ಬ್ರೇಕಿಂಗ್ ನ್ಯೂಸ್
04-12-22 06:56 pm Mangalore Correspondent ಕ್ರೈಂ
ಉಳ್ಳಾಲ, ಡಿ.4 : ಪಾಸ್ಪೋರ್ಟ್ ರಿನೀವಲ್ ಮಾಡಿಸಲೆಂದು ಬೆಂಗಳೂರಿನಿಂದ ಬಂದು ಮಂಗಳೂರಿನ ತೊಕ್ಕೊಟ್ಟು ಕಾಪಿಕಾಡಿನ ಲಾಡ್ಜಲ್ಲಿ ತಂಗಿದ್ದ ಯುವಕ ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದು ಇಂದು ಆತನ ಶವ ಲಾಡ್ಜ್ ಸಮೀಪದ ಮನೆಯೊಂದರ ಬಾವಿಯಲ್ಲಿ ಪತ್ತೆಯಾಗಿದ್ದು ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಮಹಂತೇಶ್ ಎ.ಎಸ್ (36)ಮೃತ ಯುವಕ. ಎಂಬಿಎ ಪದವೀಧರನಾಗಿದ್ದ ಮಹಂತೇಶ್ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಎನ್ನಲಾಗಿದೆ. ಮಹಂತೇಶ್ ಕಳೆದ ಬುಧವಾರ ಸಂಜೆ 5 ಗಂಟೆಗೆ ತೊಕ್ಕೊಟ್ಟು ಕಾಪಿಕಾಡಿನ ನಿರ್ವಿಕಲ್ಪ ಹೊಟೇಲಿನ ಲಾಡ್ಜಲ್ಲಿ ತಂಗಿದ್ದ. ಆ ದಿನ ರಾತ್ರಿ ಮಹಂತೇಶ್ ಸಮೀಪದ ಮಾಯಾ ಬಾರಲ್ಲಿ ಮದ್ಯ ಸೇವಿಸಿ ಬಳಿಕ ಬಂದು ನಿರ್ವಿಕಲ್ಪ ಕಟ್ಟಡದ ಬಾರಲ್ಲೂ ಮಧ್ಯರಾತ್ರಿ ವರೆಗೆ ಮದ್ಯ ಸೇವಿಸಿ ಮೊಬೈಲನ್ನ ಅಲ್ಲಿಯೇ ಬಿಟ್ಟು ಹೊರ ಹೋಗಿದ್ದನಂತೆ.
ಶುಕ್ರವಾರ ಸಂಜೆಗೆ ಮಹಂತೇಶ್ ಬುಕ್ ಮಾಡಿದ್ದ ಲಾಡ್ಜ್ ನ ಅವಧಿ ಮುಗಿದಿದ್ದು ಸಿಬ್ಬಂದಿಗಳು ರೂಮನ್ನ ತಪಾಸಣೆ ಮಾಡಿದಾಗ ಮಹಂತೇಶ್ ಇರುವಿಕೆ ಇಲ್ಲದ್ದನ್ನ ಕಂಡು ಪೊಲೀಸರಿಗೆ ದೂರು ನೀಡಿದ್ದರು. ನಿನ್ನೆ ಶನಿವಾರ ಮಹಂತೇಶ್ ನ ಸಹೋದರಿ ಉಳ್ಳಾಲ ಠಾಣೆಗೆ ಬಂದು ಮಹಂತೇಶ್ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಇಂದು ಮಧ್ಯಾಹ್ನದ ವೇಳೆಗೆ ಅಂಬಿಕಾ ರೋಡ್ ಹೆದ್ದಾರಿ ಅಂಚಿನಲ್ಲಿರುವ ಅಬ್ದುಲ್ ಸಮದ್ ಎಂಬವರ ಮನೆಯ ಹಿಂದಿನ ಬಾವಿಯಲ್ಲಿ ಮಹಂತೇಶ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಮದ್ ಮನೆ ಕೆಲಸದಾಕೆ ಸುಗಂಧಿ ಎಂಬವರು ಬಾವಿಯೊಳಗೆ ದುರ್ವಾಸನೆ ಬರುತ್ತಿರುವುದನ್ನ ಗ್ರಹಿಸಿ ಬಾವಿ ನೋಡಿದಾಗ ಅಪರಿಚಿತ ವ್ಯಕ್ತಿಯ ಶವ ಕಂಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಉಳ್ಳಾಲ ಪೊಲೀಸರು ಕೊಳೆತ ಶವವನ್ನು ಹರಸಾಹಸ ಪಟ್ಟು ಮೇಲಕ್ಕೆತ್ತಿದ್ದಾರೆ.
ಮೃತದೇಹದ ಪ್ಯಾಂಟ್ ಜೇಬಲ್ಲಿ ನಿರ್ವಿಕಲ್ಪ ಲಾಡ್ಜ್ ರೂಂ ಕೀಲಿ ಕೈ ಮತ್ತು ಮಹಂತೇಶ ಅರಸೀಕೆರೆ ಎಂದು ಸ್ಟಿಕ್ಕರ್ ಹಚ್ಚಿರುವ ಪೆನ್ ಡ್ರೈವ್ ಲಭಿಸಿದ್ದು ಪೊಲೀಸರು ಲಾಡ್ಜ್ ಸಿಬ್ಬಂದಿಯನ್ನ ಕರೆಸಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ. ಮೃತದೇಹವನ್ನ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಂಬಿಕಾರೋಡ್ ನಿವಾಸಿ ಸಮದ್ ಅವರ ಮನೆಯು ಹೆದ್ದಾರಿ ಅಂಚಿನಲ್ಲಿದ್ದು ಮನೆಗೆ ತಾಗಿಕೊಂಡು ವಾಣಿಜ್ಯ ಮಳಿಗೆಗಳಿವೆ. ಮನೆ ಹಿಂಬದಿಯಲ್ಲಿ ಬಾಡಿಗೆ ಮನೆ ನಿವಾಸಿಗಳಿದ್ದು, ಹಿಂಬದಿಯಲ್ಲಿರುವ ಬಾವಿಗೆ ಮಹಂತೇಶ್ ಹೇಗೆ ಬಿದ್ದನೆಂಬುದೇ ಅನುಮಾನಗಳಿಗೆ ಕಾರಣವಾಗಿದೆ. ಬಾವಿಯಲ್ಲಿ ಶವ ಪತ್ತೆಯಾದಾಗಲೂ ಪಂಪ್ ಸೆಟ್ ಅಳವಡಿಸಲಾಗಿದ್ದ ಬಾವಿಗೆ ಸಂಪೂರ್ಣವಾಗಿ ಬಲೆಯನ್ನ ಮುಚ್ಚಲಾಗಿತ್ತು. ಸಮದ್ ಅವರ ಮನೆಯಲ್ಲಿ ಪತ್ನಿ ಮೆಹರುನ್ನೀಸ ಮತ್ತು ಹಿರಿಯ ಮಗ ಶಮೀರ್ ವಾಸವಿದ್ದು, ಕಿರಿಯ ಮಗ ಶಾಹಿಲ್ ವಿದೇಶದಲ್ಲಿ ನೆಲೆಸಿದ್ದಾನೆ. ಪೊಲೀಸರ ತನಿಖೆಯಿಂದಷ್ಟೆ ಮಹಂತೇಶನ ಸಾವು ಹೇಗೆ ಸಂಭವಿಸಿದೆ ಎಂದು ತಿಳಿಯಲಿದೆ.
A youth, who had come from Bengaluru to get his passport renewed and was staying at a lodge at Kapikadu in Thokkottu in Mangaluru, has been missing since Last Wednesday and his body was found in a well of a house near the lodge. The deceased has been identified as Mahantesh A S (36), a native of Arasikere in Hassan district and currently residing in Bengaluru. Mahantesh, an MBA graduate, was employed in a company in Bengaluru.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am