ಬ್ರೇಕಿಂಗ್ ನ್ಯೂಸ್
09-05-22 12:38 pm Udupi Correspondent ಕರಾವಳಿ
ಉಡುಪಿ, ಮೇ 9: ಮಲ್ಪೆ ಬೀಚ್ನಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ಅಳವಡಿಸಿದ್ದ ತೇಲುವ ಸೇತುವೆ ಉದ್ಘಾಟನೆಯಾದ ಎರಡೇ ದಿನಕ್ಕೆ ತುಂಡು ತುಂಡಾಗಿ ನೀರುಪಾಲಾಗಿದೆ.
ಸುಮಾರು 80 ಲಕ್ಷ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದ್ದು ಕಳೆದ ಶುಕ್ರವಾರ ಸಂಜೆ ಲೋಕಾರ್ಪಣೆ ಮಾಡಲಾಗಿತ್ತು. ಆದರೆ ಉದ್ಘಾಟನೆಯಾದ ಮೂರೇ ದಿನಕ್ಕೆ ಸೇತುವೆ ನಡುವಿನಿಂದಲೇ ತುಂಡಾಗಿದ್ದು ಅದರ ರಬ್ಬರ್ ಗಾಲಿಗಳು ಚದುರಿ ಹೋಗಿ ಸಮುದ್ರಪಾಲಾಗಿವೆ. ಅಲ್ಲಿಯೇ ತೀರದುದ್ದಕ್ಕೂ ರಬ್ಬರ ಗಾಲಿಗಳು ಬಿದ್ದುಕೊಂಡಿವೆ.
ಭಾನುವಾರ ಬೆಳಗ್ಗೆಯಿಂದಲೇ ಕಡಲು ಪ್ರಕ್ಷುಬ್ಧವಾಗಿದ್ದರಿಂದ ಜನರಿಗೆ ಸೇತುವೆಯ ಮೇಲೇರಲು ಅವಕಾಶ ನೀಡಿರಲಿಲ್ಲ. ತೇಲುವ ಸೇತುವೆಯನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರೂ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಸೇತುವೆ ಮೇಲೆ ನಡೆದಾಡಲು ಅವಕಾಶ ನೀಡಿರಲಿಲ್ಲ.


100 ಮೀ. ಉದ್ದ, 3.50 ಮೀ. ಅಗಲ ಹೊಂದಿರುವ ಸೇತುವೆಯನ್ನು ರಬ್ಬರ್ ರೀತಿಯ ಬ್ಲಾಕ್ ಗಳಿಂದ ಮಾಡಲಾಗಿದೆ. ಆದರೆ ಅಲೆಗಳ ಹೊಡೆತಕ್ಕೆ ಸಿಲುಕಿ ಸೇತುವೆಗೆ ತೀವ್ರ ಹಾನಿಯಾಗಿದೆ. ಭಾನುವಾರ ರಾತ್ರಿ ಸೇತುವೆ ಚದುರಿ ಹೋಗಿವೆ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ಬೀಚ್ ನಿರ್ವಹಣಾ ಸಿಬಂದಿ ಬಂದು ನೋಡಿದಾಗ, ಸೇತುವೆ ಕೊಚ್ಚಿ ಹೋಗಿರುವುದು ಕಂಡುಬಂದಿದೆ. ಕೇರಳದ ಬೇಪೂರ್ ಬೀಚ್ ಹೊರತುಪಡಿಸಿದರೆ ದೇಶದ ಬೇರೆಲ್ಲೂ ಈ ಮಾದರಿಯ ತೇಲುವ ಸೇತುವೆ ಇಲ್ಲ ಎನ್ನಲಾಗುತ್ತದೆ.
Malpe Floating bridge disconnected due to heavy waves. Dismissing reports over the state’s only floating bridge collapsing at Malpe beach here, lease holder at Malpe beach and proprietor of Dial Mantra, Sudesh Shetty, said that the locks of the bridge of the bridge were disconnected to avoid damage.
29-03-26 10:19 am
HK News Staffer
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
30-03-26 10:31 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಬೂತ್ ; ಶುಲ್ಕ ಕ...
28-03-26 04:06 pm
ನೇಪಾಳದಲ್ಲಿ ಝೆನ್ ಝೀ ಕ್ರಾಂತಿ ನಿಗ್ರಹಿಸಲು ಮುಂದಾಗಿ...
28-03-26 02:58 pm
ಟ್ರಂಪ್ ದಿಢೀರ್ ರಾಜಕೀಯ ಹೆಜ್ಜೆ ; ಯುದ್ಧ ಗಡುವು ಹತ್...
27-03-26 04:07 pm
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
30-03-26 11:13 pm
Mangalore Correspondent
Mangalore Attavar Suicide: ಅತ್ತಾವರದ ಅಪಾರ್ಟ್ಮೆ...
30-03-26 06:09 pm
ಮಂಗಳೂರಿನಲ್ಲಿ ಆಟೋ ಎಲ್ಪಿಜಿ ಗ್ಯಾಸ್ ಅಭಾವ ; ಸ್ಟೇಶನ...
30-03-26 02:06 pm
ಕುಕ್ಕರ್ನಲ್ಲಿ ಐಇಡಿ ಇಟ್ಟು ಸ್ಫೋಟಿಸಿದ್ದೇನೆ, ನಾನು...
29-03-26 11:11 am
ಬೇಸಗೆ ಬಿರು ಬಿಸಿಲ ನಡುವೆ ಕರಾವಳಿಯಲ್ಲಿ ಹಲವೆಡೆ ಮಳೆ...
28-03-26 09:08 pm
30-03-26 07:35 pm
HK News Desk
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm
ಕಾರ್ಕಳದಲ್ಲಿ ಪೊಲೀಸರ ಮೇಲೆ ಕಾರು ಹರಿಸಲು ಯತ್ನ ; ಆರ...
29-03-26 06:03 pm