ಬ್ರೇಕಿಂಗ್ ನ್ಯೂಸ್
14-03-23 04:15 pm Bangalore Correspondent ಕ್ರೈಂ
ಬೆಂಗಳೂರು, ಮಾ.14: ಪೊಲೀಸ್ರ ಖಾಕಿ ಬಟ್ಟೆ ಹಾಕಿಕೊಂಡು ಬಂದು ಹಾಡಹಗಲಲ್ಲೆ ಎರಡು ಕೆ.ಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ಆನಂದ್ರಾವ್ ವೃತ್ತದ ಮುಂದೆ ಮೆಜೆಸ್ಟಿಕ್ ತಿರುವಿನಲ್ಲಿ ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಒಂದು ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಕಳೆದ ಶನಿವಾರ ನಡೆದಿದೆ. ಈ ಕುರಿತು ಅಬ್ದುಲ್ ರಜಾಕ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮಾ.11ರಂದು ಆನಂದ್ರಾವ್ ಸರ್ಕಲ್ ಬಳಿ ಪೊಲೀಸರ ಹೆಸರಲ್ಲಿ ದುಷ್ಕರ್ಮಿಗಳು 1.12 ಕೋಟಿ ರೂ. ಮೌಲ್ಯದ ಎರಡು ಕೆ.ಜಿ ಚಿನ್ನದ ಗಟ್ಟಿ, 200 ಗ್ರಾಂ ಚಿನ್ನಾಭರಣ, 19 ಸಾವಿರ ರೂ. ನಗದು ಕಳವು ಮಾಡಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.
ಆರೋಪಿಗಳು ಕ್ರೈಂ ಪೊಲೀಸರೆಂದು ಹೇಳಿ ವಂಚಿಸಿದರು ಎಂದು ದೂರುದಾರರು ತಿಳಿಸಿದ್ದಾರೆ. ಘಟನಾಸ್ಥಳದ ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ. ಹಲವು ಆಯಾಮಗಳಲ್ಲಿತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಚಿನ್ನದ ಗಟ್ಟಿ ಖರೀದಿಗೆ ಬಂದಿದ್ರು ;
ರಾಯಚೂರಿನ ಚಿನ್ನಾಭರಣ ವ್ಯಾಪಾರಿ ಬಳಿ ಕಾರು ಚಾಲಕನಾಗಿದ್ದ ಅಬ್ದುಲ್ ರಜಾಕ್ ಹಾಗೂ ಕೆಲಸಗಾರ ಮಲ್ಲಯ್ಯ ಜತೆಗೂಡಿ ಚಿನ್ನದ ಗಟ್ಟಿಗಳನ್ನು ಖರೀದಿ ಮಾಡಿಕೊಂಡು ಹೋಗಲು ಬಂದಿದ್ದರು. ಅವರ ಜತೆ ಸುನಿಲ್ ಕುಮಾರ್ ಎಂಬಾತನೂ ಚಿನ್ನದ ಗಟ್ಟಿ ಖರೀದಿಗೆ ಬಂದಿದ್ದ. ಮಾ. 11ರಂದು ರಾತ್ರಿ ಮೂವರು ಚಿನ್ನದ ಗಟ್ಟಿಗಳನ್ನು ಖರೀದಿ ಮಾಡಿ ಖಾಸಗಿ ಟ್ರಾವೆಲ್ಸ್ನಲ್ಲಿಊರಿಗೆ ತೆರಳಲು ಆನಂದರಾವ್ ಸರ್ಕಲ್ಗೆ ಆಗಮಿಸಿದ್ದರು. ಈ ವೇಳೆ ಸುನಿಲ್ ಕುಮಾರ್ ಟ್ರಾವೆಲ್ ಏಜೆನ್ಸಿ ಕಚೇರಿಯಲ್ಲಿಯೇ ಉಳಿದುಕೊಂಡಿದ್ದರು. ರಾತ್ರಿ 10.45ರ ಸುಮಾರಿಗೆ ರಜಾಕ್ ಹಾಗೂ ಮಲ್ಲಯ್ಯ ಶೌಚಾಲಯಕ್ಕೆ ತೆರಳಿದಾಗ ಇಬ್ಬರು ಅಪರಿಚತರು ಅವರನ್ನು ಅಡ್ಡಗಟ್ಟಿ ತಾವು ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಅವರ ಬಳಿಯಿದ್ದ ಎರಡು ಕೆ.ಜಿ ಚಿನ್ನದ ಗಟ್ಟಿ, 200 ಗ್ರಾಂ. ಚಿನ್ನಾಭರಣಗಳಿದ್ದ ಬ್ಯಾಗ್ಗಳನ್ನು ಪಡೆದು ಆಟೊ ಹತ್ತಿಸಿಕೊಂಡಿದ್ದರು. ನಂತರ ಮಲ್ಲಯ್ಯ ಅವರನ್ನು ರೇಸ್ಕೋರ್ಸ್ ಬಳಿ ಇಳಿಸಿದ್ದರು. ಜತೆಗೆ, ರಜಾಕ್ರನ್ನು ನೆಹರೂ ತಾರಾಲಯದ ಬಳಿ ಇಳಿಸಿ ಡಿಸಿ ಕಚೇರಿ ಬಳಿ ಬನ್ನಿ ಎಂದು ಹೇಳಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Bangalore Gang threatens as crime police, flee with 2 kilo gold worth 1 crore. The two who had come from Raichur to purchase Gold finally fell prey to fake police.
10-11-25 01:23 pm
Bangalore Correspondent
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್ ವಿಡಿಯೋ ವೈರಲ...
10-11-25 12:22 pm
ಮುಸ್ಲಿಂ, ಕ್ರೈಸ್ತರು ಆರೆಸ್ಸೆಸ್ ಶಾಖೆಗೆ ಬರಬಹುದಾ?...
09-11-25 06:53 pm
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm