ಬ್ರೇಕಿಂಗ್ ನ್ಯೂಸ್
27-10-22 04:18 pm Mangalore Correspondent ಕ್ರೈಂ
ಮಂಗಳೂರು, ಅ.27 : ಉತ್ತರ ಪ್ರದೇಶದ ಯೋಗಿ ಸರ್ಕಾರದ ಮಾದರಿಯಲ್ಲೇ ಗೋಹತ್ಯೆ ನಡೆಸುವ ಅಕ್ರಮ ದಂಧೆಕೋರರಿಗೆ ರಾಜ್ಯದಲ್ಲೂ ಆಸ್ತಿ ಮುಟ್ಟುಗೋಲಿನ ಶಾಕ್ ನೀಡಲಾಗಿದೆ.
ಗೋ ಹಂತಕರ ವಿರುದ್ಧ ರಾಜ್ಯದಲ್ಲೇ ಮೊದಲ ಬಾರಿಗೆ ಕಠಿಣ ಕ್ರಮಕ್ಕೆ ಸರಕಾರ ಮುಂದಾಗಿದ್ದು, ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಮೂರು ಕಡೆಗಳಲ್ಲಿ ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದ ಕಟ್ಟಡಗಳನ್ನು ಕಂದಾಯ ಇಲಾಖೆ ಕಾನೂನು ಪ್ರಕಾರ ಮುಟ್ಟುಗೋಲು ಹಾಕಿಕೊಂಡಿದೆ.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಂ 8 (4) ಅಡಿಯಲ್ಲಿ ಮುಟ್ಟುಗೋಲು ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಕಸಾಯಿಖಾನೆ ನಡೆಯುತ್ತಿದ್ದ ಕಟ್ಟಡ, ಅಲ್ಲಿನ ಜಾಗಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಜಾಗ ವಶಕ್ಕೆ ಪಡೆದಿದ್ದಲ್ಲದೆ, ಸರ್ಕಾರದ ಹೆಸರಲ್ಲಿ ಆರ್.ಟಿ.ಸಿ ನೋಂದಣಿ ಮಾಡಲಾಗಿದೆ. ಕಾಟಿಪಳ್ಳ, ಅರ್ಕುಳ ಮತ್ತು ಗಂಜಿಮಠದಲ್ಲಿ ಈ ರೀತಿಯ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ನಡೆಸಲಾಗಿದೆ.

ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಸೂಚನೆಯಂತೆ ಸಹಾಯಕ ಆಯುಕ್ತ ಮದನ್ ಮೋಹನ್ ಕ್ರಮ ಜರುಗಿಸಿದ್ದಾರೆ. ಪೊಲೀಸ್ ಠಾಣೆಗಳ ವರದಿ ಆಧರಿಸಿ ಜಾಗ ಮಾರಾಟ, ಬಾಡಿಗೆ ಹಾಗೂ ಅಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಮುಟ್ಟುಗೋಲು ಹಾಕಲಾಗಿದೆ. ಎರಡು ವರ್ಷಗಳ ಹಿಂದೆ ಕಾಯ್ದೆ ಜಾರಿ ಬೆನ್ನಲ್ಲೇ ಪರಿಣಾಮಕಾರಿ ಅನುಷ್ಠಾನಕ್ಕೆ ಶಾಸಕ ಭರತ್ ಶೆಟ್ಟಿ ಸೂಚಿಸಿದ್ದರು.

ಶಾಸಕರ ಸೂಚನೆ ಬೆನ್ನಲ್ಲೇ ಫೀಲ್ಡಿಗಿಳಿದಿದ್ದ ಪೊಲೀಸರು, ಮಂಗಳೂರು ಉತ್ತರ ಕ್ಷೇತ್ರದ ವಿವಿಧ ಕಡೆ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ನಡೆಸಿ ಜಾಗ ಮತ್ತು ವಸ್ತುಗಳನ್ನು ವಶಕ್ಕೆ ಪಡೆದು ಮಂಗಳೂರು ವಿಭಾಗದ ಸಹಾಯಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಗಂಜಿಮಠದ ಯೂಸೂಫ್, ಅರ್ಕುಳದ ಬಾತೀಶ್, ಕಾಟಿಪಳ್ಳದ ಹಕೀಂ ಎಂಬವರಿಗೆ ಸೇರಿದ ಜಾಗ ಮುಟ್ಟುಗೋಲು ಹಾಕಲಾಗಿದ್ದು, ಬಜಪೆ, ಸುರತ್ಕಲ್ ಹಾಗೂ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಅಕ್ರಮ ಕಸಾಯಿಖಾನೆಗಳು ಇದ್ದವು.
Three slaughterhouses seized at MLA Bharath Shetty behest in Mangalore at Surathkal. The revenue department has seized three abattoirs in Mangaluru north constituency under the Karnataka Prevention of Slaughter and Preservation of Cattle Act 2020, Act 8 (4). The government has taken into possession slaughterhouses at Katipalla, Arkula and Ganjimath run illegally.
21-06-26 02:18 pm
HK News Staffer
ಧರ್ಮಸ್ಥಳ ಮೇಲಾಣೆ ಅಡ್ಡ ಮತದಾನ ಮಾಡಿಲ್ಲ, ಮೋದಿ ಬಂದಿ...
20-06-26 06:40 pm
ಬಿಡದಿ ಟೌನ್ ಶಿಪ್ ನೆಪದಲ್ಲಿ 750 ರೈತ ಕುಟುಂಬಗಳು ಬೀ...
20-06-26 01:33 pm
ಪರಿಷತ್ತಿಗೆ ಅಡ್ಡ ಮತದಾನ ಮಾಡ್ತಾರೆಂದು ಮೊದಲೇ ಗೊತ್ತ...
19-06-26 04:18 pm
ರೈ ಅವರೇ ಧನ ಸಹಾಯ ಮಾಡಿ ಬುರುಡೆ ಗ್ಯಾಂಗ್ ನಡೆಸುತ್ತ...
18-06-26 09:57 pm
18-06-26 07:17 pm
HK News Staffer
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
21-06-26 08:59 pm
HK News Staffer
Yekkur, Mangalore Accident:ಎಕ್ಕೂರು ಹೆದ್ದಾರಿಯಲ...
21-06-26 01:13 pm
ಮೈಸೂರು ದಸರಾಗೆ ಕಂಬಳ ; ತಯಾರಿ ನಡೆಸಲು ಶಾಸಕ ಅಶೋಕ್...
20-06-26 10:25 pm
ಹಳೆ ಬಂದರು - ಲಕ್ಷದ್ವೀಪ ನಡುವೆ ಬಹುನಿರೀಕ್ಷಿತ ಜೆಟ್...
20-06-26 04:21 pm
ಕರಾವಳಿಯಲ್ಲೇ ಕ್ಯಾಬಿನೆಟ್ ಸಭೆ ; ಪ್ರವಾಸೋದ್ಯಮ ಅಭಿ...
19-06-26 09:05 pm
20-06-26 09:13 pm
HK News Staffer
ಸೂಲಿಬೆಲೆಯಲ್ಲಿ ಭೀಕರ ಅಪಘಾತ ; ಬಿಎಂಟಿಸಿ ಬಸ್ ಡ್ರೈ...
20-06-26 04:43 pm
ಬೆಂಗಳೂರಿನಲ್ಲಿ ಕಳ್ಳ ಪೊಲೀಸ್ ; ಕೇರಳದ ಉದ್ಯಮಿಗಳನ್ನ...
19-06-26 09:07 pm
ಮೊಬೈಲ್ ಕದ್ದು ಓಡುತ್ತಿದ್ದಾಗಲೇ ಕುಸಿದು ಬಿದ್ದು ಕಳ್...
19-06-26 08:30 pm
ಕೋಡಿ ಬೀಚ್ನಲ್ಲಿ ಬೆಂಗಳೂರು ಮೂಲದ ಯುವಕ ಸಮುದ್ರ ಪಾಲ...
19-06-26 05:47 pm