ಬ್ರೇಕಿಂಗ್ ನ್ಯೂಸ್
20-08-23 01:43 pm HK News Desk ಕ್ರೈಂ
ಉಳ್ಳಾಲ, ಆ.20: ಅಮಲು ಪದಾರ್ಥ ಸೇವಿಸಿ ನಶೆಯಲ್ಲಿ ತೇಲುತ್ತಿದ್ದ ಯುವಕನೋರ್ವ ನಾಟೆಕಲ್ ಎಂಬಲ್ಲಿ ರಸ್ತೆ ಡಿವೈಡರ್ ನಲ್ಲಿ ದಾಂಧಲೆ ನಡೆಸಿದ್ದು ಸ್ಥಳಕ್ಕೆ ಬಂದ ಕೊಣಾಜೆ ಪೊಲೀಸರು ಯುವಕನನ್ನ ಸಿನಿಮೀಯ ರೀತಿಯಲ್ಲಿ ಲಾಕ್ ಮಾಡಿ ಜೈಲಿಗಟ್ಟಿದ್ದಾರೆ.
ಉಳ್ಳಾಲ ಮುಕ್ಕಚ್ಚೇರಿ, ಕೈಕೋ ರೋಡ್ ನಿವಾಸಿ ಅಬ್ಬೂಬಕ್ಕರ್ ಸಿದ್ಧೀಕ್(24) ಬಂಧಿತ ಯುವಕ. ನಿನ್ನೆ ದೇರಳಕಟ್ಟೆ ಸಮೀಪದ ನಾಟೆಕಲ್ ಜಂಕ್ಷನ್ ನಲ್ಲಿ ಘಟನೆ ನಡೆದಿದೆ. ಅಮಲು ಪದಾರ್ಥ ಸೇವಿಸಿ ನಶೆಯಲ್ಲಿದ್ದ ಸಿದ್ಧೀಕ್ ರಸ್ತೆ ಮಧ್ಯದ ಡಿವೈಡರ್ ನಲ್ಲಿ ಕಲ್ಲು ಮತ್ತು ಚೂರಿ ಹಿಡಿದು ಧಾಂದಲೆ ನಡೆಸುತ್ತಿದ್ದ. ಈ ವೇಳೆ ಯಾರೋ ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಕೊಣಾಜೆ ಮತ್ತು ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಸಿನಿಮೀಯ ರೀತಿಯಲ್ಲಿ ಸಿದ್ಧೀಕನ್ನ ಲಾಕ್ ಮಾಡಿ ಪೊಲೀಸ್ ವಾಹನಕ್ಕೆ ತಳ್ಳಿದ್ದಾರೆ.
ಕೊಣಾಜೆ ಠಾಣೆಯ ಪೊಲೀಸ್ ಸಿಬ್ಬಂದಿ ಮಾಜಿ ಯೋಧ ಸಂತೋಷ್ ಎಂಬವರು ಚಾಣಾಕ್ಷತನದಿಂದ ಸಿದ್ಧೀಕನ್ನ ಲಾಕ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪೊಲೀಸ್ ಕಾರ್ಯಾಚರಣೆಯನ್ನ ಯಾರೋ ಮೊಬೈಲಲ್ಲಿ ರೆಕಾರ್ಡ್ ಮಾಡಿದ್ದು ವೀಡಿಯೋ ತುಣುಕು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆರೋಪಿ ಅಬ್ಬೂಬಕ್ಕರ್ ಸಿದ್ಧೀಕ್ ನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದು ಅಮಲು ಪದಾರ್ಥ ಸೇವಿಸಿದ್ದು ಧೃಢಪಟ್ಟ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
#Drug user found holding knife causing panic among the people in #Ullal in #Mangalore. #Konajepolice quickly apprehend the suspect in movie-style. Thanks to @compolmlr #BreakingNews @DgpKarnataka pic.twitter.com/nluiuR50SS
— Headline Karnataka (@hknewsonline) August 20, 2023
Mangalore Drug addict holds knife in the middle of the road at Ullal, Konaje police grabs him in movie style. The arrested has been identified as Abbubakar Sadik (24).
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
03-04-25 01:04 pm
HK News Staff
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
03-04-25 04:04 pm
Mangalore Correspondent
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm