ಬ್ರೇಕಿಂಗ್ ನ್ಯೂಸ್
21-12-22 12:54 pm Mangalore Correspondent ಕ್ರೈಂ
ಉಳ್ಳಾಲ, ಡಿ.21: ನೂತನ ಗೃಹಪ್ರವೇಶಕ್ಕೂ ಹಿಂದಿನ ದಿನ ವಾಸ್ತು ಹೋಮ ನಡೆಯುತ್ತಿದ್ದಾಗ ಹೊಗೆ ತುಂಬಿದ್ದ ಮನೆಗೆ ನುಗ್ಗಿದ ಕಳ್ಳನೋರ್ವ ಮನೆಯೊಳಗಿದ್ದ ನಗದು ಕದ್ದೊಯ್ದಿದ್ದಲ್ಲದೆ, ಅದೇ ರಾತ್ರಿ ಪಕ್ಕದ ಮನೆಗೂ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಕಳ್ಳತನ ನಡೆಸಿದ ಘಟನೆ ನಡೆದಿದ್ದು ಕಳ್ಳನ ಕೈಚಳಕ ವಿಡಿಯೋದಲ್ಲಿ ದಾಖಲಾಗಿದೆ.
ಡಿ.10ರಂದು ರಾತ್ರಿ ತೊಕ್ಕೊಟ್ಟಿನ ಸ್ಮಿತಾ-ದಾಮೋದರ್ ದಂಪತಿ ಕೋಟೆಕಾರು ಬಳಿಯ ಅಡ್ಕಬೈಲು ಎಂಬಲ್ಲಿ ನಿರ್ಮಸಿದ ನೂತನ ಮನೆಯಲ್ಲಿ ವಾಸ್ತು ಹೋಮ ನೆರವೇರಿಸಿದ್ದರು. ವಾಸ್ತು ಹೋಮ ನಡೆಯುತ್ತಿರುವಾಗಲೇ ಎಲ್ಲರ ಸಮ್ಮುಖದಲ್ಲೇ ಹೋಮದ ಹೊಗೆಯ ಲಾಭ ಎತ್ತಿ ಒಳ ನುಗ್ಗಿದ್ದ ಬರ್ಮುಡ ಹಾಕ್ಕೊಂಡಿದ್ದ ಯುವಕನೋರ್ವ ಕೋಣೆಯೊಳಗೆ ನುಗ್ಗಿ ಬ್ಯಾಗೊಂದನ್ನ ಟೀ ಶರ್ಟ್ ಒಳಗಡೆ ಇಟ್ಟು ಹೊರನಡೆದಿದ್ದಾನೆ. ಕೋಣೆಯೊಳಗಡೆ ಇದ್ದ ಬ್ಯಾಗಲ್ಲಿ 15,000 ರೂ. ನಗದು, ಮೊಬೈಲ್ ಚಾರ್ಜರ್ ಮತ್ತು ಬೆಲೆ ಬಾಳುವ ಕಾಸ್ಮೆಟಿಕ್ಸ್ ವಸ್ತುಗಳಿದ್ದವಂತೆ. ಕಳ್ಳ ಹೋಮ ನಡೆಯುತ್ತಿದ್ದ ವೇಳೆ ಮನೆಯೊಳಗಿನ ಕೋಣೆಗೆ ಬಂದು ಹೊರ ಹೋಗುವ ದೃಶ್ಯ ಚಿತ್ರೀಕರಣ ನಡೆಸುತ್ತಿದ್ದ ಕ್ಯಾಮೆರಾಮೆನ್ ವೀಡಿಯೋದಲ್ಲಿ ದಾಖಲಾಗಿದೆ.
ಅದೇ ದಿನ ಮಧ್ಯರಾತ್ರಿ ಅಲ್ಲಿಯೇ ಸಮೀಪದ ಶಿವಸುಬ್ರಹ್ಮಣ್ಯ ಪ್ರಸಾದ್ ಭಟ್ ಎಂಬವರ ಮನೆಗೂ ರಾತ್ರಿ ಕನ್ನ ಹಾಕಿದ್ದ ಕಳ್ಳ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲನ್ನ ಒಡೆದು ಕಪಾಟಿನಲ್ಲಿದ್ದ 11,000 ರೂ. ನಗದು, 32 ಗ್ರಾಂ ಚಿನ್ನ , 8 ಬೆಳ್ಳಿಯ ನಾಣ್ಯ ಮತ್ತು 3 ರೇಡೋ ವಾಚ್ ಗಳು ಸೇರಿ ಒಟ್ಟು 1,49000 ರೂಪಾಯಿ ಮೌಲ್ಯದ ನಗ, ನಗದನ್ನ ಕದ್ದೊಯ್ದಿದ್ದಾನೆ.
ಬರ್ಮುಡ ಧಾರಿ ಕಳ್ಳನ ಜತೆ ಇನ್ನೋರ್ವ ಇದ್ದು ಇವರಿಬ್ಬರು ಡಿ.10 ರ ರಾತ್ರಿ ಕಳ್ಳತನ ನಡೆದಿದ್ದ ಪ್ರದೇಶ ಅಡ್ಕ ಬೈಲಿಗೆ ದ್ವಿಚಕ್ರ ವಾಹನದಲ್ಲಿ ಬಂದು ಠಳಾಯಿಸುತ್ತಿರುವ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗೃಹ ಪ್ರವೇಶದ ಮನೆಯಲ್ಲಿ ಎಲ್ಲರ ಎದುರೇ ವಾಸ್ತು ಹೋಮದ ಹೊಗೆಯ ಲಾಭ ಎತ್ತಿ ಖುಲ್ಲಂ ಖುಲ್ಲಂ ಕಳ್ಳತನ ಮಾಡಿದ ಐನಾತಿ ಕಳ್ಳನ ಬಗ್ಗೆಯೇ ಅಡ್ಕ ಪರಿಸರದಲ್ಲಿ ಚರ್ಚೆ ನಡೆಯುತ್ತಿದೆ.
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದು ವೀಡಿಯೋ ಫೂಟೇಜ್ ಆಧಾರದಲ್ಲಿ ಕಳ್ಳರ ಶೋಧ ಕಾರ್ಯ ನಡೆಸುತ್ತಿದ್ದಾರೆ.
Mangalore thief steals a bag with cash while performing Vatu Homa at home in thokottu. In the CC camera it is also seen the thief stealing Gold Jewels even from neighbours house. Ullal police have registered the case and are now investigating.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm