ಬ್ರೇಕಿಂಗ್ ನ್ಯೂಸ್
04-01-23 04:28 pm HK News Desk ಕ್ರೈಂ
ಹೈದರಾಬಾದ್, ಜ.4: ಬೇರೊಬ್ಬ ಮಹಿಳೆಯ ಸಂಗ ಬೆಳೆಸಿದ ಉಪನ್ಯಾಸಕ ವೃತ್ತಿಯಲ್ಲಿದ್ದ ಗಂಡನೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ತೊರೆಯುವುದಕ್ಕಾಗಿ ಅವರಿಗೆ ಉಪಾಯದಿಂದ ಸ್ಲೋ ಪಾಯ್ಸನ್ ಉಣಿಸಿ ಕೊಂದಿದ್ದಲ್ಲದೆ, ಕೊನೆಗೆ ಸಿಕ್ಕಿಬೀಳುವ ಭಯದಲ್ಲಿ ತಾನೇ ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣ ರಾಜ್ಯದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ.
ಗಂಗಾಧರ ವೇಮುಲ ಶ್ರೀಕಾಂತ್, ಕರೀಂ ನಗರದಲ್ಲಿ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದ. ಈತನಿಗೆ ಪತ್ನಿ ಮಮತಾ ಹಾಗೂ ಇವರ ದಾಂಪತ್ಯಕ್ಕೆ 5 ವರ್ಷದ ಮಗಳು ಅಮೂಲ್ಯ ಮತ್ತು ಒಂದೂವರೆ ವರ್ಷ ಪ್ರಾಯದ ಮಗ ಅದ್ವೈತ್ ಎಂಬ ಇಬ್ಬರು ಮಕ್ಕಳಿದ್ದರು.
ಈ ನಡುವೆ, ಬೇರೊಬ್ಬ ಮಹಿಳೆಯೊಂದಿಗೆ ಶ್ರೀಕಾಂತ್ ಸಂಬಂಧ ಬೆಳೆಸಿದ್ದ. ಇತ್ತೀಚೆಗೆ ಅಕ್ರಮ ಸಂಬಂಧದ ಬೇರು ಗಟ್ಟಿಗೊಂಡು ತನ್ನ ಮಕ್ಕಳು ಮತ್ತು ಪತ್ನಿಯನ್ನೇ ಕೊಲ್ಲಲು ನಿರ್ಧರಿಸಿದ್ದ ಎನ್ನುವ ಭಯಾನಕ ಸತ್ಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈತನ ಒಂದೂವರೆ ವರ್ಷದ ಪುಟ್ಟ ಮಗು ನ.16, 2022 ರಂದು ವಾಂತಿ, ಭೇದಿಯಿಂದ ಸಾವನ್ನಪ್ಪಿತ್ತು. ಮಗಳು ಅಮೂಲ್ಯ ಅದೇ ರೀತಿ ಡಿ.4 ರಂದು ವಾಂತಿ ಭೇದಿ ಉಲ್ಬಣಗೊಂಡು ಸಾವು ಕಂಡಿದ್ದಳು. ಆತನ ಪತ್ನಿ ಮಮತಾ ಕೂಡ ವಾಂತಿ, ಭೇದಿಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಡಿಸೆಂಬರ್ 18 ರಂದು ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಈ ನಡುವೆ ಶ್ರೀಕಾಂತ್, ತನ್ನ ಮಕ್ಕಳು, ಪತ್ನಿಗೆ ಗಂಭೀರ ಕಾಯಿಲೆ ಎದುರಾದ ಬಗ್ಗೆ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ದಾನಿಗಳಿಂದ ದೊಡ್ಡ ಮೊತ್ತವನ್ನೂ ಸಂಗ್ರಹಿಸಿದ್ದ.
ಒಂದೇ ತಿಂಗಳ ಅಂತರದಲ್ಲಿ ತಾಯಿ, ಮಕ್ಕಳ ಸಾವಿನಿಂದಾಗಿ ಆಕೆಯ ಸಂಬಂಧಿಕರಿಗೆ ಸಂಶಯ ಉಂಟಾಗಿತ್ತು. ಶ್ರೀಕಾಂತ್ ಬಗ್ಗೆ ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮೂರು ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ತಪಾಸಣೆ ಮಾಡಿದ್ದಾರೆ. ಮೂವರ ದೇಹದಲ್ಲೂ ಒಂದೇ ರೀತಿಯ ವಿಷಕಾರಿ ಅಂಶ ಇರುವುದು ತಿಳಿಯುತ್ತಲೇ ಸಂಶಯ ಬಲಗೊಂಡಿತ್ತು. ಪೊಲೀಸರು ಮೂವರ ರಕ್ತದ ಮಾದರಿಗಳನ್ನು ಕೂಡ ಮುಂಬೈನ ಪ್ರಯೋಗಾಲಯಕ್ಕೆ ಕಳುಹಿಸಿ, ತಪಾಸಣೆ ನಡೆಸಲು ಸೂಚಿಸಿದ್ದರು. ಇದೇ ವೇಳೆ, ಮುಂಬೈನಿಂದ ಬರುವ ವರದಿಯಿಂದಾಗಿ ತನ್ನ ಪಾತ್ರ ಹೊರಬೀಳುತ್ತೆ ಎಂದು ಹೆದರಿದ್ದ ಶ್ರೀಕಾಂತ್ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಮೃತಪಟ್ಟಿದ್ದಾನೆ.
ಆರೋಪಿ ಶ್ರೀಕಾಂತ್ ತನ್ನ ಪತ್ನಿ ಮಕ್ಕಳನ್ನು ದೂರ ಮಾಡಿ, ಹೊಸ ಸಂಗಾತಿಯ ಜೊತೆ ಜೀವಿಸಲು ಮುಂದಾಗಿದ್ದ. ಅದಕ್ಕಾಗಿ ನಿಧಾನ ವಿಷವನ್ನು ಪತ್ನಿ ಮಕ್ಕಳಿಗೆ ಕೊಟ್ಟು ಸಾಯುವಂತೆ ಮಾಡಿದ್ದ. ಇದರ ನಡುವೆ, ಅನುಕಂಪ ಗಿಟ್ಟಿಸಿಕೊಂಡು ಹಣವನ್ನೂ ಸಂಗ್ರಹಿಸಿದ್ದ. ಆದರೆ ತಾನೊಂದು ಬಗೆದರೆ ವಿಧಿಯೊಂದು ಬಗೆಯುತ್ತೆ ಎನ್ನುವಂತೆ ಶ್ರೀಕಾಂತ್ ಕೊನೆಗೆ ತಾನೇ ಜೈಲು ಸೇರುತ್ತೇನೆಂಬ ಭಯದಲ್ಲಿ ಸಾವಿಗೆ ಶರಣಾಗಿದ್ದಾನೆ. ಇಡೀ ಕುಟುಂಬದ ದುರಂತ ಅಂತ್ಯಕ್ಕೂ ಕಾರಣವಾಗಿದ್ದಾನೆ.
In a tragic incident, four members of a family died of an unknown disease within a span of 45 days. While two children and the mother died between November 16 and December 17, the head of the family breathed his last on Friday night. Although the medical authorities have conducted separate tests, they have failed to find any specific cause of the deaths. The officials are waiting for the report of the forensic lab.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 02:32 pm
Mangalore Correspondent
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
05-07-25 01:20 pm
Mangalore Correspondent
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm