ಬ್ರೇಕಿಂಗ್ ನ್ಯೂಸ್
22-10-22 11:28 am Mangalore Correspondent ಕ್ರೈಂ
ಪುತ್ತೂರು, ಅ.21: ಬೆಡ್ ಶೀಟ್ ಮಾರಾಟದ ನೆಪದಲ್ಲಿ ಮನೆಗೆ ಬಂದಿದ್ದ ಇಬ್ಬರು ಯುವಕರು ಮಹಿಳೆಯ ಜೊತೆ ಸಲುಗೆ ಮಾತನಾಡಿದ್ದಲ್ಲದೆ, ಜೊತೆಗೆ ಮಲಗಲು ಅವಕಾಶ ನೀಡಿದರೆ ಪುಕ್ಕಟೆಯಾಗಿ ಬೆಡ್ ಶೀಟ್ ಕೊಡುತ್ತೇವೆಂದು ಹೇಳಿ, ಮಾನಭಂಗಕ್ಕೆ ಯತ್ನಿಸಿದ ಘಟನೆ ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದ ಕಾಯರ್ ಮನೆ ಎಂಬಲ್ಲಿ ನಡೆದಿದೆ.
ನೀಲಿ ಬಣ್ಣದ ಕಾರಿನಲ್ಲಿ ಬಂದಿದ್ದ ರಫೀಕ್ ಮತ್ತು ರಮಿಯುದ್ದೀನ್ ಎಂಬ ಯುವಕರು ಈ ಕೃತ್ಯ ಎಸಗಿದ್ದಾರೆ ಎಂದು ಮಹಿಳೆ ಕಡಬ ಠಾಣೆಯಲ್ಲಿ ದೂರು ನೀಡಿದ್ದಾರೆ. ಬೆಡ್ ಶೀಟ್ ರೇಟ್ ಹೇಳುವಂತೆ ಹೇಳಿದ ಮಹಿಳೆಯರಿಗೆ, ಬೆಡ್ ಶೀಟ್ ನಿಮಗೆ ಕಡಿಮೆ ದರಕ್ಕೆ ಕೊಡುತ್ತೇವೆ ಎನ್ನುತ್ತಾ ಮನೆಯೊಳಗೆ ಬಂದಿದ್ದಾರೆ. ಬೆಡ್ ಶೀಟ್ ರೇಟ್ ಹೇಳದೆ, ನಿಮ್ಮಲ್ಲಿ ಹಣ ಇಲ್ಲದಿದ್ದರೆ ಪರ್ವಾಗಿಲ್ಲ. ನಮ್ಮ ಜೊತೆ ಮಲಗಲು ಅವಕಾಶ ನೀಡಿದರೆ ಬೆಟ್ ಶೀಟ್ ಫ್ರೀ ಕೊಡುತ್ತೇವೆ. ಜೊತೆಗೆ ಒಂದಷ್ಟು ಹಣವನ್ನೂ ಕೊಡುತ್ತೇವೆ ಎಂದು ಪುಸಲಾಯಿಸಿದ್ದಾರೆ. ನೀವು ಮನೆಯಿಂದ ಹೋಗಿ ಎಂದು ಮಹಿಳೆಯರು ಬೈದಾಗ, ಕೈಯನ್ನು ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆಂದು ದೂರಲಾಗಿದೆ. ಬಳಿಕ ಮಹಿಳೆ ಜೋರು ಬೊಬ್ಬೆ ಹೊಡೆದಾಗ ಅವರು ಓಡಿ ಹೋಗಿದ್ದಾರೆ. ಘಟನೆ ಸಂಬಂಧಿಸಿ ಎಸ್ಸಿ-ಎಸ್ಟಿ ಏಕ್ಟ್ ಅಡಿ ಪ್ರಕರಣ ದಾಖಲಾಗಿದೆ.
ಇದೇ ವಿಚಾರದಲ್ಲಿ ಬೆಳ್ಳಾರೆ ಠಾಣೆಯಲ್ಲಿ ಪ್ರತಿ ದೂರು ದಾಖಲಾಗಿದೆ. ರಫೀಕ್ ಮತ್ತು ರಮಿಯುದ್ದೀನ್ ದೋಲ್ಪಾಡಿಯ ಘಟನೆಯ ಬಳಿಕ ಕಾಣಿಯೂರು ಗ್ರಾಮಕ್ಕೆ ತಲುಪಿದಾಗ ಕೆಲವು ಯುವಕರು ಸೇರಿ ಹಲ್ಲೆ ನಡೆಸಿದ್ದಾರೆ. ರಸ್ತೆಗೆ ಪಿಕಪ್ ಅಡ್ಡ ಇಟ್ಟು ಯುವಕರಿದ್ದ ಕಾರನ್ನು ನಿಲ್ಲಿಸಿ, ಅವರಿಗೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು. ಕಾರು ಜಖಂಗೊಳಿಸಿ, ಬೆಡ್ ಶೀಟ್ ಗಳನ್ನು ಹಾಳುಗೆಡವಿದ್ದಾರೆಂದು ರಫೀಕ್ ಮತ್ತು ರಮಿಯುದ್ದೀನ್ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.
Mangalore Sexual assault in the name of selling blankets, two held at Kadaba.
12-08-26 06:57 pm
HK News Staffer
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ ; ಹೊಸ ಕ...
10-08-26 07:54 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 11:06 pm
HK News Desk
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
12-08-26 11:18 pm
HK News Staffer
Panambur Robbery, Update, Mangalore: ಪಣಂಬೂರು...
12-08-26 07:47 pm
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm