ಬ್ರೇಕಿಂಗ್ ನ್ಯೂಸ್
11-05-23 01:22 pm HK News Desk ಕ್ರೈಂ
ಕೊಲ್ಲಂ, ಮೇ 11: ತನಗೆ ಚಿಕಿತ್ಸೆ ನೀಡುತ್ತಿದ್ದ ಮಹಿಳಾ ವೈದ್ಯರನ್ನು ವ್ಯಕ್ತಿಯೊಬ್ಬ ಇರಿದು ಕೊಂದ ಭಯಾನಕ ಘಟನೆ ಕೇರಳದಲ್ಲಿ ನಡೆದಿದೆ. ಕೊಲ್ಲಂ ಜಿಲ್ಲೆಯ ಕೊಟ್ಟರಕ್ಕಾರದಲ್ಲಿನ ತಾಲೂಕು ಆಸ್ಪತ್ರೆಯಲ್ಲಿ 22 ವರ್ಷದ ವೈದ್ಯೆಯನ್ನು ಕುಡುಕ ರೋಗಿಯೊಬ್ಬ ಬುಧವಾರ ಕೊಲೆ ಮಾಡಿದ್ದಾನೆ. ಈ ವ್ಯಕ್ತಿ ತನ್ನ ಕುಟುಂಬದ ಸದಸ್ಯರ ಜತೆ ಕಿತ್ತಾಡಿಕೊಂಡಿದ್ದ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕೇರಳದ ವೈದ್ಯಕೀಯ ವೃತ್ತಿಪರರಲ್ಲಿ ಆಕ್ರೋಶ ಉಂಟುಮಾಡಿದೆ. ಕೊಟ್ಟರಕ್ಕಾರದಲ್ಲಿ ವೈದ್ಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಬುಧವಾರ ಮುಂಜಾನೆ ಈ ಭಯಾನಕ ಘಟನೆ ನಡೆದಿದ್ದು, ಸಾವಿಗೀಡಾದ ವೈದ್ಯೆಯನ್ನು ವಂದನಾ ದಾಸ್ ಎಂದು ಗುರುತಿಸಲಾಗಿದೆ. ವ್ಯಕ್ತಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ದಾಸ್ ಅವರು, ಕೆಲವು ಗಂಟೆಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ದಾಳಿ ನಡೆಸಿದ ಕುಡುಕ, 42 ವರ್ಷದ ಸಂದೀಪ್, ಕುಟುಂಬದ ಸದಸ್ಯರ ಜತೆ ಜಗಳವಾಡುತ್ತಿದ್ದ. ಈ ವೇಳೆ ಆತನ ಕಾಲಿಗೆ ಗಾಯವಾಗಿತ್ತು. ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಸಂದೀಪ್ಗೆ ವಂದನಾ ದಾಸ್ ಅವರು ಬ್ಯಾಂಡೇಜ್ ಸುತ್ತುತ್ತಿದ್ದರು. ಇದ್ದಕ್ಕಿದ್ದಂತೆ ಕೆರಳಿದ ಆತ ಕತ್ತರಿ ಮತ್ತು ಚಿಕ್ಕ ಚಾಕು ತೆಗೆದುಕೊಂಡು ಅಲ್ಲಿ ನಿಂತಿದ್ದ ಎಲ್ಲರ ಮೇಲೆಯೂ ದಾಳಿ ನಡೆಸಿದ್ದಾನೆ.
ದಿಢೀರ್ ದಾಳಿಯಿಂದ ಯುವ ವೈದ್ಯೆಗೆ ಗಂಭೀರ ಗಾಯವಾಯಿತು. ಆಕೆಯ ಪಕ್ಕದಲ್ಲಿ ಇದ್ದ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದೆ. ವೈದ್ಯೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಕೆಯ ಜೀವ ಉಳಿಸುವುದು ಸಾಧ್ಯವಾಗಿಲ್ಲ.
ಹಲ್ಲೆಕೋರ ಸಂದೀಪ್ ಪುಯಪಳ್ಳಿ ಚೆರುಕಾರಕೋಣಂನ ನಿವಾಸಿಯಾಗಿದ್ದು, ವೃತ್ತಿಯಿಂದ ಶಿಕ್ಷಕನಾಗಿದ್ದ ಆತನನ್ನು ಇತ್ತೀಚೆಗೆ ಅಮಾನತುಗೊಳಿಸಲಾಗಿತ್ತು. ಕುಟುಂಬದ ಸದಸ್ಯರ ಜತೆ ಜಗಳವಾಡಿದ್ದ ಸಂದೀಪ್, ತನ್ನನ್ನು ಕಾಪಾಡುವಂತೆ ಸ್ವತಃ ತಾನೇ ಪೊಲೀಸರಿಗೆ ಕರೆ ಮಾಡಿದ್ದ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಆತನ ಕಾಲಿಗೆ ಗಾಯವಾಗಿರುವುದು ಕಂಡುಬಂದಿತ್ತು. ಆತನನ್ನು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ಆತ ಮದ್ಯ ಸೇವನೆ ಮಾಡಿದ್ದ. ಆಸ್ಪತ್ರೆಗೆ ಕರೆ ತರುವಾಗ ಉದ್ರಿಕ್ತನಾಗಿ ವರ್ತಿಸುತ್ತಿದ್ದ. ರೋಗಿಯ ಗಾಯಕ್ಕೆ ಚಿಕಿತ್ಸೆ ನೀಡುವಾಗ ಕೊಠಡಿ ಒಳಗೆ ನಮಗೆ ಪ್ರವೇಶ ಇಲ್ಲದ ಕಾರಣ, ಆತನ ಜತೆ ವೈದ್ಯೆ ಮಾತ್ರ ಇದ್ದರು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಇದ್ದಕ್ಕಿದ್ದಂತೆ ಅಲ್ಲಿ ಗದ್ದಲ ಶುರುವಾಗಿತ್ತು. ವೈದ್ಯೆಯು ಸಹಾಯಕ್ಕಾಗಿ ಕಿರುಚುತ್ತಾ ಹೊರಗೆ ಓಡಿ ಬಂದರು. ಕತ್ತರಿ ಮತ್ತು ಚೂರಿ ಹಿಡಿದ
ಪೊಲೀಸ್ ಸಿಬ್ಬಂದಿ ಆತನನ್ನು ತಡೆಯಲು ಪ್ರಯತ್ನಿಸಿದಾಗ ಅವರ ಮೇಲೆ ಕೂಡ ದಾಳಿ ನಡೆಸಿದ್ದಾನೆ. ವೈದ್ಯೆ ಅಲ್ಲದೆ, ಇನ್ನೂ ನಾಲ್ಕು ಜನರಿಗೆ ಗಾಯಗಳಾಗಿವೆ. ಕುಡಿದ ಮತ್ತಿನಲ್ಲಿದ್ದ ಆತ ಆಸ್ಪತ್ರೆಯ ಅನೇಕ ಕಡೆ ದಾಂದಲೆ ನಡೆಸಿದ್ದಾನೆ. ಆತನನ್ನು ಬಹಳ ಕಷ್ಟಪಟ್ಟು ಹಿಡಿದು, ವಶಕ್ಕೆ ಪಡೆದುಕೊಳ್ಳಲಾಗಿದೆ.
A 23-year-old doctor was stabbed to death on Wednesday at a hospital in Kottarakkara area of Kollam district in Kerala allegedly by a man, a school teacher under suspension, who was brought there by police after being involved in a fight with his family members.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm