ಬ್ರೇಕಿಂಗ್ ನ್ಯೂಸ್
02-12-22 10:38 pm HK News Desk ಕ್ರೈಂ
ಮುಂಬೈ, ಡಿ.2: ದೆಹಲಿಯ ಶ್ರದ್ಧಾ ವಾಲ್ಕರನ್ನು 35 ಪೀಸ್ ಮಾಡಿದ್ದರೆ, ನಿನ್ನನ್ನು 70 ಪೀಸ್ ಮಾಡಿ ಕೊಂದು ಹಾಕುತ್ತೇನೆ ಎಂದು ತನ್ನೊಂದಿಗೆ ಬಲವಂತದಿಂದ ಲೀವಿಂಗ್ ಟುಗೆದರ್ ಸಂಬಂಧ ಇಟ್ಟುಕೊಂಡಿರುವ ಮುಸ್ಲಿಂ ವ್ಯಕ್ತಿ ಬೆದರಿಕೆ ಹಾಕಿದ್ದಾಗಿ ಮಹಿಳೆಯೊಬ್ಬರು ಪೊಲೀಸ್ ದೂರು ನೀಡಿದ್ದಾರೆ.
ಮಹಾರಾಷ್ಟ್ರದ ಧುಲೇ ಜಿಲ್ಲೆಯಲ್ಲಿ ಮಹಿಳೆ ನ.29ರಂದು ದೂರು ದಾಖಲಿಸಿದ್ದು, ಆರೋಪಿ ಅರ್ಶದ್ ಅಮಲ್ ಮಲಿಕ್ ವಿರುದ್ಧ ಆರೋಪ ಮಾಡಿದ್ದಾಳೆ. ಮಹಿಳೆಗೆ ಈ ಹಿಂದೆ ಮದುವೆಯಾಗಿದ್ದು, 2017ರಲ್ಲಿ ಗಂಡ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದ. ದಂಪತಿಗೆ ಒಂದು ಮಗವೂ ಇತ್ತು. ಆನಂತರ, 2019ರಲ್ಲಿ ಹರ್ಷಲ್ ಮಲಿ ಎನ್ನುವ ಹೆಸರಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದ. ಆತ ಧುಲೇಯ ಲಾಲಿಂಗ್ ಗ್ರಾಮದ ಕಾಡಿಗೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ಎಸಗಿದ್ದ. ಆನಂತರ ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿ, ಬ್ಲಾಕ್ಮೇಲ್ ಮಾಡುತ್ತಿದ್ದ. 2021ರ ಜುಲೈನಿಂದ ಲಿವಿಂಗ್ ಟುಗೆದರ್ ರಿಲೇಶನ್ ಇಟ್ಕೊಂಡು ಒಟ್ಟಿಗೆ ಇದ್ದೆವು. ಅಮಾಲ್ನೇರ್ ನಲ್ಲಿ ಜೊತೆಗೆ ವಾಸ ಇದ್ದಾಗಲೇ ಆತನ ನೈಜ ಹೆಸರು ಹರ್ಶಲ್ ಮಲಿ ಅಲ್ಲ, ಅರ್ಶದ್ ಸಲೀಮ್ ಮಲೀಕ್ ಅನ್ನುವುದು ತಿಳಿದುಬಂದಿತ್ತು.
ಆನಂತರ, ಅರ್ಶದ್ ಮಲೀಕ್ ಬಲವಂತದಿಂದ ತನ್ನನ್ನು ಒಸ್ಮಾನಾಬಾದ್ ನಲ್ಲಿರುವ ಫ್ಲಾಟಿಗೆ ಕರೆದೊಯ್ದು ಅಲ್ಲಿ ಇರಿಸಿದ್ದ. ಅಲ್ಲದೆ, ಬಲವಂತದಿಂದ ಮತಾಂತರವನ್ನೂ ಮಾಡಿದ್ದ. ತನ್ನ ಮಗುವನ್ನೂ ಮುಸ್ಲಿಂ ಆಗಿ ಮತಾಂತರಿಸಿದ್ದ. ಈ ವೇಳೆ, ಮಲಿಕ್ ತಂದೆಯೂ ಬಂದು ತನ್ನ ಮೇಲೆ ಕಿರುಕುಳ ನೀಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೆ, ಆತ ಹೇಳಿದಂತೆ ಕೇಳದೇ ಇದ್ದರೆ ಸುಟ್ಟ ಗಾಯಗಳನ್ನು ಮಾಡುತ್ತಿದ್ದ ಎಂದು ಪೊಲೀಸರಿಗೆ ತನಗಾದ ಗಾಯವನ್ನು ತೋರಿಸಿದ್ದಾಳೆ.
ಈಗ ಶ್ರದ್ಧಾ ವಾಲ್ಕರ್ ಹತ್ಯೆಯನ್ನು ಉಲ್ಲೇಖಿಸಿ, ಆಕೆಯನ್ನು 35 ಪೀಸ್ ಮಾಡಿ ಕೊಂದಿದ್ದರು. ನಾನು ನಿನ್ನನ್ನು 70 ಪೀಸ್ ಮಾಡುತ್ತೇನೆ ಎಂದು ಬೆದರಿಸುತ್ತಿದ್ದಾನೆಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
Days after the gruesome murder of Shradhha Walkar by her live-in partner Aaftab Amin Poonawala, a man in Maharahstra has used the incident to threaten his live-in partner. A woman from Maharashtra’s Dhule filed a police complaint that she was harassed by her live-in partner Arshad Salim Malik, who threatened her that she would be cut into 70 pieces if she went against his wishes.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am