ಬ್ರೇಕಿಂಗ್ ನ್ಯೂಸ್
26-11-22 01:38 pm HK News Desk ಕ್ರೈಂ
ಬೇಗುಸರಾಯ್ ನ.26: ನಿಲ್ಲಿಸಿದ್ದ ರೈಲು ಇಂಜಿನ್ ಬಿಡಿ ಭಾಗಗಳನ್ನು ಕದಿಯಲು ಕಳ್ಳರು ಹಳಿಯ ಅಡಿಭಾಗದಿಂದಲೇ ಸುರಂಗ ಕೊರೆದ ಘಟನೆ ಬಿಹಾರದ ಬೇಗುಸರಾಯ್ನಲ್ಲಿ ನಡೆದಿದೆ.
ಬಿಹಾರದ ಬೇಗುಸರಾಯ್ ಜಿಲ್ಲೆಯ ಗರ್ಹರಾ ರೈಲ್ವೇ ಯಾರ್ಡ್ಗೆ ಕಳ್ಳರ ಗುಂಪೊಂದು ಸುರಂಗ ಕೊರೆದು ರಿಪೇರಿಗಾಗಿ ಯಾರ್ಡ್ನಲ್ಲಿ ಇರಿಸಲಾಗಿದ್ದ ರೈಲಿನ ಎಂಜಿನ್ ಅನ್ನು ಭಾಗಶಃ ಕದ್ದಿದ್ದಾರೆ. ರೈಲ್ವೇ ಯಾರ್ಡ್ಗೆ ದುರಸ್ತಿಗಾಗಿ ಇರಿಸಲಾಗಿದ್ದ ರೈಲು ಎಂಜಿನ್ ಕಳ್ಳತನಕ್ಕೆ ಸಂಬಂಧಿಸಿ ಸ್ಥಳೀಯ ಬರೌನಿ ಪೊಲೀಸ್ ಠಾಣೆಯಲ್ಲಿ ಕಳೆದ ವಾರ ಪ್ರಕರಣ ದಾಖಲಾಗಿತ್ತು. ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ, ರೈಲ್ವೇ ಯಾರ್ಡ್ಗೆ ಸುರಂಗ ಕೊರೆದು, ಅದರ ಮೂಲಕ ಇಂಜಿನ್ ಬಿಡಿ ಭಾಗಗಳು ಮತ್ತು ಇತರ ವಸ್ತುಗಳನ್ನು ಗೋಣಿಚೀಲಗಳಲ್ಲಿ ಸಾಗಿಸುತ್ತಿದ್ದಾಗಿ ತಿಳಿಸಿದ್ದಾರೆ.
ಬಂಧಿತರು ವಿಚಾರಣೆಯಲ್ಲಿ ಗುಜರಿ ಗೋಡೌನ್ ಬಗ್ಗೆಯೂ ತಿಳಿಸಿದ್ದು, ಮುಜಫರ್ಪುರ ಜಿಲ್ಲೆಯ ಪ್ರಭಾತ್ ನಗರ ಪ್ರದೇಶದಲ್ಲಿನ ಸ್ಕ್ರ್ಯಾಪ್ ಗೋಡೌನ್ನಲ್ಲಿ ಶೋಧ ನಡೆಸಲಾಗಿದೆ. ಅಲ್ಲಿ ಪೊಲೀಸರು ರೈಲುಗಳಲ್ಲಿ ಬಳಸುವ ಉಪಕರಣಗಳನ್ನು ಹೊಂದಿದ್ದ 13 ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ವಸ್ತುಗಳಲ್ಲಿ ಎಂಜಿನ್ ಭಾಗಗಳು, ವಿಂಟೇಜ್ ರೈಲು ಎಂಜಿನ್ಗಳ ಚಕ್ರಗಳು ಮತ್ತು ಭಾರವಾದ ಕಬ್ಬಿಣದ ಬಿಡಿಭಾಗಗಳು ಸೇರಿವೆ. ಸದ್ಯ ಸ್ಕ್ರ್ಯಾಪ್ ಗೋಡೌನ್ ಮಾಲೀಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ಈ ಗ್ಯಾಂಗ್ ಸ್ಟೀಲ್ ಬ್ರಿಡ್ಜ್ಗಳನ್ನು ಬಿಚ್ಚುವುದು ಮತ್ತು ಅವುಗಳ ಭಾಗಗಳನ್ನು ಕದಿಯುವಲ್ಲಿ ಸಹ ತೊಡಗಿಸಿಕೊಂಡಿದೆ. ಕಳೆದ ವರ್ಷ, ಸಮಸ್ತಿಪುರ ಲೋಕೋ ಡೀಸೆಲ್ ಶೆಡ್ನ ರೈಲ್ವೇ ಇಂಜಿನಿಯರ್ ಒಬ್ಬರನ್ನು ಪುರ್ನಿಯಾ ನ್ಯಾಯಾಲಯದ ಆವರಣದಲ್ಲಿ ಇರಿಸಲಾಗಿದ್ದ ಹಳೆಯ ಸ್ಟೀಮ್ ಎಂಜಿನ್ ಅನ್ನು ಮಾರಾಟ ಮಾಡಿದ ಆರೋಪದಲ್ಲಿ ಅಮಾನತು ಮಾಡಲಾಗಿತ್ತು.
A group of unidentified men dug a tunnel to the Garhara railway yard in Bihar's Begusarai district and stole an entire diesel engine of a train, which was kept at the yard for repairs, part by part, said police on Friday. P S Dubey, the inspector of Railway Protection Force (RPF), Muzaffarpur, said three people were arrested after a case was registered last week at the Barauni police station for the theft of the diesel engine brought for repairs to the Garhara yard.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am