ಬ್ರೇಕಿಂಗ್ ನ್ಯೂಸ್
29-09-23 07:00 pm Mangalore Correspondent ಕ್ರೈಂ
ಪುತ್ತೂರು, ಸೆ.29: ವಿವಾಹಿತ ಮಹಿಳೆಯ ಜೊತೆ ಸಲುಗೆ ಬೆಳೆಸಿಕೊಂಡಿದ್ದಲ್ಲದೆ, ಆಕೆಯ ಜೊತೆಗೆ ಫೋಟೊ ತೆಗೆದು ಬ್ಲಾಕ್ಮೇಲ್ ನಡೆಸಿರುವ ಘಟನೆ ನಡೆದಿದ್ದು, ಪ್ರಕರಣದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯರೊಬ್ಬರನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಆರ್ಲಪದವು ನಿವಾಸಿ ಪ್ರಶಾಂತ ಭಟ್ ಮಾಣಿಲ(35) ಬಂಧಿತ ಆರೋಪಿ. ಸುಬ್ರಹ್ಮಣ್ಯದಲ್ಲಿ ಸಾಮಾಜಿಕ ಹಾಗೂ ರಾಜಕೀಯವಾಗಿ ತೊಡಗಿಸಿಕೊಂಡಿದ್ದ ಪ್ರಶಾಂತ ಭಟ್ ವಿರುದ್ಧ ಕಾರವಾರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ವಿವಾಹಿತ ಮಹಿಳೆಯೊಬ್ಬರಿಗೆ ಜಾಲತಾಣದಲ್ಲಿ ಪರಿಚಯ ಆಗಿದ್ದ ಪ್ರಶಾಂತ ಭಟ್, ಬಳಿಕ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ಹೇಳಿ ನಂಬಿಸಿ ಸಲುಗೆ ಬೆಳೆಸಿಕೊಂಡಿದ್ದ.

ಕಳೆದ ಜನವರಿ ತಿಂಗಳಲ್ಲಿ ಶಿರಸಿಗೆ ತೆರಳಿದ್ದ ಪ್ರಶಾಂತ, ಅಲ್ಲಿ ಯುವತಿಯನ್ನು ಲಾಡ್ಜ್ ಗೆ ಕರೆಸಿಕೊಂಡಿದ್ದ. ಅಲ್ಲದೆ, ಸುತ್ತಾಟವನ್ನೂ ಮಾಡಿದ್ದರು. ಈ ವೇಳೆ, ಯುವತಿ ಜೊತೆಗೆ ಫೋಟೊ ತೆಗೆಸಿಕೊಂಡಿದ್ದು ಆನಂತರ ಅದನ್ನು ಮುಂದಿಟ್ಟು ಬ್ಲಾಕ್ಮೇಲ್ ಮಾಡಿದ್ದಾನೆ. ಲಾಡ್ಜ್ ನಲ್ಲಿ ತೆಗೆದಿರುವ ಫೋಟೊವನ್ನು ಗಂಡನಿಗೆ ತೋರಿಸುತ್ತೇನೆ, ತಾಯಿಗೆ ಕಳಿಸುತ್ತೇನೆಂದು ಹೇಳಿ ಹಣಕ್ಕಾಗಿ ಬ್ಲಾಕ್ಮೇಲ್ ಆರಂಭಿಸಿದ್ದ. ಮೊಬೈಲಿನಲ್ಲಿ ನಗ್ನವಾಗಿ ದೇಹ ತೋರಿಸುವಂತೆ ಒತ್ತಡ ಹಾಕುತ್ತಿದ್ದ. ಈ ನಡುವೆ, ಪ್ರಶಾಂತ ಭಟ್ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗುತ್ತಿದ್ದು ಹಣ ನೀಡದೇ ಇದ್ದಾಗ ಫೋಟೊಗಳನ್ನು ಯುವತಿಯ ತಾಯಿಗೆ ಕಳಿಸಿದ್ದ.
ಇದರಿಂದ ಬೇಸತ್ತ ಯುವತಿ ಕಾರವಾರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿ ಪ್ರಶಾಂತ ಭಟ್ ನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಪ್ರಶಾಂತ್ ಭಟ್ ಈ ಹಿಂದೆ ಸುಬ್ರಹ್ಮಣ್ಯದಲ್ಲಿ ಮಠದ ವಿರುದ್ಧ ಹೋರಾಟ ನಡೆಸಿದ್ದವರಲ್ಲಿ ಪ್ರಮುಖನಾಗಿದ್ದ.
Mangalore Case filed against former Subramanya gram panchyath member Prashanth Bhat for blackmailing married woman. The accused is identified as Prashant Bhat Manila. The complainant woman was interested in music and used to sing in Clubhouse, an app. She got acquainted with the accused through the app.
13-08-26 02:22 pm
HK News Staffer
ಸಚಿವ ಸ್ಥಾನ ಕೈತಪ್ಪಿದ ಮಂಕಾಳ ವೈದ್ಯಗೆ ವಿಧಾನಸಭೆ ಉಪ...
13-08-26 01:00 pm
ಕೊನೆಗೂ ಖಾತೆ ಫೈನಲ್ ; ಜಮೀರ್ ಡೌನ್ ಗ್ರೇಡ್, ಖಾದರ್...
12-08-26 06:57 pm
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 11:06 pm
HK News Desk
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
13-08-26 04:29 pm
HK News Staffer
ನಿರ್ಮಾಣ ಹಂತದ ಕಟ್ಟಡದಿಂದ ಕೆಳಕ್ಕೆ ಬಿದ್ದ ವಲಸೆ ಕಾರ...
13-08-26 03:22 pm
ಮದುವೆ ನಿಶ್ಚಿತಾರ್ಥ ಆಗಿದ್ದ ಎಸ್ ಬಿಐ ಬ್ಯಾಂಕ್ ಉದ್ಯ...
13-08-26 01:17 pm
Mangalore crime, Arrest: ಕೈ ಕೋಳದಲ್ಲೇ ಪೊಲೀಸರನ್...
12-08-26 11:18 pm
Panambur Robbery, Update, Mangalore: ಪಣಂಬೂರು...
12-08-26 07:47 pm