ಬ್ರೇಕಿಂಗ್ ನ್ಯೂಸ್
10-05-22 07:50 pm Mangalore Correspondent ಕರಾವಳಿ
ಮಂಗಳೂರು, ಮೇ 10: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಂದ್ರೆ ಕಾರ್ಯಕರ್ತರ ಕಾರಣದಿಂದಾಗಿ ಬಿಜೆಪಿ ಪಾಲಿಗೆ ಶಕ್ತಿಕೇಂದ್ರ, ಭದ್ರಕೋಟೆ ಅಂತಲೇ ಹೆಸರಾದಂಥವು. ಆದರೆ, ಆಡಳಿತಾರೂಢ ಬಿಜೆಪಿ ನಾಯಕರು ಚುನಾವಣೆ ಹಿನ್ನೆಲೆಯಲ್ಲಿ ಇತರ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುತ್ತಿರುವುದಕ್ಕೆ ಈ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರಿಂದಲೇ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪಕ್ಷಕ್ಕಾಗಿ ದುಡಿಯುವ ಪ್ರಾಮಾಣಿಕ ಕಾರ್ಯಕರ್ತರು ಬಿಜೆಪಿ ನಾಯಕರ ಹೇಳಿಕೆ, ವರ್ತನೆಯಿಂದ ನಿರಾಸೆಗೊಂಡಿದ್ದು ಕಾಂಗ್ರೆಸ್, ಜೆಡಿಎಸ್ ನಾಯಕರ ಪಕ್ಷಾಂತರ ಪರ್ವವನ್ನು ಟೀಕಿಸಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಪಕ್ಷ ಅಧಿಕಾರ ಹಿಡಿಯಲು ಆಪರೇಶನ್ ಕಮಲ ಅನಿವಾರ್ಯ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆಯನ್ನೇ ಮುಂದಿಟ್ಟು ಕಾರ್ಯಕರ್ತರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಹಾಗಾದ್ರೆ ನಾವು ಇಷ್ಟು ವರ್ಷಗಳಿಂದ ಕೆಲಸ ಮಾಡಿದ್ದು, ಸಂಘಟನೆಗಾಗಿ ದುಡಿದಿದ್ದು ವೇಸ್ಟ್ ಆಯ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಕಾರ್ಯಕರ್ತರ ತಪ್ಪಿನಿಂದಾಗಿ ಪಕ್ಷ ಅಧಿಕಾರದಿಂದ ದೂರ ಉಳಿದಿದ್ದಾ ಅಥವಾ ನಿಮ್ಮಂತಹ ಸೋಕಾಲ್ಡ್ ನಾಯಕರಿಂದ ಪಕ್ಷಕ್ಕೆ ಈ ಗತಿ ಬಂದಿದ್ದಾ ಎಂಬುದನ್ನು ಎದೆ ತಟ್ಟಿಕೊಂಡು ಕೇಳಿ ಎಂದು ಫೇಸ್ಬುಕ್ ನಲ್ಲಿ ಬರೆದಿದ್ದಾರೆ.

ಕರ್ನಾಟಕ ಬಿಜೆಪಿ ಬಗ್ಗೆ ಅಸಹ್ಯ ಹುಟ್ಟುತ್ತಿದೆ
ಮುಂಬರುವ ಚುನಾವಣೆಯಲ್ಲಿ ಅಧಿಕಾರದ ಆಸೆಯಿಂದಲೇ ತಮ್ಮ ಪಕ್ಷ ಬಿಟ್ಟು ಬರುವವರನ್ನು ಸೇರಿಸಿಕೊಳ್ಳುತ್ತಿರುವ ಕರ್ನಾಟಕ ಬಿಜೆಪಿ ಬಗ್ಗೆ ಯಾಕೋ ಅಸಹ್ಯ ಹುಟ್ಟುತ್ತಿದೆ. ತಮಗೆ ಮತ ಹಾಕಿದ ಜನರ ವಿಶ್ವಾಸವನ್ನು ಉಳಿಸಿಕೊಳ್ಳಲು ವಿಫಲರಾದಾಗ ಮಾತ್ರ ಇಂತಹ ಕೆಲಸಗಳಿಗೆ ನಾಯಕರು ಕೈಹಾಕುತ್ತಾರೆ ಎಂದು ಕಾರ್ಯಕರ್ತರು ಜಾಡಿಸಿದ್ದಾರೆ. ಮುಂದಿನ ಬಾರಿ ಬಿಜೆಪಿ ಪಕ್ಷಾಂತರಿಗೆ ಟಿಕೆಟ್ ಕೊಟ್ಟಲ್ಲಿ ನಾವು ಮತದಾನ ಮಾಡಲ್ಲ ಎಂದು ಕೆಲವರು ಹೇಳಿದರೆ, ನಿಷ್ಠರನ್ನು ಕಡೆಗಣಿಸಿ ಇನ್ನೊಂದು ಪಕ್ಷವನ್ನು ಮುಳುಗಿಸಿ ಬರೋರಿಗೆ ಮಣೆ ಹಾಕಿದರೆ ಇಲ್ಲಿಯೂ ಮುಳುಗುವುದೇ ಗತಿ ಎಂದು ಮತ್ತೊಬ್ಬರು ಬರೆದಿದ್ದಾರೆ.
ಈಗ ಇರೋದು ಬಿಜೆಪಿ ಬೆಂಬಲಿತ ಜೆಡಿಎಸ್ ಸರಕಾರ. ದರಿದ್ರ ಪಕ್ಷಾಂತರಿಗಳನ್ನು ಓಲೈಕೆ ಮಾಡಿಯೇ ಈ ಗತಿ ಬಂದಿರೋದು. ಯಾವುದೇ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಎದೆಗಾರಿಕೆ ಇಲ್ಲದವರು ಎಂದು ಕೆಲವರು ಟೀಕಿಸಿದ್ದಾರೆ. ಪಕ್ಷಾಂತರಿಗಳನ್ನು ಕರೆದುಕೊಂಡು ಬಂದರೆ, ಇಲ್ಲಿಯ ವರೆಗೆ ದುಡಿದ ಕಾರ್ಯಕರ್ತರ ಗತಿಯೇನು. ಮುಂದೆ ಹಿಂದು ಪರವಾಗಿರುವ ಯೋಗಿಯಂಥವರು ಬೇರೆಯದೇ ಹಿಂದುತ್ವದ ಪಕ್ಷ ಮಾಡಬೇಕು ಎಂದು ಒಂದಷ್ಟು ಮಂದಿ ಬರೆದಿದ್ದಾರೆ.

ಬೆರಕೆ ಜನರ ಪಕ್ಷವೆಂದು ಹೆಸರಿಟ್ಟುಬಿಡಿ
ಕೇವಲ ಅಧಿಕಾರ ಹಿಡಿಯಬೇಕೆಂಬ ಕಾರಣಕ್ಕಾಗಿ ಬಿಜೆಪಿ ಬಗ್ಗೆ ಗಂಧಗಾಳಿ ಗೊತ್ತಿಲ್ಲದ, ಹಾದಿ ಬೀದಿಯಲ್ಲಿರುವ ಬೆರಕೆಗಳನ್ನು ಸೇರಿಸಿಕೊಂಡು ನಿಷ್ಠಾವಂತ ಕಾರ್ಯಕರ್ತರನ್ನು, ನಾಯಕರನ್ನು ಬದಿಗೊತ್ತಿ ಭಾಜಪ ಸತ್ವಹೀನವಾಗಿದೆ. ಭಾಜಪ ಬದಲು ಬೆರಕೆ ಜನರ ಪಕ್ಷ (ಬಿಜೆಪಿ) ಎಂದು ಹೆಸರಿಟ್ಟುಬಿಡಿ. ಮೂಲ ಭಾಜಪವನ್ನು ಸರ್ವನಾಶ ಮಾಡುತ್ತಿದ್ದೀರಿ ಎಂದು ತೀವ್ರವಾಗಿ ಖಂಡಿಸಿದ್ದಾರೆ. ಅನ್ಯಪಕ್ಷದ ದೊಡ್ಡ ಸೂಟ್ ಕೇಸ್ ಭರಿತ ನಾಯಕರೇ ಬಿಜೆಪಿ ನಾಯಕರ ಶಕ್ತಿ ಎಂದು ಮತ್ತೊಬ್ಬರು ತಿವಿದಿದ್ದಾರೆ. ಬೇರೆ ಪಕ್ಷದಿಂದ ಜಿಗಿದು ಬಂದವರಿಗೆ ಮಣೆ ಹಾಕಿ ಗೆಲ್ಲಿಸುವ ಪ್ರವೃತ್ತಿಯನ್ನು ಬಿಟ್ಟರೆ ಮಾತ್ರ ಮುಂದೆ ಗೆದ್ದು ಆಡಳಿತ ಮಾಡಬಹುದು ಎಂದು ಇನ್ನೊಬ್ಬರು ಹಿತವಚನ ಹೇಳಿದ್ದಾರೆ.

ಸತ್ಯಜಿತ್ ಗೆ ಮಾಡಿದಂತೇ ಮಾಡುತ್ತೀರಾ..?
ಇದರ ಜೊತೆಗೆ, ಉಡುಪಿಯಲ್ಲಿ ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಬಗ್ಗೆಯೂ ಟೀಕಿಸಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ಬಗ್ಗೆ ನಮೋ ಎಂದರೆ ನಮಗೆ ಮೋಸ ಎಂಬುದು ಜನರಿಗೆ ಅರ್ಥವಾಗುತ್ತಿದೆ ಎಂಬ ಪ್ರಮೋದ್ ಮಧ್ವರಾಜ್ ಹೇಳಿಕೆಯ ತುಣುಕನ್ನು ಮತ್ತೆ ಹರಿಯಬಿಟ್ಟಿದ್ದಾರೆ. ಕಾಪು ಕ್ಷೇತ್ರಕ್ಕೆ ಮಧ್ವರಾಜ್ ಬರುತ್ತಾರೆಂಬ ವಿಚಾರದಲ್ಲಿ ಕಾರ್ಯಕರ್ತರು ಚರ್ಚೆ ನಡೆಸಿದ್ದು, ಈಗಾಗಲೇ ಒಂದು ಡಜನ್ ಮಂದಿ ಟಿಕೆಟಿಗಾಗಿ ಟವೆಲ್ ಹಾಕಿದ್ದಾರೆ. ಈಗ ಇನ್ನೊಂದು ಎಂಟ್ರಿಯಾಗಿದೆ ಎಂದು ಟೀಕಿಸಿದ್ದಾರೆ. ಸುರತ್ಕಲ್ ನಲ್ಲಿ ಬೇರೆ ಪಕ್ಷದವರನ್ನು ತಂದು ಸತ್ಯಜಿತ್ ಸುರತ್ಕಲ್ ಗೆ ಅನ್ಯಾಯ ಮಾಡಿದಂತೆ ಉಡುಪಿಯಲ್ಲಿ ಯಶ್ಪಾಲ್ ಸುವರ್ಣರಿಗೆ ಅನ್ಯಾಯ ಮಾಡದಿದ್ದರೆ ಸಾಕು ಎಂದೂ ಕೆಲವರು ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಆಮ್ ಆದ್ಮಿಯತ್ತ ಬಿಜೆಪಿ ಕಾರ್ಯಕರ್ತರು !
ಬಿಜೆಪಿ ನಾಯಕರು ಕೋಲಾರ, ಮೈಸೂರು ಸೇರಿದಂತೆ ಪಕ್ಷ ಬಲಹೀನ ಇರುವೆಡೆ ಬೇರೆ ಪಕ್ಷಗಳ ನಾಯಕರನ್ನು ಸೆಳೆಯುತ್ತಿದ್ದಾರೆ. ಆದರೆ, ಆ ಭಾಗದಲ್ಲಿಯೂ ಬಿಜೆಪಿ ನಾಯಕರ ಈ ನಡೆಗೆ ಆಕ್ಷೇಪ ಕೇಳಿಬಂದಿದೆ. ಬಿಜೆಪಿ ಮೊದಲಿನಿಂದಲೂ ಕಾರ್ಯಕರ್ತರ ನೆಲೆಯಿಂದಲೇ ಗಟ್ಟಿ ತಳಹದಿ ಹೊಂದಿರುವುದರಿಂದ ಕಾರ್ಯಕರ್ತರು ಸಹಜವಾಗಿಯೇ ನಾಯಕರ ಪಕ್ಷಾಂತರಿ ನಡೆಗಳನ್ನು ಬಹಿರಂಗವಾಗಿಯೇ ಟೀಕಿಸತೊಡಗಿದ್ದಾರೆ. ಕೆಲವು ಭಾಗದಲ್ಲಿ ಬಿಜೆಪಿ ನಾಯಕರ ವರ್ತನೆಗಳು, ಹಗರಣಗಳ ಕಾರಣದಿಂದ ನಿಷ್ಠಾವಂತ ಕಾರ್ಯಕರ್ತರು ಭ್ರಮನಿರಸನಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯದಲ್ಲಿ ಹಲವಾರು ಬಿಜೆಪಿ ಮಂದಿ ಆಮ್ ಆದ್ಮಿ ಪಕ್ಷದತ್ತ ಹೊರಳಿದ್ದಾರೆ. ಈ ರೀತಿಯ ಧ್ರುವೀಕರಣ ಭವಿಷ್ಯದಲ್ಲಿ ಬಿಜೆಪಿಗೇ ತೊಡರುಗಾಲಾಗುವ ಸಾಧ್ಯತೆ ಹೆಚ್ಚಿದೆ.
The decision of the BJP top brass to invite leaders from other political parties as a strategy to gain upper hand in the 2023 Assembly elections has upset the loyal party men in Karnataka. Sources in the party said that within the party loyal workers are expressing their dissatisfaction over the preference being given to leaders from other parties and they are now questioning the seniors.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm