್ ಡೌನ್ ಗ್ರೇಡ್, ಖಾದರ್...
12-08-26 06:57 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 11:06 pm
HK News Desk
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
13-08-26 04:29 pm
HK News Staffer
ನಿರ್ಮಾಣ ಹಂತದ ಕಟ್ಟಡದಿಂದ ಕೆಳಕ್ಕೆ ಬಿದ್ದ ವಲಸೆ ಕಾರ...
13-08-26 03:22 pm
ಮದುವೆ ನಿಶ್ಚಿತಾರ್ಥ ಆಗಿದ್ದ ಎಸ್ ಬಿಐ ಬ್ಯಾಂಕ್ ಉದ್ಯ...
13-08-26 01:17 pm
Mangalore crime, Arrest: ಕೈ ಕೋಳದಲ್ಲೇ ಪೊಲೀಸರನ್...
12-08-26 11:18 pm
Panambur Robbery, Update, Mangalore: ಪಣಂಬೂರು...
12-08-26 07:47 pm