ಬ್ರೇಕಿಂಗ್ ನ್ಯೂಸ್
18-04-22 04:32 pm Mangalore Correspondent ಕರಾವಳಿ
ಮಂಗಳೂರು, ಎ.18 : ಪ್ರೀತಿಸುತ್ತಿದ್ದ ಹುಡುಗಿ ತನ್ನನ್ನು ಪೀಡಿಸುತ್ತಿದ್ದಾಳೆ, ಆಕೆಯಿಂದ ಬಿಡುಗಡೆ ಕೊಡಿ ಎಂದು ಯುವಕನೊಬ್ಬ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ ಘಟನೆ ಮಂಗಳೂರಿನ ಅಡ್ಯಾರ್ ನಲ್ಲಿ ನಡೆದಿದೆ. ಕೊಡ್ಮಣ್ ಎಂಬಲ್ಲಿನ ನಿವಾಸಿ ಸುಧೀರ್ (32) ಮೊಬೈಲ್ ಟವರ್ ಏರಿದ ಯುವಕ.
ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಎದುರಲ್ಲಿ ಹೆದ್ದಾರಿ ಬದಿಯಲ್ಲೇ ಯುವಕ ಮೊಬೈಲ್ ಟವರ್ ಏರಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಂದು ಸುದ್ದಿ ಹಬ್ಬಿತ್ತು. ಯುವಕ ಟವರ್ ಏರಿದ್ದನ್ನು ನೋಡಿ ಜನರು ಸೇರಿದ್ದು ಸ್ಥಳಕ್ಕೆ ಪೊಲೀಸರು ಕೂಡ ಆಗಮಿಸಿದ್ದಾರೆ. ಬಳಿಕ ಪೊಲೀಸರು ಜೋರು ಮಾಡಿ, ಆತನನ್ನು ಟವರ್ ನಿಂದ ಇಳಿಯಲು ಹೇಳಿದ್ದಾರೆ. ಅಲ್ಲಿಗೆ ಯುವತಿ ಕೂಡ ಬಂದಿದ್ದು ಪೊಲೀಸರು ಮಾತುಕತೆ ನಡೆಸಿದ್ದಾರೆ.
ಆನಂತರ ಯುವಕನ ಹೆತ್ತವರು, ಯುವತಿ ಹೆತ್ತವರು ಸ್ಥಳಕ್ಕೆ ಬಂದಿದ್ದು ಸಾರ್ವಜನಿಕರು ಸೇರಿ ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಇವರಿಬ್ಬರು ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಈ ನಡುವೆ ಯುವತಿಗೆ ಆರೋಗ್ಯ ತೊಂದರೆ ಇದೆಯೆಂದು ಹೇಳಿ ಆಕೆಯನ್ನು ಯುವಕ ನಿರಾಕರಿಸಿದ್ದ. ಆದರೆ ಯುವತಿ ಈ ಬಗ್ಗೆ ಪೊಲೀಸ್ ದೂರು ನೀಡಿದ್ದಳು. ಅಲ್ಲದೆ, ತನ್ನನ್ನೇ ಮದುವೆಯಾಗುವಂತೆ ಪೀಡಿಸಿದ್ದಳು. ಇದರಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದ ಯುವಕ ಮೊಬೈಲ್ ಟವರ್ ಏರಿ ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾನೆ. ಯುವತಿ ಟವರ್ ಬಳಿ ಬಂದು ದೂರು ಹಿಂಪಡೆಯುತ್ತೇನೆಂದು ಹೇಳಿದ ಬಳಿಕ ಯುವಕ ಟವರ್ ನಿಂದ ಇಳಿದಿದ್ದಾನೆ ಎನ್ನಲಾಗುತ್ತಿದೆ.
In an incident like those in the movies, that occurred at Adyar on the outskirts of the city on Monday April 18, a youth who was distraught that his girlfriend had ditched him, scaled a mobile tower and threatened to kill himself. He did not budge to the repeated requests of fire service personnel and police asking him to come down.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am