ಬ್ರೇಕಿಂಗ್ ನ್ಯೂಸ್
05-02-23 05:26 pm Mangalore Correspondent ಕ್ರೈಂ
ಮಂಗಳೂರು, ಫೆ.5 : ಕ್ರಿಪ್ಟೋ ಕರೆನ್ಸಿ ವ್ಯವಹಾರಕ್ಕೆಂದು ಹೂಡಿಕೆ ಮಾಡಿಸಿ ಬರೋಬ್ಬರಿ 3 ಕೋ.ರೂ. ವಂಚಿಸಿರುವ ಬಗ್ಗೆ ನಗರದ ಪಡೀಲ್ ಕಣ್ಣೂರು ನಿವಾಸಿಯೊಬ್ಬರು ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮುಹಮ್ಮದ್ ಶಫದ್ ಸಿ.ಕೆ. ಮತ್ತು ಮುಹಮ್ಮದ್ ಅಫೀದ್ ಸಿ.ಕೆ. ಆರೋಪಿಗಳು. ದೂರುದಾರ ವ್ಯಕ್ತಿಯ ಬಳಿ ಪರಿಚಯದ ಮುಹಮ್ಮದ್ ಶಫದ್ ಎಂಬಾತ 2020ರ ಜನವರಿಯ ಮೊದಲ ವಾರದಲ್ಲಿ ತಾನು ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ಕೋಟ್ಯಂತರ ರೂ. ಸಂಪಾದಿಸಿದ್ದು, ಯಾರಾದರೂ ಒಳ್ಳೆಯ ಹೂಡಿಕೆದಾರರು ಇದ್ದರೆ ತಿಳಿಸು ಎಂದಿದ್ದ ಎನ್ನಲಾಗಿದೆ. ಅದರಂತೆ ದೂರುದಾರರು ಮುಹಮ್ಮದ್ ಶಫದ್ನನ್ನು ಭೇಟಿಯಾಗಿದ್ದು, ಆವಾಗ ಆತ ಲ್ಯಾಪ್ಟಾಪ್ನಲ್ಲಿ ಕ್ರಿಪ್ಟೋ ವ್ಯವಹಾರದ ಮಾಹಿತಿ ನೀಡುತ್ತಾ ತಿಂಗಳಿಗೆ ಶೇ.25 ಲಾಭಾಂಶ ನೀಡುವುದಾಗಿ ತಿಳಿಸಿದ್ದ.
ಜನವರಿ 3ನೇ ವಾರದಲ್ಲಿ ಮುಹಮ್ಮದ್ ಶಫದ್ ಮತ್ತು ಆತನ ತಮ್ಮ ಮುಹಮ್ಮದ್ ಅಫೀದ್ ತನ್ನ ಮನೆಗೆ ಭೇಟಿ ನೀಡಿದ್ದು 35 ಲಕ್ಷ ರೂ. ನಗದನ್ನು ಆರೋಪಿ ಸಹೋದರರಿಗೆ ನೀಡಿದ್ದೆ ಎಂದು ದೂರುದಾರ ದೂರಿನಲ್ಲಿ ತಿಳಿಸಿದ್ದಾರೆ. ಒಂದು ತಿಂಗಳ ಬಳಿಕ ಮುಹಮ್ಮದ್ ಶಫದ್ ವಾಟ್ಸಪ್ ಮೂಲಕ ದೂರುದಾರರಿಗೆ ಒಂದು ತಿಂಗಳ 8.75 ಲಕ್ಷ ರೂ. ಲಾಭಾಂಶ ಬಂದಿರುವುದಾಗಿ ಕ್ರಿಪ್ಟೋ ಕರೆನ್ಸಿಯ ಅಕೌಂಟ್ ತೋರಿಸಿದ್ದ. ಕೋವಿಡ್ ಕಾರಣದಿಂದ ಲಾಭಾಂಶ ವಿಳಂಬವಾಗಿದ್ದು ಮುಂದಿನ ಎರಡು ತಿಂಗಳಲ್ಲಿ ಅಪ್ಡೇಟ್ ಆಗುತ್ತದೆ ಎಂದು ನಂಬಿಸಿದ್ದ. ಬಳಿಕ ಮತ್ತೆ ಕರೆ ಮಾಡಿಯೂ ಲಾಭಾಂಶದ ಬಗ್ಗೆ ನಂಬಿಸಿದ್ದ ಎನ್ನಲಾಗಿದೆ.
ಈ ನಡುವೆ, ಜಾಸ್ಮಿನ್ ಹಂಝ ಎಂಬವರ ಹೆಸರು ಸೂಚಿಸಿ ಅವರ ಮೂಲಕ ದೂರುದಾರರಿಂದ ಮತ್ತೆ 7 ಲ.ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದ. ದೂರುದಾರರು ತನ್ನ ಸ್ನೇಹಿತರಿಂದ ಸಂಗ್ರಹಿಸಿ ಆರೋಪಿಗಳಿಗೆ ಒಟ್ಟು 3 ಕೋ.ರೂ. ನೀಡಿದ್ದು, ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಆರೋಪಿಸಲಾಗಿದೆ. 2022ರಲ್ಲಿ ಬೆಂಗಳೂರಿನಲ್ಲಿ ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದಲ್ಲಿ ಮುಹಮ್ಮದ್ ಶಫದ್ ಮತ್ತು ಮುಹಮ್ಮದ್ ಅಫೀದ್ ಭಾಗಿಯಾಗಿರುವ ಮಾಹಿತಿ ತನಗೆ ಸಿಕ್ಕಿದ್ದು, ಆ ಹಿನ್ನೆಲೆಯಲ್ಲಿ ಆರೋಪಿಗಳಾದ ಮುಹಮ್ಮದ್ ಶಫದ್ ಸಿ.ಕೆ, ಮುಹಮ್ಮದ್ ಅಫೀದ್ ಸಿ.ಕೆ., ಸಾದಿಕ್, ಜಾಸ್ಮಿನ್, ಮುಹಮ್ಮದ್ ಬಶೀರ್ ವಿರುದ್ಧ ನೀಡಿದ್ದ ದೂರಿನಂತೆ ಸೆನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A person, resident of Kannur Borugudde filed complaint with police accusing two men of conning Rs three crore on the pretext of investing in cryptocurrency. Mohammad Shafad C K and Mohammad Afeed C K are the accused. Mohammed Shafad was known to the complainant. He told the complainant to inform him of any good investors to invest in cryptocurrency as he has made crore of rupees in January 2020.
23-03-26 12:48 pm
HK News Staffer
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
23-03-26 11:33 am
HK News Staffer
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬ...
22-03-26 08:37 pm
ಮುಯ್ಯಿಗೆ ಮುಯ್ಯಿ ; ಇಸ್ರೇಲ್ ಅಣು ಸ್ಥಾವರಕ್ಕೆ ಇರಾನ...
22-03-26 03:14 pm
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
ಪ್ಯಾಲೆಸ್ತೀನಿಗರಿಗೆ ಈ ಬಾರಿ ಕಹಿಯಾಯ್ತು ಈದ್ ; ಜೆರು...
20-03-26 05:32 pm
23-03-26 05:36 pm
HK News Staffer
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ರಾಜ್ಯ ಸರಕಾರ,...
23-03-26 05:13 pm
Sandesh PG, CID Case: ಮೂಡುಬಿದಿರೆ ಇನ್ಸ್ಪೆಕ್ಟರ...
23-03-26 02:24 pm
ವಿನಾಯಕ ಬಾಳಿಗಾ ಕೊಲೆಗೆ ಹತ್ತು ವರ್ಷ ; ವೆಂಕಟರಮಣ ದ...
23-03-26 01:11 pm
ಉಡುಪಿಯಲ್ಲಿ ರಾಜಕೀಯ ಕಾದಾಟ ; ಶಾಸಕ ಯಶ್ ಪಾಲ್ ವಿರುದ...
22-03-26 07:30 pm
23-03-26 03:08 pm
HK News Staffer
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm
ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ನೀಚ ಅಜ್...
20-03-26 04:09 pm
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm