ಬ್ರೇಕಿಂಗ್ ನ್ಯೂಸ್
22-08-23 05:45 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 22: ಕಾವೂರು ಠಾಣೆ ವ್ಯಾಪ್ತಿಯ ಶಾಂತಿನಗರದಲ್ಲಿ ವ್ಯಕ್ತಿಯೊಬ್ಬನ ಮೇಲೆ ತಲವಾರು ದಾಳಿ ನಡೆಸಲು ಗುಂಪೊಂದು ಯತ್ನಿಸಿದ್ದು, ಘಟನೆ ಸಂಬಂಧಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಪಂಜಿಮೊಗರು ಉರುಂದಾಡಿ ಗುಡ್ಡೆಯ ನಿವಾಸಿ ಚರಣ್ ರಾಜ್ (23), ಹೊಸಬೆಟ್ಟು ಕುಳಾಯಿ ನಿವಾಸಿ ಸುಮಂತ್ ಬರ್ಮನ್ (24), ಕೋಡಿಕಲ್ ನಿವಾಸಿ ಅವಿನಾಶ್ (24) ಬಂಧಿತರು. ಇವರು ಆಗಸ್ಟ್ 20ರಂದು ರಾತ್ರಿ ಶಾಂತಿನಗರದ ಎಂವಿ ಶೆಟ್ಟಿ ಕಾಲೇಜು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಹೇಬ್ ಎಂಬಾತನ ಮೇಲೆ ತಲವಾರು ಬೀಸಲು ಯತ್ನಿಸಿದ್ದರು. ಸುಹೇಬ್ ಒಂದು ವರ್ಷದ ಹಿಂದೆ ಕುಳೂರಿನ ನಾಗಬನಕ್ಕೆ ಹಾನಿ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದ.

ಸುಹೇಬ್ ಬೇರೊಂದು ತಂಡದಲ್ಲಿ ಗುರುತಿಸಿಕೊಂಡಿದ್ದು, ಈತ ಒಬ್ಬಂಟಿ ಸಿಕ್ಕರೆ ಹೊಡೆಯಬೇಕೆಂದು ಚರಣ್ ಮತ್ತಿತರರು ಹೊಂಚು ಹಾಕಿದ್ದರು. ಮೊನ್ನೆ ರಾತ್ರಿ ಸಿಕ್ಕಿದಾಗ ಹೊಡೆಯಲು ಯತ್ನಿಸಿದ್ದು ಸುಹೇಬ್ ಪರಾರಿಯಾಗಿದ್ದಾನೆ. ಎರಡೂ ತಂಡ ಗಾಂಜಾ ಪಾರ್ಟಿಗಳಾಗಿದ್ದು, ಗಾಂಜಾ ನಶೆಯಲ್ಲೇ ಕೃತ್ಯ ಎಸಗಿದ್ದಾರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅನ್ಯಕೋಮಿನ ವ್ಯಕ್ತಿಯೆಂದು ಹಲ್ಲೆಗೆ ಯತ್ನ ನಡೆದಿದ್ದಲ್ಲ. ಗಾಂಜಾ ನಶೆ ಮತ್ತು ವೈಯಕ್ತಿಕ ದ್ವೇಷದಲ್ಲಿ ಕೃತ್ಯ ಎಸಗಿದ್ದಾರೆ.
ಆರೋಪಿ ಚರಣ್ ರಾಜ್ ವಿರುದ್ಧ ಈ ಹಿಂದೆ ಉರ್ವಾ, ಪಣಂಬೂರು, ಕಾವೂರು ಠಾಣೆಯಲ್ಲಿ ಐದು ಪ್ರಕರಣ ದಾಖಲಾಗಿರುತ್ತದೆ. ಸುಮನ್ ನಾಲ್ಕು ಪ್ರಕರಣ, ಅವಿನಾಶ್ ವಿರುದ್ಧ ಐದು ಪ್ರಕರಣ ದಾಖಲಾಗಿದೆ. ತಲವಾರು ಸಹಿತ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Three arrested for attacking man using swords in Ganja effect at Kavoor in Mangalore. The arrested accused are identified as Charan Raj alias Charan (23), a resident of Urundadigudde, Mangaluru, Sumant Burman (24) from Hosabettu, Suratkal and Avinash (24), a resident of Kodikal Sunkadakatte Kalbavai Road.
13-08-26 02:22 pm
HK News Staffer
ಸಚಿವ ಸ್ಥಾನ ಕೈತಪ್ಪಿದ ಮಂಕಾಳ ವೈದ್ಯಗೆ ವಿಧಾನಸಭೆ ಉಪ...
13-08-26 01:00 pm
ಕೊನೆಗೂ ಖಾತೆ ಫೈನಲ್ ; ಜಮೀರ್ ಡೌನ್ ಗ್ರೇಡ್, ಖಾದರ್...
12-08-26 06:57 pm
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 11:06 pm
HK News Desk
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
13-08-26 03:22 pm
HK News Staffer
ಮದುವೆ ನಿಶ್ಚಿತಾರ್ಥ ಆಗಿದ್ದ ಎಸ್ ಬಿಐ ಬ್ಯಾಂಕ್ ಉದ್ಯ...
13-08-26 01:17 pm
Mangalore crime, Arrest: ಕೈ ಕೋಳದಲ್ಲೇ ಪೊಲೀಸರನ್...
12-08-26 11:18 pm
Panambur Robbery, Update, Mangalore: ಪಣಂಬೂರು...
12-08-26 07:47 pm
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm