ಬ್ರೇಕಿಂಗ್ ನ್ಯೂಸ್
23-03-23 02:16 pm Bangalore Correspondent ಕ್ರೈಂ
ಬೆಂಗಳೂರು, ಮಾ.23 : ಪೊಲೀಸರೇ ಆರೋಪಿಯನ್ನು ಬಂಧಿಸಿ ಅಪಹರಣದ ನಾಟಕವಾಡಿದ್ದಲ್ಲದೆ, ಕುಟುಂಬಕ್ಕೆ 40 ಲಕ್ಷ ರೂ.ಗೆ ಬೇಡಿಕೆಯಿಟ್ಟ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧಿಸಿ ಮಾರತ್ ಹಳ್ಳಿ ಠಾಣೆಯ ಪಿಎಸ್ಐ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಾ.18ರಂದು ಹುಲಿ ಉಗುರು, ಚರ್ಮವನ್ನು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದರು. ಆದರೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸದೇ ಪ್ರತ್ಯೇಕ ಜಾಗದಲ್ಲಿ ಬಚ್ಚಿಟ್ಟಿದ್ದರು. ಆನಂತರ ಆರೋಪಿ ಸಂಬಂಧಿಕರಿಗೆ ಕರೆ ಮಾಡಿ 40 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು. ಇದರಿಂದ ಗಾಬರಿಗೊಂಡ ಆರೋಪಿ ಕುಟುಂಬಸ್ಥರು ಬಾಗಲೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಬಾಗಲೂರು ಪೊಲೀಸರು ಕಿಡ್ನಾಪ್ ಮಾಡಿ ಕರೆ ಮಾಡಿದ ಜಾಡು ಆಧರಿಸಿ ಪತ್ತೆಗೆ ಜಾಲ ಬೀಸಿದ್ದರು.
ಬಾಗಲೂರು ಪೊಲೀಸರು ತನಿಖೆ ನಡೆಸಿದಾಗ, ಕಿಡ್ನಾಪ್ ಮಾಡಿದ್ದವರು ಮಾರತಹಳ್ಳಿ ಠಾಣೆ ಪಿಎಸ್ಐ ರಂಗೇಶ್ ಮತ್ತು ಹೆಡ್ ಕಾನ್ಸ್ಟೇಬಲ್ ಹರೀಶ್ ಎಂಬುದು ತಿಳಿದುಬಂದಿದೆ. ಪ್ರಕರಣದಲ್ಲಿ ಆರೋಪಿಯನ್ನ ಇಬ್ಬರು ಪೊಲೀಸರು ಕರೆದೊಯ್ದಿದ್ದರು. ಈ ವೇಳೆ, ಪಿಎಸ್ಐ ರಂಗೇಶ್ ಆರೋಪಿ ತಲೆಗೆ ಗನ್ ಇಟ್ಟು ಹಣ ಕೊಡುವಂತೆ ಅವರ ಕಡೆಯವರಿಗೆ ಕರೆ ಮಾಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಪೊಲೀಸರೇ ಕಿಡ್ನಾಪ್ ಮಾಡಿದ್ದಾರೆ ಎಂಬುದರ ಬಗ್ಗೆ ಕಮಿಷನರ್ ಪ್ರತಾಪ್ ರೆಡ್ಡಿಗೆ ಮಾಹಿತಿ ಬಂದಿದ್ದು ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ಕೊಟ್ಟಿದ್ದರು.
ಕಮಿಷನರ್ ಸೂಚನೆ ಮೇರೆಗೆ ಮಂಗಳವಾರ ಹೆಡ್ ಕಾನ್ಸ್ಟೇಬಲ್ ಹರೀಶ್ನನ್ನು ಬಂಧಿಸಿರುವ ಬಾಗಲೂರು ಪೊಲೀಸರು ತಲೆಮರೆಸಿಕೊಂಡಿರುವ ಪಿಎಸ್ಐ ರಂಗೇಶ್ಗಾಗಿ ತೀವ್ರ ಶೋಧ ನಡೆಸಿದ್ದಾರೆ. ಬಾಗಲೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಎಂ. ಶಿವರಾಮಯ್ಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ರಾಮಾಂಜನಿ ಎಂಬಾತನನ್ನು ಅಪಹರಿಸಿ ಒಯ್ದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖವಾಗಿದೆ. ಶಬ್ಬೀರ್, ಜಾಕೀರ್, ಪಿಎಸ್ಐ ರಂಗೇಶ್, ಕಾನ್ಸ್ಟೇಬಲ್ ಹರೀಶ್ ಕೆ.ಎಲ್, ಮಹದೇವ ನಾಯಕ್, ಮಹೇಶ್ ಮೇಲೆ ದೂರು ದಾಖಲಾಗಿದೆ.
ಆರೋಪಿ ಎ- 2 ಹರೀಶ್, ಎ-3 ಆರೋಪಿ ಶಬ್ಬೀರ್ ಹಾಗೂ ಎ-4 ಆರೋಪಿ ಜಾಕೀರ್ ಸೇರಿ ಮೂವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.
Two police officers in Bengaluru have been arrested in connection with the kidnapping a man and demanding Rs 40 lakhs from his family for his release, authorities said on Thursday. The two were identified as Sub-Inspector Rangesh and head constable Harish. The incident had taken place on March 18 and came to light now.
12-08-26 06:57 pm
HK News Staffer
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ ; ಹೊಸ ಕ...
10-08-26 07:54 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 11:06 pm
HK News Desk
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
12-08-26 11:18 pm
HK News Staffer
Panambur Robbery, Update, Mangalore: ಪಣಂಬೂರು...
12-08-26 07:47 pm
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm